ಕವಿತೆ: ಹೂವು

ಇಬ್ಬನಿಯಲ್ಲಿ ನೆನೆದು
ತುಂತುರು ಹನಿಗಳಲ್ಲಿ ಮೈತೊಳೆದು
ಕಾದು ವಾಪಸ್ಸು ಹೋದ ಚಂದ್ರ ನಾಚುವಂತೆ ಬಿರಿದು
ಸೂರ್ಯ ತಿರುಗಿ ನೋಡುವಂತೆ ಅರಳಿದೆ ಹೂ ಇಂದು


ತಿಳಿಯದಾಗಿದೆ ನನಗೆ ನಿನ್ನ ದೇವರಿಗರ್ಪಿಸಲೆ
ನಿನ್ನ ಮುಡಿದು ಮೆರೆಸುವ ಸುಂದರಿಗರ್ಪಿಸಲೆ
ನಿಂತಲ್ಲೇ ನಿಂತು ನಿನ್ನ ಚೆಲುವು ನೋಡುತ್ತಿರಲೆ
ನಿನ್ನ ನೋಡುತ್ತಾ ಒಂದಷ್ಟು ಹೊತ್ತು ಜಗತ್ತು ಮರೆತುಬಿಡಲೆ

ಕಾಮೆಂಟ್‌ಗಳು

- Follow us on

- Google Search