ನಿನ್ನೆಯಿದ್ದ ಜೀವ ಈಗಿಲ್ಲ
ಎಷ್ಟು ಬಾರಿ ಕೇಳಿದರೂ ನಂಬೋಕೆ ಆಗ್ತಾ ಇಲ್ಲ
ನಮ್ಮ ಪ್ರೀತಿಯ ಅಪ್ಪು ಇನ್ನಿಲ್ಲ
ನಿಮ್ಮಂತಹ ಗುಣವಿದ್ದ ವ್ಯಕ್ತಿ ಯಾರ್ಯಾರು ಇಲ್ಲ.
ಮರೆಯಲಾಗದ ನೆನಪುಗಳು ಸಾವಿರ
ನೆನಪುಗಳಲ್ಲಿ ನಮ್ಮ ಅಪ್ಪು ಅಮರ
ನಮ್ಮನೆಲ್ಲ ಬಿಟ್ಟು ಯಾಕೆ ಹೋದೆ ಅಪ್ಪು?
ಇದು ವಿಧಿ ಮಾಡಿದ ತಪ್ಪು.
ಬಾಲ್ಯದಲ್ಲೇ ಬಂದಿದ್ದು ರಾಷ್ಟ್ರ ಪ್ರಶಸ್ತಿ
ನಿಮ್ಮ ವ್ಯಕ್ತಿತ್ವ ನಮ್ಮ ನಾಡಿನ ಆಸ್ತಿ
ಎಲ್ಲರಿಗೂ ಭಗವಂತ ನೀಡಲಿ ದುಃಖ ಭರಿಸುವ ಶಕ್ತಿ
ನೆನೆಪಿಸಿಕೊಂಡು ಅತ್ತಷ್ಟು ನಿಮ್ಮ ನೆನಪು ಜಾಸ್ತಿ.
ಮರೆಯೋದಿಲ್ಲ ಎಂದು ನಿಮ್ಮ ನಗು
ನೀವು ಕರ್ನಾಟಕದ ಪ್ರೀತಿಯ ಮಗು
ಮುಗಿಲುಮುಟ್ಟಿದೆ ಆಕ್ರಂದನ, ಅಭಿಮಾನಿಗಳ ಮರುಗು
ಬೆಟ್ಟದ ಹೂವು ಇಲ್ಲದ ಮೇಲೆ ಜಗಕ್ಕಿಲ್ಲ ಸೊಬಗು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ