ಇತ್ತೀಚಿಗೆ ಓದಿದ ಪುಸ್ತಕಗಳು

1. The Silent Patient 



ಇದೊಂದು ಇಂಗ್ಲಿಷ್ ಕಾದಂಬರಿ. ಅಪರಾಧ ಕೃತ್ಯವನ್ನೊಳಗೊಂಡ ರೋಚಕ ಕಥೆಯನ್ನು ಒಳಗೊಂಡಿರುವ ಅಧ್ಬುತ ಪುಸ್ತಕ ಇದಾಗಿದೆ. ಮಾನಸಿಕ ಆಘಾತದಿಂದ ಮೌನಕ್ಕೊಳಗಾದ ಅಲೀಶಿಯ ಜೀವನದ ಘಟನೆಗಳ ಸುತ್ತ ಸುತ್ತುವ ಕಾದಂಬರಿಯು ಅಂತ್ಯವಾಗುವ ರೀತಿಯನ್ನು ನೆನಪಿಸಿಕೊಂಡಾಗ ಈಗಲೂ ಎಂತಹ ಅಧ್ಬುತ ಕಾದಂಬರಿಯಿದು ಎನ್ನಿಸುತ್ತದೆ. ಕಾದಂಬರಿಯ ಇನ್ನೊಂದು ವಿಶೇಷತೆಯೆಂದರೆ Alex Michaelides ಅವರ ಮೊದಲ ಪುಸ್ತಕ ಇದಾಗಿದೆ !

Amazon Link: The Silent Patient  

2. ಚೋಮನ ದುಡಿ 


ಶಿವರಾಮ ಕಾರಂತರ ಕಾದಂಬರಿ ಇದಾಗಿದೆ. ಅತ್ಯಂತ ಕೆಳವರ್ಗದ ಜಾತಿಗೆ ಸೇರಿದ ಚೋಮನ ಜೀವನ ಹಾಗು ತನ್ನ ವ್ಯವಸಾಯದ ಕನಸನ್ನು ನನಸಾಗಿಸುವತ್ತ ಹೋರಾಡುವ ಕಥೆಯನ್ನು ಕಾದಂಬರಿ ಒಳಗೊಂಡಿದೆ. ಮೇಲ್ಜಾತಿಯಲ್ಲಿ ಹುಟ್ಟಿ ಬೆಳೆದವರಿಗೆ, ಸಮಾನತೆ ಸ್ವಾತಂತ್ರ್ಯ ಮುಂತಾದವುಗಳು ಸುಲಭವಾಗಿ ಸಿಕ್ಕಿಬಿಡುತ್ತವೆ. ಜೀವನದಲ್ಲಿನ ಕನಿಷ್ಠ ಸೌಲಭ್ಯಗಳಿಗೂ, ಸಣ್ಣ ಪುಟ್ಟ ಆಸೆಗಳಿಗೂ, ತನ್ನ ಮಕ್ಕಳ ಜೀವನಕ್ಕೂ ಜಾತಿ ಯಾವ ರೀತಿ ಕೇಡಾಗಬಹುದು ಎಂಬುದನ್ನು ಅನುಭವಿಸದವರಿಗೆ ಮಾತ್ರ ಗೊತ್ತು. ಕಾಫಿ ತೋಟಗಳಲ್ಲಿನ ಅಮಾನವೀಯ ಪದ್ಧತಿಗಳಿಗೆ ಜೀವನವನ್ನೇ ಸವಿಸಿದವರಿಗೆ ಕೊನೆಗೆ ದೊರೆಯುವುದು ಸಾಲದ ಭಾರವೊಂದೇ ಎಂಬ ಮಾತು ಇಂದಿಗೂ ಹಲವಾರು ಕಡೆಗಳಲ್ಲಿ ನೋಡಲು ಸಿಗುತ್ತದೆ !

ಕಾಮೆಂಟ್‌ಗಳು

- Follow us on

- Google Search