ಪುಸ್ತಕಗಳ ಪರಿಚಯ : ಮಹಾಯುದ್ಧ (೧,೨,೩)
ಕಳೆದ ಶತಮಾನದಲ್ಲಿ ನಡೆದ ಮರೆಯಲಾಗದ ಘಟನೆಗಳು ಹಾಗು ಪ್ರತಿಯೊಬ್ಬರೂ ತಿಳಿದಿರಬೇಕಾದ ಇತಿಹಾಸದ ಅಮೋಘ ಕ್ಷಣಗಳನ್ನು ಸೆರೆ ಹಿಡಿಯುವ ಪ್ರಯತ್ನವೇ ಮಿಲೇನಿಯಂ ಸರಣಿಯ ಪುಸ್ತಕಗಳು. ಮಿಲನಿಯಮ್ ಸರಣಿಯ ಆರನೇ ಪುಸ್ತಕದಿಂದ ಎಂಟನೇ ಪುಸ್ತಕಗಳವರೆಗೆ ಮಹಾಯುದ್ಧಗಳ ಕಾಲಗತಿಯಲ್ಲಿ ಆದ ಅನೇಕ ಮರೆಯಲಾಗದ ಆಯ್ದ ಘಟನೆಗಳನ್ನು ತೇಜಸ್ವಿಯವರು ಈ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಸ್ವಾತಂತ್ರಕ್ಕಾಗಿ ಹಾಗು ತಮ್ಮ ದೇಶದ ಜನರ ಒಳಿತಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ ಅನೇಕ ನಿದರ್ಶನಗಳು ಮಹಾಯುದ್ಧದಲ್ಲಿ ಕಾಣಸಿಗುತ್ತವೆ.
![]() |
ಮಿಲೇನಿಯಂ ಸರಣಿ https://amzn.to/3f0fnqu |
ಈ ಪುಸ್ತಕಗಳಲ್ಲಿ ಇರುವ ಹಲವಾರು ಘಟನೆಗಳು ತೇಜಸ್ವಿಯವರು ಭಾವಾನುವಾದ ಮಾಡಿರುವ ಕಥೆಗಳಾಗಿವೆ. ಅಂಟಿಸ್ ಎಂಬ ನಾಯಿಯ ಕಥೆ ನನಗೆ ಅಚ್ಚುಮೆಚ್ಚು. ಹಿಟ್ಲರ್ ಸರ್ವಾಧಿಕಾರದಲ್ಲಿದ್ದಾಗ ನಡೆದ ಕೆಲವು ಮರೆಯಲಾಗದ ಘಟನೆಗಳು, ಹಿಟ್ಲರ್ ಬಲಗೈ ಬಂಟ ಹಿಮ್ಲರ್ ನಡೆಸಿದ ಜನರ ಮಾರಣಹೋಮ. ಕ್ರೆಸ್ಟೆನ್ ಎಂಬ ವೈದ್ಯ ತೋರಿದ ಮಾನವೀಯತೆ ಹೇಗೆ ಎಷ್ಟೆಲ್ಲಾ ಜನರ ಪ್ರಾಣ ಉಳಿಸಿತು. ಇವೆಲ್ಲರೊಂದಿಗೆ ದೇಶದ್ರೋಹದ ಆರೋಪಿಗಳನ್ನು ಹೊತ್ತವರು ದೇಶ ಬಿಟ್ಟು ಪರಾರಿಯಾಗಲು ಮಾಡಿದ ಸಾಹಸ ಕಥೆಗಳು ಈ ಪುಸ್ತಕದಲ್ಲಿ ಅನುವಾದಿಸಲ್ಪಟ್ಟಿವೆ.
ಮಿಲೇನಿಯಂ ಸೀರೀಸ್ ಅಲ್ಲಿ ಪ್ರಕಟವಾಗಿರುವ ಎಲ್ಲ ೧೬ ಪುಸ್ತಕಗಳನ್ನು ಖರೀದಿಸಲು ಈ ಲಿಂಕ್ ಬಳಸಿ https://amzn.to/3f0fnqu
![]() |
ಪುಸ್ತಕದ ಮುಖಪುಟ |
ಗುಪ್ತಚರ ಇಲಾಖೆಯವರು ಒಬ್ಬ ಅನಾಮಿಕ ವ್ಯಕ್ತಿಗಾಗಿ ಒಂದು ಲೆಟರ್ ಮೂಲಕ ಹುಡುಕಾಟ ಆರಂಭಿಸಿ ಸಾಕ್ಷಿ ಕಲೆ ಹಾಕಿ ಬಂದಿಸಿದ್ಧು, ಅಣುಬಾಂಬ್ ತಯಾರಿಸುವಲ್ಲಿ ವಿಜ್ಞಾನಿಗಳ ಪಾತ್ರ, ಅಣುಬಾಂಬ್ ಪ್ರಯೋಗಿಸಲೇ ಬೇಕಾದ ಸಂದರ್ಭಕ್ಕೆ ಅಮೇರಿಕಾ ಹೇಗೆ ತಲುಪಿತು ಎಂಬುದನ್ನು ಸರಳವಾಗಿ ತೇಜಸ್ವಿಯವರು ವಿವರಿಸಿದ್ದಾರೆ.
![]() |
ಪುಸ್ತಕದ ಮುಖಪುಟ |
![]() |
ಪುಸ್ತಕದ ಮುಖಪುಟ |
ಪುಸ್ತಕದ ಕೊನೆಯ ಭಾಗದಲ್ಲಿ ಜರ್ಮನ್ನರು ಕೊಳ್ಳೆ ಹೊಡೆದಿದ್ದ ಸಾವಿರಾರು ಕಲಾಕೃತಿಗಳನ್ನು ಹೇಗೆ ಸಂರಕ್ಷಿಸಲಾಯಿತು ಎಂಬುದನ್ನು ವಿವರಿಸಿದ್ದಾರೆ. ಲಿಯೊನಾರ್ಡೊ ಡಾವಿಂಚಿ , ಮೈಕೆಲ್ ಎಂಜಲೋ ಮುಂತಾದ ಮಹಾನ್ ಕಲಾವಿದರ ಕಲಾಕೃತಿಗಳು ಕಳ್ಳತನವಾದವು, ಇದನ್ನೇ ಬಂಡವಾಳ ಮಾಡಿಕೊಂಡು ಭೂಗತ ಲೋಕದ ಖದೀಮರು ಶ್ರೀಮಂತರಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದರು ಎನ್ನುವ ರೋಚಕ ಕಥೆಗಳು ದಾಖಲಾಗಿವೆ. ಪ್ರತಿಯೊಂದು ಪುಸ್ತಕವೂ ಸುಮಾರು ನೂರು ಪುಟಗಳಷ್ಟಿವೆ. ಓದಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ದಿನನಿತ್ಯದ ಓದಿಗೆ ಹೇಳಿ ಮಾಡಿಸಿದಂತಿವೆ ಈ ಪುಸ್ತಕಗಳು.
ಮಿಲೇನಿಯಂ ಸೀರೀಸ್ ಅಲ್ಲಿ ಪ್ರಕಟವಾಗಿರುವ ಎಲ್ಲ ೧೬ ಪುಸ್ತಕಗಳನ್ನು ಖರೀದಿಸಲು ಈ ಲಿಂಕ್ ಬಳಸಿ https://amzn.to/3f0fnqu
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ