ಕಾರ್ಲ್ ಡಂಕರ್ ಎಂಬ ಮನಶಾಸ್ತ್ರಜ್ಞ ೧೯೪೫ ರಲ್ಲಿ ಈ ಪ್ರಯೋಗವನ್ನು ಸಿದ್ಧಪಡಿಸಿದ. ಪ್ರಯೋಗ ಬಹಳ ಸರಳ. ಕೆಳಗೆ ತೋರಿಸಿರುವ ವಸ್ತುಗಳನ್ನು(ಕ್ಯಾಂಡಲ್, ಬೆಂಕಿಪೊಟ್ಟಣ , ಮೊಳೆಗಳು) ವ್ಯಕ್ತಿಗೆ ನೀಡಿ ಕ್ಯಾಂಡಲ್ನ ಮೇಣ ಟೇಬಲ್ಗೆ ಬೀಳದಂತೆ ಕ್ಯಾಂಡಲ್ ಹಚ್ಚಿ ಇಡಬೇಕು. ಮುಂದಕ್ಕೆ ಓದುವ ಮುಂಚೆ ನೀವೇ ಯೋಚಿಸಿ, ಏನು ಮಾಡಬಹುದು ಎಂದು.
![]() |
ಕ್ಯಾಂಡಲ್ ಪ್ರಾಬ್ಲಮ್ - ೧ |
ಬಹಳಷ್ಟು ಜನ ಕ್ಯಾಂಡಲ್ ಬುಡವನ್ನು ಸ್ವಲ್ಪ ಕರಗಿಸಿ ಗೋಡೆಗೆ ಅಂಟಿಸಿದರು, ಇನ್ನು ಕೆಲವರು ಮೊಳೆಯ ಸಹಾಯದಿಂದ ಗೋಡೆಗೆ ಅಂಟಿಸಲು ಪ್ರಯತ್ನಿಸಿದರು. ಆದರೆ ಕೆಲವೇ ಕೆಲವು ಜನ ಮಾತ್ರ ಮೊಳೆಗಳನ್ನು ತುಂಬಿರುವ ಆಯತಾಕಾರದ ಪೊಟ್ಟಣವನ್ನು ಉಪಯೋಗಿಸಿಕೊಂಡರು. (ಉತ್ತರವನ್ನು ಕೊನೆಯಲ್ಲಿ ತೋರಿಸಲಾಗಿದೆ)
ಏಕೆಂದರೆ, ಬಹಳಷ್ಟು ಜನ ಮೊಳೆಗಳನ್ನು ತುಂಬಿರುವ ಪೊಟ್ಟಣವನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುವ ಯೋಚನೆಯನ್ನೇ ಮಾಡುವುದಿಲ್ಲ. ಏಕೆಂದರೆ ಅದನ್ನು ನಿರ್ದಿಷ್ಟವಾಗಿ ಮೊಳೆ ಇಡಲು ಬಳಸಲಾಗಿದೆ. ಇದೇ ಸಮಸ್ಯೆಯನ್ನು ಕೆಳಗೆ ತೋರಿಸಿದಂತೆ ಕೊಟ್ಟಾಗ ಜನರು ಸುಲಭವಾಗಿ ಕ್ಯಾಂಡಲ್ ಮೇಣ ಟೇಬಲ್ ಮೇಲೆ ಬೀಳದಂತೆ ಹೊತ್ತಿಸಿ ಇಟ್ಟರು.
![]() |
ಕ್ಯಾಂಡಲ್ ಪ್ರಾಬ್ಲಮ್ - ೨ |
ಅದೇನು ದೊಡ್ಡ ವಿಷ್ಯಾನ ಅಂತ ನಿಮಗೆ ಅನ್ನಿಸಬಹುದು. ಇದರ ಸ್ವಲ್ಪ ಮುಂದುವರಿದ ಭಾಗವನ್ನು ಗ್ಲುಕ್ಸ್ಬರ್ಗ್ ಎಂಬ ವಿಜ್ಞಾನಿ ೧೯೬೨ ರಲ್ಲಿ ಮಾಡಿದನು. ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಒಂದು ಗುಂಪಿಗೆ ಈ ಸಮಸ್ಯೆಯನ್ನು ಬಿಡಿಸಿದವರಿಗೆ ಬಹುಮಾನ ನೀಡಲಾಗುತ್ತದೆ. ಇನ್ನೊಂದು ಗುಂಪಿಗೆ ಸಮಸ್ಯೆ ಬಿಡಿಸಿದರೆ ಯಾವುದೇ ಬಹುಮಾನವಿಲ್ಲ.
ಒಂದಷ್ಟು ಜನರ ಎರಡು ಗುಂಪು ಮಾಡಲಾಯಿತು. ಮೊದಲನೇ ಬಾರಿಗೆ ಎರಡೂ ಗುಂಪುಗಳಿಗೆ ಕ್ಯಾಂಡಲ್ ಪ್ರಾಬ್ಲಮ್ - ೨ ನೀಡಲಾಯಿತು. ಇದರಲ್ಲಿ ಸಮಸ್ಯೆ ಬಗೆಹರಿಸಿದ್ದಕ್ಕೆ ಬಹುಮಾನ ಪಡೆಯುವ ಗುಂಪಿನ ಜನರು ವೇಗವಾಗಿ ಮುಗಿಸಿದರು.
ಎರಡನೇ ಬಾರಿಗೆ ಬೇರೆ ಜನರ ಎರಡೂ ಗುಂಪುಗಳಿಗೆ ಕ್ಯಾಂಡಲ್ ಪ್ರಾಬ್ಲಮ್ - ೧ ನೀಡಲಾಯಿತು. ಇದರಲ್ಲಿ ಬಹುಮಾನ ಪಡೆಯುವ ಗುಂಪು ಕಳಪೆ ಪ್ರದರ್ಶನ ತೋರಿತು.
ಕ್ರಿಯೇಟಿವ್ ಥಿಂಕಿಂಗ್ ಇರಬೇಕಾದ ಸಾಕಷ್ಟು ಕೆಲಸಗಳಲ್ಲಿ ಇಂದಿಗೂ ಕಂಪನಿಗಳು ಚೆನ್ನಾಗಿ ಕೆಲಸ ಮಾಡಿದರೆ ಪ್ರಮೋಷನ್ ನೀಡುವುದು , ಹೆಚ್ಚಿನ ಸಂಬಳ ನೀಡುವುದು ಮಾಡುತ್ತವೆ. ಆದರೆ ಇವು ಎಂದಿಗೂ ಹೆಚ್ಚು ಬುದ್ಧಿ ಉಪಯೋಗಿಸಬೇಕಾದ ಕೆಲಸಗಳಲ್ಲಿ ಉದ್ಯೋಗಿಗಳನ್ನು ಹುರಿದುಂಬಿಸುವುದಿಲ್ಲ. ಬದಲಿಗೆ ಅದರ ವಿರುದ್ಧವಾದ ಪರಿಣಾಮವನ್ನು ಬೀರುತ್ತವೆ.
![]() |
ಕ್ಯಾಂಡೆಲ್ ಪ್ರಾಬ್ಲಮ್ - ಸರಿಯಾದ ಪರಿಹಾರ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ