ಹನಿಗವನಗಳು

೧. ಸುಂದರಿ
ಅವಳು ನಿಜಕ್ಕೂ ಅತಿ ಸುಂದರಿ,
ಅವಳು ಇತರರಿಗೆ ಮಾದರಿ.
ಪಡ್ಡೆ ಹುಡುಗರಿಗೆ ಅವಳು ಗುರಿ,
ಅವಳ ಹಿಂದೆ ತಿರುಗಿ ತಿರುಗಿ ಆಗಿದ್ದಾರೆ ಬುಗುರಿ.

೨. ಪ್ರಶ್ನೆ
ಯಾರು ಬೇಕಾದರೂ ಕೇಳಬಹುದು ಪ್ರಶ್ನೆ,
ಉತ್ತರಿಸಬೇಕು ನೀವು ಸುಮ್ಮನೆ.
ಸುಮ್ಮನಿದ್ದರೆ ಕಡಿಮೆಯಾಗುವುದಿಲ್ಲ ಯಾತನೆ,
ಸುಮ್ಮನಿರುವುದು ಕೆಲವರಿಗೆ ಸಮ್ಮತಿಯ ಸೂಚನೆ.

೩. ದನ
ಮನುಷ್ಯರ ಜೀವನದ ಭಾಗ ನೀನು
ಯಾರೇನು ಅಂದುಕೊಂಡರೆ ನಿನಗೇನು.
ಕೆಲವರಿಗೆ ನೀನು ಸಂಪತ್ತು
ಅಡಿಕೆ ತೋಟದ ಚಿಗುರಿಗೆ ನಿನ್ನ ಆಪತ್ತು

೪. ದಿನ
ಕಳೆದು ಹೋಗುತ್ತಿವೆ ದಿನಗಳು 
ಕಂಗಾಲಾಗಿದ್ದಾರೆ ಜನಗಳು
ದೊಡ್ಡವರಾಗುತ್ತಿದ್ದಾರೆ ಮಕ್ಕಳು
ಮತ್ತೆ ಬರುವುದೇ ಕಳೆದ ದಿನಗಳು.

ಕಾಮೆಂಟ್‌ಗಳು

- Follow us on

- Google Search