ಇದು ನಾನು ಓದಿದ ಮೊದಲ ಕನ್ನಡ ಪುಸ್ತಕ. ಅದೆಷ್ಟೋ ಇಂಗ್ಲಿಷ್ ಪುಸ್ತಕಗಳನ್ನು ಓದಲು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿ ಓದುವ ಹವ್ಯಾಸವನ್ನೇ ಬಿಡುವ ಯೋಚನೆಯಲ್ಲಿದ್ದೆ. ಆಗ ಒಂದು ದಿನ ವಸುಧೇಂದ್ರ ಅವರು ಬರೆದಿರುವ 'ವರ್ಣಮಯ' ಎಂಬ ಪುಸ್ತಕ ಕಣ್ಣಿಗೆ ಬಿತ್ತು. ಪುಸ್ತಕದ ಆರಂಭದಲ್ಲಿ ಲೇಖಕರ ಬಗ್ಗೆ ಪರಿಚಯವಿತ್ತು. ಅದನ್ನು ಓದಿದಾಗ ನನಗೆ ಅರಿವಾಯ್ತು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವ ಪ್ರತಿಭಾವಂತ ಲೇಖಕರು ನಮಗೆ ತಿಳಿದೇ ಇಲ್ಲ ಎಂದು. ಪುಸ್ತಕ ಓದಿ ಮುಗಿದ ನಂತರ ಸಾಕಷ್ಟು ಪುಸ್ತಕಗಳನ್ನು ಓದಿದ ಮೇಲೆ ಈ ಬ್ಲಾಗ್ ಆರಂಭಿಸಿದೆ. ಹೀಗಾಗಿ ಈ ಪುಸ್ತಕದ ಬಗ್ಗೆ ಬರೆದಿರಲಿಲ್ಲ. ಮೊನ್ನೆ ಹಾಗೆ ಸುಮ್ಮನೆ ಮತ್ತೊಮ್ಮೆ ಈ ಪುಸ್ತಕವನ್ನು ಓದಿದೆ.
https://amzn.to/3cgm1Xn |
ಪುಸ್ತಕ ಓದಲು ಆರಂಭಿಸಿದೆ. ಪುಸ್ತಕದಲ್ಲಿ ಇರುವ ಹೆಚ್ಚಿನ ಭಾಗ ವಸುಧೇಂದ್ರ ಅವರ ಜೀವನದಲ್ಲಿ ನಡೆದ ಘಟೆನಗಳಾಗಿವೆ. ಅವರು ಇಂಗ್ಲೆಂಡ್ ದೇಶಕ್ಕೆ ಹೋದಾಗ ನಡೆದ ಹಾಸ್ಯಾಸ್ಪದ ಘಟನೆಗಳು. ಬೆಂಗಳೂರಿನಲ್ಲಿ ತಮ್ಮ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ದ ನಂಜುಡಿ ಎಂಬಾತನ ಕುರಿತ ಲೇಖನಗಳು ನನಗೆ ತುಂಬಾ ಇಷ್ಟವಾಯ್ತು. ಇದರೊಂದಿಗೆ ಮಹಾಭಾರತದ ಬಗ್ಗೆ ಒಂದು ಲೇಖನವಿದೆ. ಒಂದು ಗಮನಿಸುವ ಅಂಶವೆಂದರೆ ಪುಸ್ತಕದ ಓದಿಗೆ ಒಂದು ಅದ್ಭುತ ವೇಗವಿದೆ. ಓದಲು ಶುರು ಮಾಡಿದರೆ ಎಲ್ಲಿಯೂ ನಿಲ್ಲಿಸಬೇಕು ಎಂದು ಅನ್ನಿಸುವುದೇ ಇಲ್ಲ. ಅಡುಗೆ ಕೆಲಸಕ್ಕೆ ಬರುತಿದ್ದ ಗೌರಮ್ಮ ಆಕೆಯ ಜೀವನಶೈಲಿ, ಬೆಂಗಳೂರಿನ ಅಪಾರ್ಟ್ಮೆಂಟ್ ಜೀವನ, ಐಟಿ ಜೀವಿಗಳ ಜೀವನ, ಗಾರ್ಮೆಂಟ್ ಅಲ್ಲಿ ಕೆಲಸ ಮಾಡುವವರ ಕಷ್ಟಗಳನ್ನು ಪುಸ್ತಕದ ಪ್ರಬಂಧಗಳು ಒಳಗೊಂಡಿವೆ. ಕೊನೆಯಲ್ಲಿ ಗಾಂಧೀಜಿಯ ತತ್ವಗಳ ಬಗ್ಗೆ ಒಂದು ಲೇಖನವಿದೆ.
https://amzn.to/3cgm1Xn |
ತಮ್ಮ ಜೀವನದಲ್ಲಿ ನಡೆದ ಘಟನೆಗಳ ಮೂಲಕ ಹಾಗು ಅಲ್ಲಿ ಪಾತ್ರಗಳ ರೂಪದಲ್ಲಿ ಬರುವ ಜನರ ಜೀವನದ ಮೂಲಕ ಬೆಂಗಳೂರಿನಂತಹ ನಗರದ ಜೀವನವನ್ನು ಕಣ್ಣಿಗೆ ಕಟ್ಟಿದಂತೆ ಬರೆಯಲಾಗಿದೆ. ಒಂದು ಬಾರಿಯಲ್ಲದೆ ಮತ್ತೆ ಮತ್ತೆ ಓದಬೇಕೆನ್ನಿಸುವ ಸುಂದರ ಕನ್ನಡ ಪುಸ್ತಕ ವಸುಧೇಂದ್ರ ಅವರ 'ವರ್ಣಮಯ'.
ಈ ಪುಸ್ತಕವನ್ನು ಅಮೆಜಾನ್ ಮೂಲಕ ಖರೀದಿಸಲು ಈ ಲಿಂಕ್ ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ