ನಟನೆಯ ವಿಚಾರಕ್ಕೆ ಬಂದರೆ ಎರಡು ಮಾತಿಲ್ಲ. ಎಷ್ಟು ಬೇಕೋ ಅಷ್ಟೇ ಎನ್ನುವ ಅದ್ಭುತ ನಟನೆ ದಿನನಿತ್ಯದ ಜೀವನವನ್ನು ಚಿತ್ರೀಕರಿಸಿದಂತಿದೆ. ಮಾಹಿತಿಯ ಸಂವಹನಕ್ಕಾಗಿ ಮೋರ್ಸ್ ಕೋಡ್ ಉಪಯೋಗಿಸುತ್ತಿದ್ದ ಇತಿಹಾಸದ ದಿನಗಳನ್ನು ನೋಡಬಹುದಾಗಿದೆ. ಮುಖ್ಯ ಪಾತ್ರದಲ್ಲಿ ನಟಿಸಿರುವ Sacha Baron Cohen ನಟನೆ ಬಹಳ ಇಷ್ಟವಾಯಿತು. ಆರಂಭಿಕ ಹಂತದಲ್ಲಿ ಬಹಳ ಉತ್ಸಾಹದಿಂದ ತನ್ನನ್ನು ತಾನು ಕೆಲಸದಲ್ಲಿ ತೊಡಗಿಸಿಕೊಳ್ಳುವ ಎಲಿ ಕೋಹೆನ್, ವರ್ಷಗಳು ಕಳೆದಂತೆ ತನ್ನನ್ನು ತಾನೇ ಮರೆಯುವಷ್ಟು ಬದಲಾದ ಜಗತ್ತಿಗೆ ಹೊಂದಿಕೊಂಡು ಸಿರಿಯಾದ ಪ್ರಬಲ ರಾಜಕಾರಣಿಗಳ ಸಂಪರ್ಕಗಳಿಸಿ ಅವರ ಸಂಪೂರ್ಣ ವಿಶ್ವಾಸಕ್ಕೂ ಅರ್ಹನಾಗುತ್ತಾನೆ.
![]() |
ಎಲಿ ಕೋಹೆನ್ |
ಎಲಿ ಕೋಹೆನ್ ದಿನನಿತ್ಯದ ಖರ್ಚಿಗೆ ಸಾಕಾಗುವಷ್ಟು ಸಂಪಾದನೆಯನ್ನು ಇಸ್ರೇಲ್ ಅಲ್ಲಿದ್ದಾಗ ಮಾಡುತ್ತಿರುತ್ತಾನೆ. ಆದರೂ, ತನ್ನ ಕುಟುಂಬದವರ ಉತ್ತಮ ಭವಿಷ್ಯಕ್ಕಾಗಿ ಹಾಗು ತನ್ನ ದೇಶಕ್ಕೆ ಏನಾದರು ಹೆಚ್ಚಿನ ಸೇವೆ ಮಾಡಬೇಕು ಎಂಬ ಆಸೆಯಿಂದಾಗಿ ಈ ಕೆಲಸಕ್ಕೆ ಒಪ್ಪಿಕೊಳ್ಳುತ್ತಾನೆ. ಸಹಜವಾಗಿ ಅಪಾಯವನ್ನು ಗುರುತಿಸುವ ಹಾಗು ಸಮಯಕ್ಕೆ ಸರಿಯಾದ ನಿರ್ಧಾರವನ್ನು ಕ್ಷಣಾರ್ಧದಲ್ಲಿ ತೆಗೆದುಕೊಳ್ಳುವ ಪ್ರತಿಭೆ ಎಲಿ ಕೋಹೆನ್ಗೆ ಇರುತ್ತದೆ. ಶತ್ರು ರಾಷ್ಟ್ರಕ್ಕೆ ಹೋಗಿ ತಲೆ ಮರೆಸಿಕೊಂಡು ಗೂಢಚಾರಿಯ ಕೆಲಸ ಮಾಡುವುದೇ ದೊಡ್ಡ ಅಪಾಯ, ಅಂತಹ ಸಂದರ್ಭದಲ್ಲಿ ಒಬ್ಬ ಉದ್ಯಮಿಯ ರೂಪದಲ್ಲಿ ಶತ್ರು ರಾಷ್ಟ್ರದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಬೆಳೆಸುವುದು ಹಾಗು ಅವರ ಸಂಪೂರ್ಣ ನಂಬಿಕೆ ಗಳಿಸುವುದು ಒಬ್ಬ ವ್ಯಕ್ತಿಯ ಪ್ರತಿಭೆಯನ್ನು ಹಾಗು ಧೈರ್ಯವನ್ನು ತೋರಿಸುತ್ತದೆ.
ಸರಣಿಯ ಪ್ರಮುಖ ಪಾತ್ರಗಳು |
ಇದು ಸರಣಿಯ ಸಂಕ್ಷಿಪ್ತ ವಿವರಣೆ. ಇನ್ನೊಂದು ನನಗಿಷ್ಟವಾದ ಪ್ರಮುಖ ಪಾತ್ರವೆಂದರೆ ಎಲಿ ಕೋಹೆನ್ ಅವರ ಮೇಲಾಧಿಕಾರಿಯ ಪಾತ್ರ. ತಂಡಕ್ಕೆ ಹೊಸ ಹೊಸ ಏಜೆಂಟ್ಗಳನ್ನೂ ಹುಡುಕಿ ನೇಮಕಾತಿ ಮಾಡಿಕೊಳ್ಳುವುದು ಹಾಗು ಅವರಿಗೆ ಸೂಕ್ತ ತರಬೇತಿ ನೀಡುವುದು ಇವರ ಕೆಲಸವಾಗಿರುತ್ತದೆ. ಕೆಲಸ ಹೇಳಿದಷ್ಟು ಸುಲಭವಲ್ಲ, ಪ್ರತಿಭೆಯೊಂದಿಗೆ ತಾಳ್ಮೆಯೂ ಇರುವವರು ಸಿಗುವುದು ಬಹಳ ಕಷ್ಟ. ತನ್ನ ಸಾಮರ್ಥ್ಯವನ್ನು ನಿರೂಪಿಸಲು ಹೇಳಿದ್ದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೋಗಿ ಮರಣ ಹೊಂದುವವರೇ ಕೆಲಸಕ್ಕೆ ಬೇಕಾದ ಪ್ರತಿಭೆ ಹೊಂದಿರುತ್ತಾರೆ. ಇಂತಹವರನ್ನು ಸೇರಿಸಿಕೊಂಡು, ಮುಂಬರುವ ಅಪಾಯವನ್ನು ಮನಗಂಡರು ಸಹ ತಾಳ್ಮೆಯಿಂದ ಎಲಿ ಕೋಹೆನ್ ಗೆ ಪರಿಸ್ಥಿಯನ್ನು ವಿವರಿಸುವ ಹಾಗು ದೇಶದ ಮಂತ್ರಿಗಳಿಗೆ ಅವರು ತೆಗೆದುಕೊಳ್ಳುವ ನಿರ್ಧಾರಗಳಿಂದ ತನ್ನ ಕೆಳಗಿರುವ ಏಜೆಂಟ್ಗಳಿಗೆ ಕಾದಿರುವ ಅಪಾಯವನ್ನು ಮನವರಿಕೆ ಮಾಡಿಸುವ ಕಷ್ಟದ ಪರಿಸ್ಥಿತಿ ಇವರದ್ದು.
Spoiler Alert!!!
ಜೇಡ ಹೇಗೆ ತಾನೇ ಹೆಣೆದ ಬಲೆಯಲ್ಲಿ ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ಜೀವ ಬಿಡುತ್ತದೆಯೋ ಅದೇ ಪರಿಸ್ಥಿತಿ ಎಲಿ ಕೋಹೆನ್ ಅವರಿಗೆ ಬರುತ್ತದೆ. ಸಿರಿಯಾ ದೇಶದಲ್ಲೂ ಸಹ ಅಧಿಕಾರಿಗಳಿಗೆ ತಮ್ಮ ಅತ್ಯಂತ ಜಾಗುರುಕತೆಯಿಂದ ತಯಾರಿಸಿದ ಪ್ಲಾನ್ ಫ್ಲಾಪ್ ಆಗಲು ಆರಂಭವಾದಾಗ ಅನುಮಾನವುಂಟಾಗುತ್ತದೆ. ಮಿಲಿಟರಿ ಬೇಸ್ ಹತ್ತಿರವೇ ಒಂದು ದೊಡ್ಡ ಕಟ್ಟಡವನ್ನು ಎಲಿ ಕೋಹೆನ್ ಬಾಡಿಗೆ ಪಡೆದಿರುತ್ತಾನೆ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಎಂಟು ಗಂಟೆಗೆ ಮೋರ್ಸ್ ಕೋಡ್ ರೂಪದಲ್ಲಿ ಎಲಿ ಕೋಹೆನ್ ಕಾನೂನು ಬಾಹಿರ ಫ್ರೀಕ್ವೆನ್ಸಿ ಮೂಲಕ ಮಾಹಿತಿ ರವಾನೆ ಮಾಡುತ್ತಿರುತ್ತಾನೆ. ಈ ತರಂಗಗಳು ಕೆಲವೊಮ್ಮೆ ಟಿವಿ ಆಂಟೆನ್ನಾದ ರಿಸೆಪ್ಶನ್ ಮೇಲೆ ಪ್ರಭಾವ ಬೀರುತ್ತಿರುತ್ತವೆ.
ಎಲಿ ಕೋಹೆನ್ ಪತ್ನಿ |
ಹೀಗೆ ಒಂದು ದಿನ ಸಿರಿಯಾ ಹಾಗು ಇಸ್ರೇಲ್ ತಂಡಗಳ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಟಿವಿ ದೃಶ್ಯಗಳಲ್ಲಿ ಅಡಚಣೆ ಉಂಟಾದಾಗ ಒಬ್ಬ ಸಾಮಾನ್ಯ ಪೇದೆ ಪ್ರತಿದಿನ ಇದೆ ತರಹ ಆಗುತ್ತಲ ಎಂದು ಹೇಳಿದ್ದನ್ನು ಮೇಲಧಿಕಾರಿ ಗಮನಿಸುತ್ತಾನೆ. ಕೂಡಲೇ ಅವನ ಕುತ್ತಿಗೆ ಪಟ್ಟಿ ಹಿಡಿದು ಎಷ್ಟು ದಿನದಿಂದ ಹೀಗಾಗುತ್ತಿದೆ ಎಂಬುದಾಗಿ ವಿಚಾರಿಸುತ್ತಾನೆ. ಆ ಒಂದು ಸಣ್ಣ ಸುಳಿವಿನ ಆಧಾರದ ಮೇಲೆ ನಗರದ ನಿರ್ದಿಷ್ಟ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತ ಬೇರೆ ಫ್ರೀಕ್ವೆನ್ಸಿ ಅಲೆಗಾಗಿ ಆ ಪ್ರದೇಶಗಳಲ್ಲಿ ಹುಡುಕಾಟ ನಡೆಸಲು ಆರಂಭಿಸುತ್ತಾರೆ. ಇದು ಎಲಿ ಕೋಹೆನ್ ಸಿಕ್ಕಿ ಬೀಳಲು ಕಾರಣವಾಗುತ್ತದೆ. ಆ ನಾಲ್ಕು ವರ್ಷಗಳ ಅವಧಿಯಲ್ಲಿ ಎಲಿ ಕೋಹೆನ್ ತನ್ನ ಜಾಣ್ಮೆಯಿಂದ ಎಂದು ಸಹ ಸಿಗದಷ್ಟು ಗೌಪ್ಯ ಮಾಹಿತಿಗಳನ್ನು ಇಸ್ರೇಲ್ಗೆ ಹಂಚಿರುತ್ತಾನೆ.
![]() |
ಸಾರ್ವಜನಿಕವಾಗಿ ನೇಣಿಗೆ ಹಾಕಿದ ದೃಶ್ಯ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ