ಇತ್ತೀಚಿಗೆ ನೋಡಿದ ಸಿನಿಮಾಗಳು

೧. ಉರ್ವಿ - ಕನ್ನಡ ಭಾಷೆಯ ಸಿನಿಮಾ 


ಬಹಳಷ್ಟು ದಿನಗಳ ನಂತರ ಅಮೆಜಾನ್ ಪ್ರೈಮ್ ಅಲ್ಲಿ ನೋಡಿದ ಕನ್ನಡ ಸಿನಿಮಾ ಇದು. ಕಥೆ ಗಂಭೀರವಾದ ವಿಷಯವನ್ನು ಒಳಗೊಂಡಿದೆ. ಜೀವನ ನಿರ್ವಹಣೆಗೆ  ವೇಶ್ಯಾವಾಟಿಕೆಯ ದಾರಿ ಹಿಡಿಯುವ ಅಥವಾ  ದಾರಿಗೆ ಸಂಚಿನಿಂದ ತಳ್ಳಲ್ಪಡುವ ಹುಡುಗಿಯರ ಜೀವನವನ್ನು ವೀಕ್ಷಕರಿಗೆ ಅರ್ಥ ಮಾಡಿಸುವ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ. ಇದರೊಂದಿಗೆ  ಕೆಲವೊಂದು ಗಂಡಸರು ತಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ನೋಡುವ ದೃಷ್ಟಿಗೂ ಬೇರೆ ಮನೆಯ ಮಕ್ಕಳನ್ನು ನೋಡುವ ವಿಧಾನಕ್ಕೂ ಎಷ್ಟು ವ್ಯತ್ಯಾಸವಿರುತ್ತದೆ ಎಂಬುದನ್ನು ಅಚ್ಯುತ್ ರಾವ್ ತಮ್ಮ ನಟನೆಯ ಮೂಲಕ ಅದ್ಭುತವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಡತನ ಹೇಗೆ ನಮ್ಮ ಸಮಾಜದಲ್ಲಿ ಮುಗ್ದ ಜೀವಗಳನ್ನು  ತೆಗೆದುಕೊಳ್ಳುತ್ತದೆ  ವಿಚಾರದೊಂದಿಗೆ ಕಥೆಯನ್ನು ಕುತೂಹಲಕಾರಿಯಾಗಿ ಹೆಣೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಚಿತ್ರ ನೋಡುವಾಗ ಸಾಕಷ್ಟು ಬೋರ್ ಅನ್ನಿಸುತಿತ್ತು. 

೨. The Man With The Iron Heart 


ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್ ನಡೆಸಿದ ಹತ್ಯಾಕಾಂಡಗಳಿಗೆ ಲೆಕ್ಕವೇ ಇಲ್ಲ ಅನ್ನಿಸುತ್ತೆ. ಆದರೆ, ಹಿಟ್ಲರ್ ತನ್ನ ಗುರಿಯನ್ನು ಅಧಿಕಾರಿಗಳಿಗೆ ತಿಳಿಸುತಿದ್ದ. ಆ ಗುರಿಯನ್ನು ಕಾರ್ಯರೂಪಕ್ಕೆ ತರುವುದು ತನ್ನ ಕೆಳ ಅಧಿಕಾರಿಗಳು.  Reinhard Heydrich ಎಂಬ ನಾಝಿ ಅಧಿಕಾರಿಯು ಯುದ್ಧದಲ್ಲಿ ಹಿಟ್ಲರ್ ಸೈನ್ಯ ಗೆದ್ದ ಪ್ರದೇಶಗಳಿಂದ  ಉಳಿದಿರುವ ಜ್ಯುಗಳನ್ನು ಕೊಲ್ಲುವ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾನೆ. ಸಾಮೂಹಿಕವಾಗಿ ಜನರನ್ನು ಕೊಲ್ಲುವುದು ಹಾಗು ಹಿಟ್ಲರ್ ವಿರೋಧಿಗಳು ಯಾರೇ ಇರಲಿ ಅವರನ್ನು ಕೊಲ್ಲುವುದೇ ಈತನ ಮುಖ್ಯ ಕೆಲಸವಾಗಿರುತ್ತದೆ. ಈ ಅಧಿಕಾರಿಯನ್ನು ಕೊಲ್ಲಲು ಇಬ್ಬರು ಯುವಕರು ಯೋಜನೆ ತಯಾರಿಸಿ ಕಾರ್ಯತಗೊಳ್ಳುವ ರೋಚಕ ಕಥೆಯೇ ಚಿತ್ರದ ಪ್ರಮುಖ ಆಕರ್ಷಣೆ. 

ಕಾಮೆಂಟ್‌ಗಳು

- Follow us on

- Google Search