ಪುಸ್ತಕ ಪರಿಚಯ : ಚಂದ್ರನ ಚೂರು

 
ಪುಸ್ತಕದ ಮುಖಪುಟ 

ಈ ವಾರದಲ್ಲಿ ನಾನು ಓದಿದ ಪುಸ್ತಕ ಇದು. ಇದನ್ನು ಬರೆದವರು ಕನ್ನಡದ ಹೆಸರಾಂತ ಸಾಹಿತಿಯಾದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ಸೋವಿಯತ್ ರಷ್ಯಾ ಉಪಗ್ರಹ ಉಡಾವಣೆ ಯಶಸ್ವಿಯಾದ ನಂತರ ಅಮೇರಿಕಾ ಕೂಡ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಪಾರ ಪ್ರಮಾಣದ ಹಣ ವ್ಯಯಿಸಲು ಮುಂದಾಗುತ್ತದೆ. ಇದರ ಪರಿಣಾಮವಾಗಿ ಸಾವಿರಾರು  ವಿಜ್ಞಾನಿಗಳು ನಾಸಾ ಸಂಸ್ಥೆಯಲ್ಲಿ ಹಗಲು ರಾತ್ರಿ ಶ್ರಮಿಸಲು ಪ್ರಾರಂಭಿಸುತ್ತಾರೆ. 

ಈ ಸಾಧನೆಯ ಹಾದಿಯಲ್ಲಿ ದಾಖಲಾದ ಅಪೂರ್ವ ಘಟನೆಗಳನ್ನು ಹಾಗು ಮರೆಯಲಾಗದ ವಿಷಯಗಳನ್ನು ತೇಜಸ್ವಿಯರು  ಎಂದಿನಂತೆ ಓದುಗರಿಗೆ  ತಮ್ಮ ಸರಳ ಹಾಗು ವಿಶೇಷ ಶೈಲಿಯಲ್ಲಿ ವಿವರಿಸಿದ್ದಾರೆ. ಅವರದೇ ಒಂದು ಮಾತಿದೆ , "ಮಾನವ ಅನ್ಯ ಗ್ರಹಕ್ಕೆ ಹೋಗಿ ಬಂದಿದ್ದರೂ ಅಂಧಶ್ರದ್ಧೆ ಹಾಗು ಕ್ಷುದ್ರಬುದ್ಧಿ ಬಿಡಲು ಸಾಧ್ಯವಾಗಿಲ್ಲ" ಎಂದು. 


೧೯೫೦ ರ ದಶಕದಲ್ಲಿ ಕೇವಲ ಉಪಗ್ರಹ ಉಡಾವಣೆ ಮಾಡುವುದೇ ಬಹಳಷ್ಟು ಸಾಹಸದ ಕೆಲಸವಾಗಿರುತ್ತದೆ. ಏಕೆಂದರೆ ಈಗಿನಂತೆ ಅಂದಿನ ಕಾಲದಲ್ಲಿ ಕಂಪ್ಯೂಟರ್ಗಳು ಅಭಿವೃದ್ಧಿ ಹೊಂದಿರಲಿಲ್ಲ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಒಂದೇ ಒಂದು ತಪ್ಪು ಹಲವಾರು ದಶಕಗಳ ಕೆಲಸವನ್ನು ಹೇಳ ಹೆಸರಿಲ್ಲದಂತೆ ಮಾಡುತ್ತದೆ. ಇದರಿಂದಾಗಿ ನಾಸಾ ಸಂಸ್ಥೆ ಸಹ ಹತ್ತು ಹಲವಾರು ಬಾರಿ ಸಾಕಷ್ಟು  ಪ್ರಯೋಗಗಳನ್ನು ಮಾಡಿತು. 


ನಾನು ಸಮಯ ಸಿಕ್ಕಾಗ ಟಿವಿ ಸೀರೀಸ್ ನೋಡುತ್ತೇನೆ. ಹೀಗೆಯೇ ಹಿಂದೆ Conspiracy (Netflix) ಎನ್ನುವ ಡಾಕ್ಯುಮೆಂಟರಿಯ ಹಲವು ಎಪಿಸೋಡ್ ನೋಡಿದ್ದೆ. ಅದರಲ್ಲಿ ಒಂಭತ್ತನೇ ಎಪಿಸೋಡ್ ಆದ "Faking the moon landing" ನಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಅವರಿಗೆ ಒಬ್ಬ ವ್ಯಕ್ತಿ ಮೂರು ಬೈಬಲ್ ಮೇಲೆ ಪ್ರಮಾಣ ಮಾಡಿ ಚಂದ್ರನ ಮೇಲೆ ಹೋಗಿದ್ದೆ ಎಂದು ಹೇಳುವಂತೆ ಕೇಳಿದಾಗ ಅವರು ಮಾಡುವುದಿಲ್ಲ. ಇದನ್ನು ನೋಡಿದಾಗ ನನಗೆ ಬಹಳ ಆಶ್ಚರ್ಯ ಆಗಿತ್ತು. ತನ್ನ ಸಾಧನೆಯನ್ನು ಎಲ್ಲರೊಡನೆ ಹಂಚಿಕೊಳ್ಳುವ ಈತ ಬೈಬಲ್ ಮೇಲೆ ಪ್ರಮಾಣ ಮಾಡಲು ಹೆದರುವಂಥದ್ದು ಏನಿದೆ ಎಂಬುದಾಗಿ. ಆ ಕ್ಲಿಪ್ ಕೆಳಗೆ ಹಾಕಿದ್ದೀನಿ ನೋಡಿ. 
                                                  
                                          


Video Credits: NETFLIX 
Disclaimer: I do not own this clip and its being used under fair use policy for the purpose of education and review.

ತೇಜಸ್ವಿಯವರ ಹಲವಾರು ನುಡಿಮುತ್ತುಗಳನ್ನು ಸೇರಿಸಿ ನಾನು ಮಾಡಿರುವ ಮೂರೂ ವಿಡಿಯೋಗಳು YouTube ಅಲ್ಲಿ ಇವೆ. ನೋಡುವ ಮನಸ್ಸಾದರೆ ನೋಡಿ. ತಮ್ಮ ಅಭಿಪ್ರಾಯ ಹಾಗು ಅನಿಸಿಕೆಗಳನ್ನೂ ತಿಳಿಸಿ ಕಾಮೆಂಟ್ ಮಾಡುವ ಮೂಲಕ. 

ಪರಿಸರದ ನುಡಿಗಳು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಪರಿಸರದ ನುಡಿಗಳು- ಕೆ.ಪಿ.ಪೂರ್ಣಚಂದ್ರ ತೇಜಸ್ವಿ- 2


    Quotes of K P Poornachandra Tejasvi


ಕಾಮೆಂಟ್‌ಗಳು

- Follow us on

- Google Search