ದೇಶದೆಲ್ಲೆಡೆ ನರ್ತಿಸುತ್ತಿದೆ ಕೊರೊನ
ಜನರ ಜೀವನವಾಗಿದೆ ತಲ್ಲಣ
ಕಿವಿಗೊಟ್ಟು ಕೇಳಿ ಜನರ ಕಷ್ಟವನ್ನ
ಜೀವನ ಸಾಗಿಸಲು ಕಡಿಮೆಯಾಗಿದೆ ತ್ರಾಣ
ಇಂದಿಗೂ ಹೆಚ್ಚಾಗುತ್ತಿದೆ ಭ್ರಷ್ಟಾಚಾರ
ಎಲ್ಲಿ ಹೋಯಿತು ನಿಮ್ಮ ಆಚಾರ ವಿಚಾರ
ಮತ್ತದೇ ಹಾಡು ಅದೇ ರಾಗ
ಬಡವರ ಪಾಲಿಗಲ್ಲ ಈ ಜಗ
ಬಡವರ ದುಡ್ಡು ಹೊಡೆದು ಮಾಡಿರುವ ನಿಮ್ಮ ಆಸ್ತಿ
ದಿನದಿಂದ ದಿನಕ್ಕೆ ಆಗುತ್ತಿದೆ ಅದು ಜಾಸ್ತಿ
ನೀಯತ್ತಾಗಿ ದುಡಿಯುವವರಿಗೆ ಕೆಲಸ, ಪುಂಡರಿಗೆ ಮೋಜು ಮಸ್ತಿ
ಕೊನೆಯಲ್ಲಿ ತೇಲಿಬಿಡುವರು ನದಿಯಲ್ಲಿ ನಿಮ್ಮ ಅಸ್ಥಿ
ರೈತರು ಬೆಳೆ ಬೆಳೆಯುತ್ತಿದ್ದಾರೆ
ಮಧ್ಯವರ್ತಿಗಳು ಅವರನ್ನು ದೋಚುತ್ತಿದ್ದಾರೆ
ಇವೆಲ್ಲವನ್ನು ತಿಳಿದವರು ನೋಡುತ್ತಿದ್ದಾರೆ
ವಿದ್ಯಾಭ್ಯಾಸವೊಂದೇ ನಮ್ಮ ಜೀವನಕ್ಕೆ ಆಸರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ