ಮನಸ್ಸಿನಲ್ಲಿ ಮಾತಾಡುವ ಭಾಷೆ ಕನ್ನಡ
ಕನಸ್ಸಿನಲ್ಲಿ ಕನವರಿಸುವ ಭಾಷೆ ಕನ್ನಡ
ನಮ್ಮ ನಾಡಿನಲ್ಲಿ ಏಕೆ ಬೇಕು ಎನ್ನಡ ಎಕ್ಕಡ
ಅಷ್ಟೊಂದು ಕಷ್ಟವೇ ಕಲಿಯಲು ಕನ್ನಡ
ಅರಿವಿಗೆ ಬರುತ್ತಿದೆ ಬೆಲೆಯೇರಿಕೆ
ನಿಮ್ಮ ಅರಿವಿಗೆ ಬಂದಿದೆಯೇ ಹಿಂದಿ ಹೇರಿಕೆ ?
ಹಿರಿಯರು ಮಾಡಿಕೊಟ್ಟಿದ್ದಾರೆ ನಮಗೆ ಅರಿಕೆ
ಇಂಗ್ಲಿಷ್ ಮರದ ತೊಲೆಯಾದರೆ, ಹಿಂದಿ ಕಬ್ಬಿಣದ ಸಲಾಕೆ
ಕನ್ನಡವೆಂದರೆ ಕೀಳರಿಮೆಯಾಕೆ ?
ಕನ್ನಡದಲ್ಲಿ ಸೇವೆ ಕೇಳಲು ಹಿಂಜರಿಕೆಯಾಕೆ ?
ಕರ್ನಾಟಕದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡಬೇಕೆ ?
ಇಷ್ಟೆಲ್ಲಾ ಭಾಷೆಗೆ ಅನ್ಯಾಯವಾಗುತ್ತಿದ್ದರು ಕನ್ನಡಿಗರು ಮೌನವಾಗಿರುವುದೇಕೆ ?
ಎಲ್ಲಾ ಭಾಷೆಗಳನ್ನು ಗೌರವಿಸೋಣ
ಕನ್ನಡವನ್ನು ಬೆಳೆಸೋಣ, ಎಲ್ಲಾ ಕಡೆ ಬಳಸೋಣ
ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸೋಣ
ಕನ್ನಡದಲ್ಲಿ ಕಲಿಕೆಯನ್ನು ಸುಲಲಿತವಾಗಿಸೋಣ.
ಕಾಣಲಿ ಕನ್ನಡ, ಕೇಳಲಿ ಕನ್ನಡ
ನುಡಿ ಕನ್ನಡ, ನಡೆ ಕನ್ನಡ
ಕರ್ನಾಟಕದ ಜೀವನಾಡಿ ಕನ್ನಡ
ಮರೆಯದಿರು ನಾಡ ಭಾಷೆಯ ಸೊಗಡ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ