ಕೇಳಿದ್ದನ್ನೇ ಕೇಳಿ, ಹೇಳಿದ್ದನ್ನೇ ಹೇಳಿ ಸಾಕಾಗಿದೆ
ನಮ್ಮನ್ನು ವ್ಯಕ್ತಪಡಿಸಲು ಅವಕಾಶವೊಂದು ಒದಗಿಬಂದಿದೆ
ಬೇರೆಯವರ ಮೆಚ್ಚಿಸಿ ಏನಾಗಬೇಕಿದೆ
ಸ್ಪಷ್ಟ ಗುರಿಯೊಂದಿಗೆ ಮುಂದೆ ಸಾಗಬೇಕಾಗಿದೆ
ಸಾಗಲು ದಾರಿಗಳು ನೂರಾರಿವೆ
ಮಾರ್ಗದರ್ಶನ ನೀಡಲು ಬಾಯಿಗಳು ಹಾತೊರೆಯುತ್ತಿವೆ
ನಿನ್ನ ಮೇಲೆ ನಿನಗೆ ಅನುಮಾನವೇ ?
ಅನುಮಾನ ನಿನಗೆ ನೀನೆ ಮಾಡಿಕೊಂಡ ಅವಮಾನವಲ್ಲವೇ!
ಗುರಿಯ ಮೇಲಿರಲಿ ಗಮನ
ಆಗ ಸಾಧ್ಯ ಗೆಲುವಿನ ಆಗಮನ
ಸಹಾಯ ಮಾಡಿದವರಿಗೆ ಇರಲೊಂದು ನಮನ
ನೆಮ್ಮದಿಯ ಬಾಳಾಗಲಿ ಪ್ರತಿದಿನ
ಉತ್ತಮ ಹವ್ಯಾಸಗಳಾಗಲಿ ಜೀವನದ ಭಾಗ
ಬೇಜಾರಾಗಲು ಅಂತದ್ದೇನು ಆಗಿದೆ ಈಗ
ಎಂದಿಗೂ ಜೊತೆಯಿರಲಿ ನಗುಮೊಗ
ಆಗ ಭೂಲೋಕವಾಗುವುದು ಸ್ವರ್ಗ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ