ಕವಿತೆ: ಅಪ್ಪ

ಕೇಳದೆಯೇ ಎಲ್ಲವನ್ನು ಕೊಡಿಸುವವನು 
ಹೇಳದೆಯೇ ಎಲ್ಲವನ್ನು ಅರ್ಥಮಾಡಿಕೊಳ್ಳುವವನು 
ಕಷ್ಟವೆಂದರೇನು ಎಂಬುದನ್ನು ಅರಿತವನು 
ಕುಟುಂಬಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವನು 

ತನ್ನವರಿಗಾಗಿ ಮಿಡಿಯುವ ಹೃದಯವುಳ್ಳವನು 
ಖರ್ಚು ಹೆಚ್ಚಾದಾಗ ಹಲ್ಲು ಕಡಿಯುವವನು 
ತಾನೆಷ್ಟು ಅನುಭವಿಸದರೇನು ನೋವು ಅನುಮಾನ 
ತನ್ನ ಕುಟುಂಬ ಸಂತೋಷವಾಗಿರಲಿ ಅನುದಿನ


ಯಾವತ್ತೂ ಕೇಳಿಲ್ಲ, ಯಾವತ್ತೂ ಹೇಳಿಲ್ಲ 
ನಮಗಾಗಿ ಕಷ್ಟಪಡದ ದಿನವಿಲ್ಲ 
ಮನಸ್ಸಿನಲ್ಲಿ ಮಗು, ಮುಖದಲ್ಲಿ ನಗು 
ಅವನಿಗೆ ಬೇಕಾಗಿಲ್ಲ ಜಗತ್ತಿನ ಆಗುಹೋಗು 

ತಪ್ಪು ಮಾಡಿದಾಗ ನಮ್ಮನ್ನು ಸರಿಪಡಿಸಿ 
ದುಃಖವಾದಾಗ ನಮ್ಮನ್ನು ಸಂತಸಗೊಳಿಸಿ 
ಬಂದ ಆದಾಯದಲ್ಲಿ ಆದಷ್ಟು ಉಳಿಸಿ 
ನಮ್ಮನೆಲ್ಲ ಸಾಕಿದ್ದಾರೆ ಜಗತ್ತನ್ನು ಎದುರಿಸಿ.  

ಕಾಮೆಂಟ್‌ಗಳು

- Follow us on

- Google Search