ಕವಿತೆ : ಮಳೆಗಾಲ

ಮತ್ತೆ ಶುರುವಾಯಿತು ಮಳೆಗಾಲ,
ಗದ್ದೆಯ ಕೆಲಸಗಳಿಗಿದು ಸಕಾಲ. 
ಎಲ್ಲೆಲ್ಲೂ ನೀರೇ ನೀರು,
ಮಂಜಿನ ಮುಸುಕಲ್ಲಿ ನಿಂತರೆ ತಿಳಿಯುವುದಿಲ್ಲ ನೀನ್ಯಾರು !

ಅಲ್ಲಿಲ್ಲಿ ಎದ್ದಿವೆ ಅಣಬೆಗಳು, 
ಕಂಗಾಲಾಗಿವೆ ಕಾಡುಕೋಣಗಳು. 
ಬಯಲಿಗೆ ಬಂದಿವೆ ಮನೆಯಲ್ಲಿ ಅಡಗಿದ್ದ ಛತ್ರಿಗಳು, 
ಮಳೆ ನಿಂತರೂ ಬರುತ್ತಲೇ ಇವೆ ತುಂತುರು ಹನಿಗಳು. 



ಎಡೆಬಿಡದೆ ಸುರಿಯುತ್ತಿದೆ ಮಳೆ,
ಮಳೆ ಮಲೆನಾಡಿನ ಮನೆಮಗಳೇ 
ಶೀತ ಜ್ವರ ಕೆಮ್ಮಿಗೆ ಗಲಾಟೆ ಮಾಡುತ್ತಿವೆ ಹಸುಳೆ,
ಶಾಲೆಗೆ ರಜೆ ಇಲ್ಲವೇ ಎಂದು ಕೇಳುತ್ತಿದ್ದಾರೆ ಮಕ್ಕಳೇ !

ಜಿಗಣೆಗಳು ತಯಾರಾಗಿವೆ ರಕ್ತ ಹೀರಲು,
ಮನೆಯವರು ಸಿದ್ಧರಾಗಿದ್ದಾರೆ ಅಣಬೆ ಹುಡುಕಲು. 
ಸಿಕ್ಕಿದರೆ ಸೀರುಂಡೆ, ಸಂಜೆಯೆಯಾದರೆ ಕೂಗುತ್ತವೆ ಜೀರುಂಡೆ 
ನದಿ ತುಂಬಿ ಹರಿಯುತ್ತಿವೆ ನಾಡಿನೆಲ್ಲೆಡೆ.  

ಕಾಮೆಂಟ್‌ಗಳು

- Follow us on

- Google Search