ಹೊಸದಾಗಿ ಕೆಲಸಕ್ಕೆ ಸೇರಿದಾಗ ಉಪಯೋಗವಾಗುವ ಅಂಶಗಳು

೧. ಕನಿಷ್ಠ ಮುಂದಿನ ಎರಡು ವರ್ಷಗಳ ಗುರಿಯಿರಲಿ 
ಯಾವುದೇ ಕೆಲಸವಾಗಲಿ, ಅದನ್ನು ಸಮರ್ಪಕವಾಗಿ ನಿರ್ವಹಿಸುವುದನ್ನು ಕಲಿಯಲು ಹಾಗು ನಿಮಗೆ ಆ ಕ್ಷೇತ್ರದಲ್ಲಿ ಎಷ್ಟು ಆಸಕ್ತಿಯಿದೆ ಎಂಬುದನ್ನು ಮನಗಾಣಲು ಎರಡು ವರ್ಷ ಬೇಕಾಗಬಹುದು. ಉತ್ತಮ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾರ್ಯಾನುಭವ ಮುಂದಿನ ದಿನಗಳಲ್ಲಿ ಅದೇ ಕ್ಷೇತ್ರದಲ್ಲಿ ಮುಂದುವರಿಯುವವರಿಗೆ ಬಹಳಷ್ಟು ಸಹಕಾರಿಯಾಗುತ್ತದೆ. 


೨. ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲ 
ಮೊದಲ ಕೆಲಸ ದೊರೆತಾಗ ಹೆಚ್ಚಿನ ಹಣ ಪೋಲು ಮಾಡದೆ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲವನ್ನು ತೀರಿಸುವತ್ತ ನಿಮ್ಮ ಗಮನವಿರಲಿ. ಹೆಚ್ಚಿನ ಆದಾಯವಿದ್ದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅಭ್ಯಾಸ ಅಗತ್ಯ. ಮುಂದಿನ ವಿದ್ಯಾಭ್ಯಾಸ ಮಾಡುವ ಯೋಜನೆಯಿದ್ದಲ್ಲಿ, ವಿದ್ಯಾಭ್ಯಾಸಕ್ಕೆ ಅಗತ್ಯವಾದ ಹಣವನ್ನು ಕೂಡಿಡುವ ಕೆಲಸ ಮಾಡಿ. ಏಕೆಂದರೆ ಇಷ್ಟು ವರ್ಷ ಕೆಲಸ ಮಾಡಿ ಮತ್ತೆ ಪೋಷಕರಲ್ಲಿ ಹಣ ಕೇಳುವುದು ಅಷ್ಟು ಸರಿ ಅನಿಸುವುದಿಲ್ಲ. 

೩. ಇಲೆಕ್ಟ್ರಾನಿಕ್ ಉಪಕರಣಗಳ ಅಗತ್ಯವಿದ್ದಲ್ಲಿ ಮಾತ್ರ ಖರೀದಿಸಿ 
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ ಎಷ್ಟೇ ಬೆಲೆಬಾಳುವ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಮಾನಿಟರ್, ಸ್ಟವ್, earphones ಇತ್ಯಾದಿ ಮುಂದಿನ ಐದು ವರ್ಷಕ್ಕೆ ಹಳೆಯದಾಗುತ್ತವೆ ಅಥವಾ ಉಪಯೋಗಿಸಲು ಸರಿ ಹೊಂದುವುದಿಲ್ಲ. ಹಾಗಾಗಿ ಹಣವನ್ನು ಇಲೆಕ್ಟ್ರಾನಿಕ್ ಉಪಕರಣಗಳ ಖರೀದಿಗೆ ಬಳಸುವ ಮುನ್ನ ಜಾಗೃತರಾಗಿರಿ. 

೪. ಆರೋಗ್ಯದ ಬಗ್ಗೆ ಗಮನವಿರಲಿ 
ದುಡಿಯುವ ಕಾಲವೆಂದು ಸಿಕ್ಕ ಸಿಕ್ಕದನೆಲ್ಲ ಬೇಕಾದಹಾಗೆ ತಿಂದು, ಬೊಜ್ಜು ಬರಿಸಿಕೊಂಡರೆ ಅದನ್ನು ಕರಗಿಸಲು ಸಾಕಷ್ಟು ವರ್ಷಗಳೇ ಬೇಕಾಗಬಹುದು!. ಆಹಾರ ಸರಳವಾಗಿರಲಿ. ದಿನನಿತ್ಯ ಸಾಕಷ್ಟು ನೀರು ಕುಡಿಯುವುದು ಹಾಗು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.  


೫. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ 
ಸಿಕ್ಕ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಬದಲು ಪುಸ್ತಕಗಳನ್ನು ಓದುವುದು ಅಥವಾ ನಿಮ್ಮ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸದ್ಭಳಕೆ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಸಮಯ ಕಳೆದರು ಮುಂದಿನ ಐದು ವರ್ಶಗಳಲ್ಲಿ ಆ ಸಾಮಾಜಿಕ ಜಲತನವೇ ಜನರಿಗೆ ಬೇಜಾರಾಗಿ ಹೊಸತೇನನ್ನೋ ಮನೋರಂಜನೆಗಾಗಿ ಅವಲಂಬಿಸಬಹುದು. 

೬. ಉತ್ತಮ ಸ್ನೇಹಿತರನ್ನು ಹಾಗು ಪೋಷಕರನ್ನು ದೂರ ಮಾಡದಿರಿ 
ಕೆಲಸದ ಒತ್ತಡವಿರಬಹುದು ಅಥವಾ ನಮಗೆ ತಿಳಿಯದ ಹೊಸ ಲೋಕ ಪರಿಚಯವಾದ ಸಂತಸವಿರಬಹುದು ತಮ್ಮವರನ್ನು ಎಂದಿಗೂ ದೂರ ಮಾಡದಿರಿ. ಕಷ್ಟಗಳು ಹೇಳಿ ಕೇಳಿ ಬರುವುದಿಲ್ಲ. ಕಷ್ಟಕ್ಕೆ ಸಹಾಯ ಮಾಡುವ ಯಾರಾದರೂ ನಮ್ಮ ಜೀವನದ ಭಾಗವಾಗಿದ್ದರೆ ಅದೇ ನಮ್ಮ ಪುಣ್ಯ. 


೭. ಹೊಸ ಅವಕಾಶಗಳಿಗಾಗಿ ಹುಡುಕುತ್ತಿರಿ 
ಇಂದಿನ ಜಗತ್ತಲ್ಲಿ ಕೆಲಸ ಪಡೆಯುವುದು ಒಂದು ದೊಡ್ಡ ಸಾಧನೆಯೇ ಆಗಿಹೋಗಿದೆ. ಉದ್ಯೋಗ ಅವಕಾಶಗಳು ಕಡಿಮೆಯಿದ್ದು, ಸಮಯಕ್ಕೆ ತಕ್ಕಂತೆ ನಮ್ಮನ್ನು ನಾವು ಉದ್ಯೋಗಾವಕಾಶಗಳಿಗೆ ತಕ್ಕಂತೆ ಸಿದ್ಧಪಡಿಸಿಕೊಳ್ಳದಿದ್ದರೆ ಯಾರನ್ನೋ ನಂಬಿ ಜೀವನ ಸಾಗಿಸುವ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. 

ಕಾಮೆಂಟ್‌ಗಳು

- Follow us on

- Google Search