ಐಸಿಸಿ ಟೆಸ್ಟ್ ಚಾಂಪಿಯನ್ಸ್ ಪಟ್ಟಕ್ಕಾಗಿ ಜೂನ್ ೧೮ ರಿಂದ ೨೨ ರವರೆಗೆ ಸೌತ್ ಹಾಂಪ್ಟಾನ್ ಅಲ್ಲಿ ಭಾರತ ಹಾಗು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿ ಆಗಲಿವೆ. ಟೆಸ್ಟ್ ಮಾದರಿಯಲ್ಲಿ ಎರಡೂ ತಂಡಗಳು ಅಪೂರ್ವ ಸಾಧನೆಯನ್ನು ಕಳೆದ ಕೆಲವು ವರ್ಷಗಳಲ್ಲಿ ಮಾಡಿವೆ.
ಭಾರತ ತಂಡದ ಪ್ರಮುಖ ಆಕರ್ಷಣೆಯೆಂದರೆ ಬಲಿಷ್ಠ ಬ್ಯಾಟಿಂಗ್ ಪಡೆ. ವಿರಾಟ್ ಕೊಹ್ಲಿ, ಪೂಜಾರ, ರಹಾನೆ, ರೋಹಿತ್, ರಾಹುಲ್, ಪಂತ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ವಿದೇಶದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಕೊಹ್ಲಿ ಪಡೆಗೆ ಹೆಚ್ಚು ಸಹಾಯಕಾರಿ ಆಗುವುದು ಭಾರತದ ವೇಗದ ಬೌಲರ್ಗಳಾದ ಬುಮ್ರಾ, ಶಮಿ ಹಾಗು ಇಶಾಂತ್ ಶರ್ಮ. ಹೊಸ ಬಾಲ್ನೊಂದಿಗೆ ವಿಕೆಟ್ ಪಡೆದುಕೊಳ್ಳುವುದು ಪಂದ್ಯದ ಗತಿಯನ್ನು ನಿರ್ಧರಿಸುತ್ತದೆ. ಇವರೊಂದಿಗೆ ಅಶ್ವಿನ್ ಹಾಗು ಜಡೇಜಾ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾಗುತ್ತಾರೆ.
ಭಾರತ ತಂಡದ ಆಟಗಾರರನ್ನು ನೋಡಿದಾಗ ತಂಡ ಸಾಕಷ್ಟು ಬಲಿಷ್ಠವಾಗಿದೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಆದರೆ, ನಮಗೆ ತಿಳಿದಿರುವಂತೆಯೇ ಒಂದು ಸಮಸ್ಯೆ ನಿರ್ಣಾಯಕ ಪಂದ್ಯಗಳಲ್ಲಿ ಕಂಡುಬರುತ್ತದೆ. ಏನೆಂದರೆ, ಬ್ಯಾಟಿಂಗ್ ಮಾಡುವಾಗ ಏಕಾಏಕಿ ಸಾಲು ಸಾಲಾಗಿ ವಿಕೆಟ್ ಕಳೆದುಕೊಳ್ಳುವುದು. ಇದರಿಂದಾಗಿ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಾಗು ವಿಶ್ವಕಪ್ ನಿರ್ಣಾಯಕ ಹಂತದಲ್ಲಿ ಸೋಲು ಕಂಡಿತ್ತು. ಅದೇ ಸಮಸ್ಯೆ ಈಗಲೂ ಎದುರಾಗುವ ಚಿಂತೆ ಅಭಿಮಾನಿಗಳಲ್ಲಿ ಇದೆ.
ಸೆಮಿಫೈನಲ್ ಪಂದ್ಯ - ವಿಶ್ವಕಪ್ ೨೦೧೯
ನ್ಯೂಜಿಲ್ಯಾಂಡ್ ತಂಡವು ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿದೆ. ಅದರಲ್ಲಿ ಪ್ರಮುಖವಾದವು ಕೇನ್ ವಿಲ್ಲಿಯಂಸನ್ ನಾಯಕತ್ವ, ಎಡಗೈ ವೇಗದ ಬೌಲರ್ಗಳಾದ ಟ್ರೆಂಟ್ ಬೌಲ್ಟ್ ಹಾಗು ವಾಗ್ನೆರ್. ಇದರೊಂದಿಗೆ ಸಮಯೋಚಿತವಾಗಿ ಆಟವಾಡುವ ರೋಸ್ ಟೈಲರ್, ಜೆಮಿಸನ್, ಗ್ರಾಂಡ್ ಹೋಂ ತಂಡಕ್ಕೆ ಪಂದ್ಯದ ಗತಿಯನ್ನು ಬದಲಾಯಿಸುವ ಶಕ್ತಿಯನ್ನು ತುಂಬುತ್ತಾರೆ. ಟಿಮ್ ಸೌಥಿ ಕೂಡ ಒಳ್ಳೆಯ ಲಯದಲ್ಲಿದ್ದಾರೆ.
ನನ್ನ ಪ್ರಕಾರ ಭಾರತ ತಂಡದ ಪ್ಲೇಯಿಂಗ್-೧೧ ಅಲ್ಲಿ ಇವರು ಇರಬಹುದು.
೧. ರಾಹುಲ್
೨. ರೋಹಿತ್
೩. ಪೂಜಾರ
೪. ಕೊಹ್ಲಿ
೫. ರಹಾನೆ
೬. ಪಂತ್
೭. ಜಡೇಜಾ
೮. ಅಶ್ವಿನ್ / ಸುಂದರ್
೯. ಶಮಿ
೧೦. ಬುಮ್ರಾ
೧೧. ಇಶಾಂತ್
ಆರಂಭಿಕ ಆಟಗಾರರು ನ್ಯೂಜಿಲ್ಯಾಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರೆ ಭಾರತಕ್ಕೆ ಪಂದ್ಯ ಗೆಲ್ಲುವುದು ಕಷ್ಟವಾಗುವುದಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಇದುವರೆಗೆ ಲಿಮಿಟೆಡ್ ಓವರ್ ಪಂದ್ಯಗಳಲ್ಲಿ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ(ಅಂಡರ್ ೧೯ ಬಿಟ್ಟು). ಈಗ ಪಂದ್ಯ ಗೆದ್ದು ಚಾಂಪಿಯನ್ ಆಗುವ ಸದಾವಕಾಶ ಒದಗಿ ಬಂದಿದೆ.
ವಾಗ್ನೆರ್ ಎಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲರು ಎಂಬುದು ಈ ವಿಡಿಯೋ ನೋಡಿದವರಿಗೆ ಅರಿವಾಗಬಹುದು. ವಿಕೆಟ್ ಪಡೆಯಲು ಸೆಟ್ ಮಾಡಿರುವ ಫೀಲ್ಡಿಂಗ್ ಕೂಡ ಗಮನಿಸಿ.
ಎರಡು ತಂಡಗಳ ಬಲಾಬಲಗಳನ್ನು ಗಮನಿಸಿದರೆ ನ್ಯೂಜಿಲ್ಯಾಂಡ್ ತಂಡಕ್ಕೆ ಹೆಚ್ಚಿನ ಅನುಕೂಲಗಳಿವೆ. ಆದರೆ, ಕೇನ್ ವಿಲಿಯಂಸನ್ ಗಾಯಗೊಂಡಿರುವುದು ಈಗ ಸುದ್ಧಿಯಾಗುತ್ತಿದೆ. ಎಲ್ಲಾ ಫೈನಲ್ ಪಂದ್ಯಗಳಲ್ಲೂ ಒಂದು ತಂಡದ ಕೆಲವೇ ಆಟಗಾರರು ಯಾರೂ ಸಹ ನಿರೀಕ್ಷಿಸದ ಉತ್ತಮ ಪ್ರದರ್ಶನ ನೀಡಿ ಕಪ್ ಗೆಲ್ಲಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆ ಅದೃಷ್ಟ ಭಾರತ ತಂಡದ್ದಾಗಿರಲಿ ಎಂಬ ಆಶಯದೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ