ಕವಿತೆ: ಟಿವಿ

ಚಿಕ್ಕವನಿದ್ದಾಗ ನಿನ್ನಲ್ಲಿ ಕಾಣುತಿದ್ದ ಬಣ್ಣಗಳು ಕಪ್ಪು ಬಿಳಿ 
ಆ ಟಿವಿ ಹಾಳಾದಾಗ ತಂದಿದ್ದು ಕಲರ್ ಟಿವಿ 
ಆಮೇಲೆ ಸ್ವಲ್ಪ ದಿನ ಊಟ ತಿಂಡಿಯೆಲ್ಲ ನಿನ್ನ ಬಳಿ 
ಕರೆಂಟ್  ಹೋದಾಗ ಸುಳಿಯುತ್ತಿರಲಿಲ್ಲ ಯಾರೂ ನಿನ್ನ ಬಳಿ 

ಮಲೆನಾಡಿಗೆ ಸಿಡಿಲಿಗೆ ಬಳಲಿ, ಚಳಿಗೆ ನಡುಗಿ 
ಬಿರುಗಾಳಿಗೆ ಡಿಶ್ ಆಂಟೆನಾ ತಿರುಗಿ 
ಮನೆಯವರೆಲ್ಲರೂ ಬೇಜಾರಾಗಿದ್ದರು ಮರುಗಿ 
ಆಗ ನಾನಾಗಿದ್ದೆ ಕೆಲಸವಿಲ್ಲದ ಬಡಗಿ 


ನಿನ್ನನ್ನು ತಗೆದುಕೊಂಡು ಹೋಗಿ ಹೇಳಿದೆವು ಮಾಡಿ ರಿಪೇರಿ 
ಅವರು ಹೇಳಿದರು ಇದನ್ನು ಯಾರಿಗಾದರೂ ಮಾರಿ 
ಅವರಲ್ಲಿ ಕೇಳಿದೆವು ಪ್ರಯತ್ನಿಸಿ ಇನ್ನೊಂದು ಬಾರಿ 
ಕೆಲವು ಹೊಸ ಬಿಡಿ ಭಾಗಗಳೊಂದಿಗೆ ಮುಗಿಯಿತು ನಿನ್ನ ರಿಪೇರಿ 

ಪುಣ್ಯಕ್ಕೆ ನೀನು ಆ ದಿನ ಸೇರಲಿಲ್ಲ ಗುಜುರಿ 
ಆ ದಿನಗಳಲ್ಲಿ ಹೊರಗಿನ ಜಗತ್ತಿಗೆ ನೀನೆ ದಾರಿ 
ಈಗಲೂ ಕೂತಿದ್ದೀಯ ಮೂಲೆಯಲ್ಲಿ ಮೇಜು ಏರಿ 
ಎಲ್ಲರೂ ಕೂಗುತ್ತಿದ್ದಾರೆ ಒಳ್ಳೆಯದು ಏನಾದರು ಬಂದ್ರೆ ಹಾಕ್ರೀss

ಕಾಮೆಂಟ್‌ಗಳು

- Follow us on

- Google Search