1. ನರಪ್ರಾಣಿ
ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಷ್ಟೆಲ್ಲಾ ನಾಟಕಗಳಾಡುತ್ತಾನೆ, ಹೇಗೆಲ್ಲ ಜನರಿಗೆ ಮೋಸ ಮಾಡುತ್ತಾನೆ , ತನಗೆ ತಿಳಿದು ಸಹ ತನ್ನನ್ನು ತಾನು ಹೇಗೆ ವಂಚಿಸಿಕೊಳ್ಳುತ್ತಾನೆ ಎನ್ನುವ ಕಥಾವಸ್ತುಗಳ ಆಧಾರದ ಮೇಲೆ ಹಲವಾರು ಸಣ್ಣ ಸಣ್ಣ ಕಥೆಗಳನ್ನು ಒಳಗೊಂಡಿರುವ ಸುಂದರ ಪುಸ್ತಕವೇ ನರಪ್ರಾಣಿ. ಪುಸ್ತಕದ ಹೆಸರೇ ಹೇಳುವಂತೆ ಮನುಷ್ಯನೂ ಒಬ್ಬ ಪ್ರಾಣಿ. ತನ್ನ ಸುಖಕ್ಕಾಗಿ ಹಾಗು ಹೊಟ್ಟೆ ಪಾಡಿಗಾಗಿ ಹೇಗೆ ಇತರ ಪ್ರಾಣಿಗಳು ಮೋಸ , ಸಂಚು, ಬೇಟೆಯ ದಾರಿ ಹಿಡಿಯುತ್ತವೆಯೋ ಅಂತೆಯೇ ಮನುಷ್ಯ ಪ್ರಾಣಿಯೂ ತನ್ನ ಜೀವನ ಸಾಗಿಸಲು ಜನರಿಗೆ ವಿವಿಧ ರೀತಿಯಲ್ಲಿ ಮೋಸ ಮಾಡುವ ಕೆಲಸವನ್ನು ಮಾಡುತ್ತಾನೆ / ಮಾಡುತ್ತಾಳೆ.
ಈ ಕಥೆಗಳಲ್ಲಿ ಬರುವ ಹಲವಾರು ಪಾತ್ರಗಳು ನಮಗೆ ಅನ್ವಯಿಸುತ್ತವೆ. ನಮಗೆ ತಿಳಿದು ಇನ್ನೊಬ್ಬರಿಗೆ ದ್ರೋಹವನ್ನು ಬಗೆಯುವ ನಮ್ಮ ಮೂರ್ಖತನಕ್ಕೆ ಹಿಡಿದ ಕನ್ನಡಿಯಂತಿವೆ ಪುಸ್ತಕದಲ್ಲಿರುವ ಕಥೆಗಳು. ಬೀಚಿಯವರ ಸಾಹಿತ್ಯವನ್ನು ಓದಲು ಅಥವಾ ಅರ್ಥ ಮಾಡಿಕೊಳ್ಳಲು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಬುದ್ಧಿ ಇರಬೇಕು. ಆಗ ಮಾತ್ರ ಓದಿನಿಂದ ಏನಾದರು ಒಳ್ಳೆಯ ಬದಲಾವಣೆಗಳು ಸಾಧ್ಯ.
ಈ ಪುಸ್ತಕವನ್ನು ಆನ್ಲೈನ್ ಮೂಲಕ ಖರೀದಿಸಲು ಕೆಳಗೆ ನೀಡಿರುವ ಲಿಂಕ್ ಬಳಸಿ
https://amzn.to/3fg9YeZ
ಇದು ಒಂದು ಪತ್ತೇದಾರಿ ಕಾದಂಬರಿ. ಬೀಚಿಯವರ ಒಂದು ಹೊಸ ಪ್ರಯತ್ನದಂತೆ ಕಂಡುಬರುತ್ತದೆ. ಕಾದಂಬರಿ ಭೀಮಾರೆಡ್ಡಿಯ ಕೊಲೆಯ ಮೂಲಕ ಆರಂಭವಾಗಿ ಅದರ ತನಿಖೆ ಹಾಗು ಸಾಕ್ಷಿಗಳನ್ನು ಹುಡುಕುವುದು ಮತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಪೊಲೀಸರ ಸುತ್ತ ನಡೆಯುವ ವಿಷಯವನ್ನು ಒಳಗೊಂಡಿದೆ.
ಈ ಪುಸ್ತಕವನ್ನು ಆನ್ಲೈನ್ ಮೂಲಕ ಖರೀದಿಸಲು ಕೆಳಗೆ ನೀಡಿರುವ ಲಿಂಕ್ ಬಳಸಿ
2. ಸತ್ತವನು ಎದ್ದು ಬಂದಾಗ
![]() |
https://amzn.to/3fwEp0L |
ಇದು ಒಂದು ಪತ್ತೇದಾರಿ ಕಾದಂಬರಿ. ಬೀಚಿಯವರ ಒಂದು ಹೊಸ ಪ್ರಯತ್ನದಂತೆ ಕಂಡುಬರುತ್ತದೆ. ಕಾದಂಬರಿ ಭೀಮಾರೆಡ್ಡಿಯ ಕೊಲೆಯ ಮೂಲಕ ಆರಂಭವಾಗಿ ಅದರ ತನಿಖೆ ಹಾಗು ಸಾಕ್ಷಿಗಳನ್ನು ಹುಡುಕುವುದು ಮತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಪೊಲೀಸರ ಸುತ್ತ ನಡೆಯುವ ವಿಷಯವನ್ನು ಒಳಗೊಂಡಿದೆ.
ಎಂದಿನಂತೆ ಬೀಚಿಯವರ ಹಾಸ್ಯ ಬರಹದಲ್ಲಿ ಹಾಸುಹೊಕ್ಕಾಗಲಿದೆ. ಪ್ರತಿಯೊಂದು ಪಾತ್ರವೂ ತನ್ನದೇ ವಿಶೇಷಗಳನ್ನು ಒಳಗೊಂಡಿದೆ. ಹೊಸತಾಗಿ ಕೆಲಸಕ್ಕೆ ಸೇರಿದ ಪೊಲೀಸ್ ಒಬ್ಬನಾದರೆ, ವರ್ಷಾನುಗಟ್ಟಲೇ ಕೆಲಸದಲ್ಲಿ ಇರುವ ಅನುಭವಸ್ಥ ಪೊಲೀಸರು ಒಂದು ಕಡೆ. ಕಾದಂಬರಿ ಅಷ್ಟು ದೀರ್ಘವಾಗಿಲ್ಲದಿದ್ದರೂ ಚಿಕ್ಕದಾಗಿ ಚೊಕ್ಕವಾಗಿದೆ.
ಈ ಪುಸ್ತಕವನ್ನು ಆನ್ಲೈನ್ ಮೂಲಕ ಖರೀದಿಸಲು ಕೆಳಗೆ ನೀಡಿರುವ ಲಿಂಕ್ ಬಳಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ