ಕವಿತೆ: ಬಡತನ

ಎಲ್ಲೆಲ್ಲೂ ಬಡತನ, ಕನಸಾಗಿದೆ ಅವರಿಗೆ ಸಿರಿತನ
ಜೀವನದಲ್ಲಿ ಏನೇ ಬಂದರು  ಬಿಟ್ಟುಕೊಡುವುದಿಲ್ಲ ತನ್ನತನ 
ಬಡತನವನ್ನು ಪೋಷಿಸುತ್ತಿದೆ ಮೌಢ್ಯತೆ 
ಬಡವರಲ್ಲಿ ಕಾಣಸಿಗುವುದು ಕಡಿಮೆ ಏಕತೆ 

ಜಾತಿ ಮತಗಳಲ್ಲಿ ಮುಳುಗಿ ಹೋಗಿದ್ದಾರೆ ಹಲವರು 
ತಮ್ಮವರಿಗೆ ಅನ್ಯಾಯವಾಗುತ್ತಿದ್ದರೆ ಪ್ರಶ್ನಿಸುವುದಿಲ್ಲ ಯಾರ್ಯಾರು 
ಹೀಗೆಯೇ ಮುಂದುವರಿದರೆ ಕೊನೆಯಲ್ಲಿ ಉಳಿಯುವವರಾರು 
ದುಡಿಯುವುದು ಮೂರು ಕಾಸು, ತಿನ್ನುವ ಬಾಯಿಗಳು ಹಲವಾರು 


ಬಡತನಕ್ಕೊಂದೇ ಮದ್ದು, ಅದು ಸರಿಯಾದ ತಿಳುವಳಿಕೆ
ಕಿತ್ತೆಸೆಯಿರಿ ಸಮಾಜದಿಂದ ದಬ್ಬಾಳಿಕೆ 
ಜೀವನದಲ್ಲಿ ಸಹಜ ಏರಿಳಿಕೆ 
ಮನದಲ್ಲಿ ಯಾಕಿರಬೇಕು ಇಲ್ಲಸಲ್ಲದ ಅಂಜಿಕೆ 

ಕೊಡಬೇಡಿ ನೋಟಿಗಾಗಿ ವೋಟು 
ನಿಜವಾದ ಜನಸೇವಕರಿಗೆ ಮುಡಿಪಾಗಿರಲಿ ನಿಮ್ಮ ವೋಟು 
ಎಷ್ಟೇ ಕಷ್ಟ ಬಂದರೂ ಧೈರ್ಯದಿಂದ ದಾಟು 
ನೀಯತ್ತಾಗಿ ದುಡಿದು ಹೆಚ್ಚಿಸಿಕೊಳ್ಳಿ ನಿಮ್ಮ ವಹಿವಾಟು 

ಕಾಮೆಂಟ್‌ಗಳು

- Follow us on

- Google Search