ಕವಿತೆ: ಮೊಬೈಲು

ಎಲ್ಲರ ಮನೆಗೂ ಬಂದಿವೆ ಮೊಬೈಲುಗಳು 
ಮೀಸಲಾಗಿವೆ ಇವಕ್ಕೆ ಯುವಕರ ಕೈಗಳು 
ಆನ್ಲೈನ್ ಪಾಠದಲ್ಲಿ ಮುಳುಗಿದ್ದಾರೆ ಮಕ್ಕಳು 
ಭ್ರಮೆಯ ಲೋಕ ಸಾಮಾಜಿಕ ಜಾಲತಾಣಗಳು 

ಫೇಸ್ಬುಕ್ ಅಲ್ಲಿ ನಮ್ಮವರು ಚಿಂತಕರು 
ಆದರೆ ಅವರಲ್ಲಿ ಹಲವರು ಕೆಲಸವಿಲ್ಲದ ಯುವಕರು 
ಸುಳ್ಳು ಸುದ್ಧಿಗಳಿಗೆ ಆಗಿದ್ದಾರೆ ವಿತರಕರು 
ಕಳ್ಳ ಕಾಕರು ಆಗಿದ್ದಾರೆ ಸಮಾಜ ಸೇವಕರು 



ಹಾಕುವ ಪೋಸ್ಟ್ಗಳಿಗೆ ಮಿತಿಯಿಲ್ಲ 
ಸುಳ್ಳು ಸತ್ಯಗಳ ಅರಿವಿಲ್ಲ 
ತಮ್ಮ ಜವಾಬ್ದಾರಿಗಳ ಅರಿವಿಲ್ಲ 
ತಿರುಪೆ ಶೋಕಿಗೇನು ಕಡಿಮೆಯಿಲ್ಲ 
 
ಪ್ರತಿಯೊಂದು ವಿಚಾರಕ್ಕೂ ಇದ್ದಾರೆ ಹಿಂಬಾಲಕರು 
ಹೆಚ್ಚಿನವರು ಮೀಸೆ ಮೂಡದ ಬಾಲಕರು 
ಅವರನ್ನು ನಂಬಿ ನೀವಾದರೆ  ಉಗ್ರ ಹೋರಾಟಗಾರರು 
ಮನೆಗೆ ಬರುತ್ತಾರೆ ಪೊಲೀಸರು

ಕಾಮೆಂಟ್‌ಗಳು

- Follow us on

- Google Search