ಕವಿತೆ: ಮರೆಯಲಾಗದ ಮಾಣಿಕ್ಯ

ಮರೆಯಲಾಗದು ಎಂದಿಗೂ ಆ ನಿಮ್ಮ ನಗು
ಚುಕ್ಕಿ ತಾರೆಯಾಗಿ ಆಕಾಶದಲ್ಲಿ ಮಿನುಗು
ಬೇಜಾರಿನ ಮಳೆಗೆ ಜೊತೆಯಾಗಿದೆ ನೋವಿನ ಗುಡುಗು
ದುಃಖ ಭರಿಸುವ ಶಕ್ತಿ ಬರಲಿ ನಮ್ಮೆಲ್ಲರಿಗು

ಉಳಿಸಿ ಬೆಳೆಸಿ ಹೋದಿರಿ ಅಪ್ಪನ ಹೆಸರು
ಜಗತ್ತು ಎಂದು ಮರೆಯೋದಿಲ್ಲ ನಿಮ್ಮ ಹೆಸರು
ಜಗತ್ತು ಕಂಬನಿ ಮಿಡಿದಿದೆ ನಿಂತಾಗ ನಿಮ್ಮ ಉಸಿರು
ಕನ್ನಡದ ಕಂದ ನೀನು ಹರಸು ನಮ್ಮನ್ನೆಲ್ಲ ಎಲ್ಲಿದ್ದರು.

ಸಣ್ಣ ಪುಟ್ಟ ವ್ಯಕ್ತಿಯಲ್ಲ ನೀವು ನಾಡಿನ ಶಕ್ತಿ
ಜಗತ್ತು ಬಡವಾಗಿದೆ ಎಂದರೆ ಆಗದು ಅತಿಶಯೋಕ್ತಿ
ನಾನು ಎಂದು ಕಂಡಿಲ್ಲ ನಿಮ್ಮಂತಹ ವ್ಯಕ್ತಿ
ತಿಳಿಯದಾಗಿದೆ ಹೇಗೆ ಮಾಡಲಿ ನೋವಿನ ಅಭಿವ್ಯಕ್ತಿ

ಇನ್ನಾದರೂ ಬಿಟ್ಟುಬಿಡುವ ದ್ವೇಷ ಅಸೂಯೆ
ಸಾವಿನಿಂದ ಅರ್ಥವಾಯ್ತು ಜಗತ್ತೊಂದು ಮಾಯೆ
ಪ್ರಶ್ನೆ ಒಂದೇ ನಮ್ಮನೆಲ್ಲ ಬಿಟ್ಟು ಹೋಗಿದ್ದು ಸರಿಯೆ
ವಿಧಿ ಯಾಕೆ ಇಷ್ಟು ಕ್ರೂರಿ ಎಂಬುದನ್ನು ನಾನರಿಯೆ.

ಕಾಮೆಂಟ್‌ಗಳು

- Follow us on

- Google Search