ಸ್ವಾಮಿ ವಿವೇಕಾನಂದರ ಪುಸ್ತಕಗಳು

ಸಾಮಾನ್ಯವಾಗಿ ವಿವೇಕಾನಂದರ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬಹಳಷ್ಟು ಜನರಿಗೆ ಇರುತ್ತದೆ. ಆದರೆ, ನಾವು ಮಾಡುವ ದೊಡ್ಡ ತಪ್ಪೆಂದರೆ ಅವರನ್ನು ಆರಾಧಿಸುವ ಭಕ್ತರ ಭಾಷಣಗಳನ್ನೋ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್ಗಳನ್ನೋ ನೋಡಿಕೊಂಡು ಅಷ್ಟಕ್ಕೇ ಸುಮ್ಮನಾಗಿ ಬಿಡುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಬೆಂಬಲಕ್ಕಾಗಿ ಸಿಕ್ಕ ಸಿಕ್ಕವರೆಲ್ಲ ಮಹಾನ್ ವ್ಯಕ್ತಿಗಳನ್ನು ಹೊಗಳುವ ಅಥವಾ ತೆಗಳುವ ಕೆಲಸಕ್ಕೆ ಹಿಂದು ಮುಂದು ಯೋಚಿಸದೆ ಧುಮುಕಿಬಿಡುತ್ತಾರೆ. 


ನಿಮಗೆ ಯಾವುದೇ ಮಹಾನ್ ಸಾಧಕರ ಅಥವಾ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಅಸಕ್ತಿಯಿದ್ದಲ್ಲಿ ಬೇರೆ ಯಾರೋ ಮಾಡುವ ಭಾಷಣಗಳನ್ನೋ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಲೆಬುಡವಿಲ್ಲದ ವಾದವಿವಾದಗಳಿಗೆ ಕಿವಿಗೊಡಬೇಡಿ. ಅವರೇ ರಚಿಸಿರುವ ಪುಸ್ತಕಗಳು, ಅವರ ಆತ್ಮಕಥೆ, ಅವರ ಸಮಗ್ರ  ಭಾಷಣಗಳು ಹಾಗು ಅವರ ಬರಹಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ವಿವೇಕಾನಂದರ ಎಲ್ಲ ಪ್ರವಚನಗಳು ಹಾಗು ಬರಹಗಳು ಪುಸ್ತಕಗಳ ರೂಪದಲ್ಲಿ ಲಭ್ಯವಿವೆ. ಸಾಧ್ಯವಾದಷ್ಟು ಮೂಲ ರೂಪದಲ್ಲಿಯೇ ಪುಸ್ತಕಗಳನ್ನು ಓದಲು ಪ್ರಯತ್ನಿಸಿ. ಆಗ ಮಾತ್ರ ಅವರ ವಿಚಾರಧಾರೆಗಳ ಬಗ್ಗೆ ನಿಮಗೆ ಸರಿಯಾದ ಅಭಿಪ್ರಾಯ ಮೂಡಲು ಸಾಧ್ಯವಾಗುತ್ತದೆ.  

Volume 2 - Chapter 1 : Work and Its Secret (Page no: 6770) 

ನಿನ್ನೆ ನಾನು ಆ ಪುಸ್ತಕದಿಂದ ಓದಿದ ವಿಷಯಗಳ ಸಾರಾಂಶವನ್ನು ಓದುಗರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಲೇಖನವನ್ನು ಬರೆದಿದ್ದೇನೆ. 

ನಾವು ಸಾಧಾರಣವಾಗಿ ಯಾವುದೇ ಗುರಿಯನ್ನು ಸಾಧಿಸಬೇಕು ಎಂದು ಯೋಚಿಸಿದಾಗ ಅದನ್ನು ಸಾಧಿಸಿದ ನಂತರ ನಮಗೆಷ್ಟು ಹೆಮ್ಮೆಯಾಗುತ್ತದೆ, ಅದನ್ನು ಸಾಧಿಸಿದ ಮೇಲೆ ಆಗುವ ಪ್ರಯೋಜನಗಳು ಮುಂತಾದ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೇವೆ. ಪರೀಕ್ಷೆಯ ವಿಷಯಗಳನ್ನು ತೆಗೆದುಕೊಂಡರೂ ಅಷ್ಟೇ, ಅಂತಿಮ ಪರೀಕ್ಷೆಯ ಬಗ್ಗೆ ಅಥವಾ ಓದಿ ಮುಗಿಸುವುದರ ಬಗ್ಗೆಯೇ ಹೆಚ್ಚು ಆಲೋಚಿಸುತ್ತೇವೆ. ಕೆಲಸವನ್ನು ಪೂರ್ಣಗೊಳಿಸುವುದು ಅವಶ್ಯಕ, ಆದರೆ ಕೇವಲ ಅಷ್ಟೇ ಸಾಲದು. ಯಾವುದೇ ಗುರಿಯನ್ನು ಕಾರ್ಯಗತಗೊಳಿಸಲು ನಮಗೆ ಸರಿಯಾದ ದಾರಿಯು ತಿಳಿದಿರಬೇಕಾಗುತ್ತದೆ. 

ಮಾಡಬೇಕಾದ ಕೆಲಸಗಳ ಬಗ್ಗೆ ಕೇವಲ ಉತ್ತಮ ಗುರಿಯೊಂದಿದ್ದರೆ ಸಾಲದು. ಅದಕ್ಕೆ ಸಾಗಬೇಕಾದ ದಾರಿಯ ಬಗ್ಗೆ ಹಾಗು ಎದುರಾಗುವ ಕಷ್ಟಗಳನ್ನು ಎದುರಿಸುವ ಸ್ಪಷ್ಟತೆ ನಮ್ಮ ಮನಸ್ಸಿನಲ್ಲಿ ಇದ್ದಾಗ ಮಾತ್ರ ಗುರಿಯ ಸಾಧನೆ ಸಾಧ್ಯವಾಗುತ್ತದೆ. ನಾವು ಮಾಡಬೇಕಾದ ಯಾವುದೇ ಕೆಲಸವಿರಲಿ, ಆ ಕೆಲಸವನ್ನು ಮಾಡಿ ಮುಗಿಸುವ ಪ್ರತಿಯೊಂದು ಹಂತದ ಮೇಲು ಅಷ್ಟೇ ಏಕಾಗ್ರತೆಯನ್ನು ನಾವು ರೂಡಿಸಿಕೊಳ್ಳಬೇಕು. ಆಗ ನಾವು ಇಟ್ಟುಕೊಂಡ ಗುರಿಯು ಸಾರ್ಥಕವಾಗುತ್ತದೆ. ನಾವು ಮಾಡಬೇಕಾದ ಕೆಲಸಗಳಲ್ಲಿ ಸೋಲಾದಾಗ ಮಾತ್ರ ನಾವು ಕೆಲಸ ಪೂರ್ಣಗೊಳಿಸಲು ತೆಗೆದುಕೊಂಡ ದಾರಿಯ ಬಗ್ಗೆ ಅವಲೋಕನ ಮಾಡುತ್ತೇವೆ. 

ನಮ್ಮ ಜೀವನದ ಎಲ್ಲ ದುಃಖಗಳ ಮೂಲ ನಮ್ಮ ಹಚ್ಚಿಕೊಳ್ಳುವಿಕೆ. ಯಾವುದೇ ವಿಷಯವಾದರೂ ಸರಿ, ನಮಗೆ ಇಷ್ಟವಾದರೆ ಅದರ ಮೇಲೆ ಸಾಕಷ್ಟು ಸಮಯ ಸುರಿಯುತ್ತೇವೆ. ಅದರಲ್ಲಿ ಪರಿಣಿತಿ ಹೊಂದುವ ಆಸೆ ಹೊಂದುತ್ತೇವೆ. ಹೀಗಾಗಿ ನಮ್ಮ ಅಗತ್ಯಕ್ಕಿಂತಲೂ ಹೆಚ್ಚಾಗಿ ಕೆಲವೊಂದು ವಿಷಯಗಳನ್ನು ಹಚ್ಚಿಕೊಳ್ಳುತ್ತೇವೆ. ವಿಪರ್ಯಾಸವೆಂದರೆ, ಇಷ್ಟು ಆಸಕ್ತಿ ಹಾಗು ಪ್ರೀತಿಯನ್ನು ಕೆಲಸದ ಮೇಲೆ ತೋರಿಸದೆ ಹೋದರೆ ದೊಡ್ಡ ಸಾಧನೆ ಮಾಡುವುದಿರಲಿ, ಕೆಲಸವನ್ನು ಸರಿಯಾಗಿ ನಿರ್ವಹಿಸುವುದು ಕಷ್ಟವಾಗಬಹುದು. 

ನಮಗೆ ನಮ್ಮ ಜೀವನದ ದುಃಖಗಳಿಂದ ದೂರವಾಗುವ ಇಚ್ಛೆಯಿದ್ದಲ್ಲಿ ನಮಗೆ ಇಷ್ಟವಾದ ಕೆಲಸಗಳಲ್ಲಿ ಏಕಾಗ್ರತೆಯೊಂದಿಗೆ ತಲ್ಲೀನರಾಗುವ ಸಾಮರ್ಥ್ಯ ಹಾಗು ಬೇಡವೆನಿಸಿದಾಗ ಕೆಲಸದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳುವ ಮಾನಸಿಕ ಸಾಮರ್ಥ್ಯವೂ ಇರಬೇಕು. ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರತಿನಿತ್ಯ ಸಾಕಷ್ಟು ಅಭ್ಯಾಸದ ಅಗತ್ಯವಿರುತ್ತದೆ. ಆದರೆ ಇಂದಿನ ಜೀವನದಲ್ಲಿ ನಾವು ಗಮನಿಸಬಹುದು, ಒಂದೋ ನಮಗೆ ಮಾಡುವ ಕೆಲಸದಲ್ಲಿ ತನ್ಮಯತೆ ಇರುವುದಿಲ್ಲ ಅಥವಾ ನಾವು ಸಂಪೂರ್ಣವಾಗಿ ಕೆಲಸದಲ್ಲೇ ಮುಳುಗಿ ಹೋಗಿರುತ್ತೇವೆ. ಈ ರೀತಿಯ ನಡವಳಿಕೆ ದುಃಖವನ್ನಲ್ಲದೆ ಬೇರೆನೆನ್ನು ತರಲು ಸಾಧ್ಯ ? 

ಉದಾಹರೆಣೆಗೆ ಹೇಳಬೇಕೆಂದರೆ, ಮಕರಂದ ಹೀರಲು ಬರುವ ಚಿಟ್ಟೆಗಳ ಕಾಲುಗಳು ಅದಕ್ಕೆ ಅಂಟಿಕೊಳ್ಳುತ್ತವೆ. ನಾವು ಕೆಲಸ ಮಾಡಬೇಕೆಂದು ನಿರ್ಧರಿಸಿದರೆ ನಾವೇ ಇತರರಿಗೆ ಕೆಲಸಗಾರರಾಗುತ್ತೇವೆ. ಜೀವನದಲ್ಲಿ ನಮಗೆ ಬೇಕಾದ ಎಲ್ಲವೂ ದೊರೆಯುತ್ತದೆ. ಆದರೆ, ಒಂದು ಷರತ್ತಿನೊಂದಿಗೆ. ಏನೆಂದರೆ, ಅದನ್ನು ಪರಿಸರ ನಮ್ಮಿಂದ ವಾಪಸ್ಸು ಕೇಳುತ್ತದೆ. ನಿಮಗೆ ಈ ಜಗತ್ತಿನಿಂದ ಏನೇ ದೊರೆತಿರಲಿ, ಅದನ್ನು ಒಂದು ದಿನ ವಾಪಸ್ಸು ಪ್ರಕೃತಿಗೆ ನೀಡಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯಾವಾಗ ನಾವು ಕೊಡಲು ನಿರಾಕರಿಸುತ್ತೇವೆಯೋ, ಆಗ ಅದು ನಮ್ಮಿಂದ ದೂರವಾದಾಗ ಆಗುವ ನೋವಿಗೆ ದುಃಖಿಸಬೇಕಾಗುತ್ತದೆ. 

ದೌರ್ಬಲ್ಯಕ್ಕೆ ಈ ಜಗತ್ತಿನಲ್ಲಿ ಉಳಿಗಾಲವಿಲ್ಲ. ದೌರ್ಬಲ್ಯವೇ ನಮ್ಮಲ್ಲಿ ಮೌಢ್ಯತೆ ಹಾಗು ಕ್ರೌರ್ಯವನ್ನು ಪ್ರೇರೇಪಿಸುತ್ತದೆ. ಇದರಿಂದಾಗಿ ನಿಮ್ಮೆಲ್ಲಾ ದೌರ್ಬಲ್ಯಗಳಿಂದ ಹೊರಬನ್ನಿ. ಮಾನಸಿಕವಾಗಿಯೂ ದೈಹಿಕವಾಗಿಯೂ ಶಕ್ತಿವಂತರಾಗಿ. ಆಗ ಮಾತ್ರ ಜಗತ್ತಿನ ನೋವುಗಳನ್ನು ಮೀರಿ ಬೆಳೆಯುವ ಸಾಮರ್ಥ್ಯ ನಮ್ಮಲ್ಲಿ ಮೂಡುತ್ತದೆ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. 

ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕೊಡುಗೆಯನ್ನು ಜಗತ್ತಿಗೆ ಯಾವುದೇ ಹಿಂಜರಿಕೆಯಿಲ್ಲದೆ ನೀಡಿ. ಅದರ ಫಲಗಳು ನಿಮಗೆ ನೂರು ಪಟ್ಟಾಗಿ ಯಾವಾಗಲೋ ಹಿಂತಿರುಗಿ ಬರುತ್ತವೆ. ಆದರೆ, ಪ್ರತಿಫಲದ ಅಪೇಕ್ಷೆಯೊಂದಿಗೆ ಯಾವುದೇ ಸೇವೆ ಮಾಡಬೇಡಿ. ಇದನ್ನೇ ಭಗವದ್ಗೀತೆಯಲ್ಲೂ ಹೇಳಲಾಗಿದೆ. ನಮ್ಮ ವ್ಯಕ್ತಿತ್ವವನ್ನು ಈ ರೀತಿಯಾಗಿ ಬೆಳೆಸಿಕೊಳ್ಳೋಣ. ಅದಕ್ಕೆ ಸಾಕಷ್ಟು ಸಮಯ ಹಾಗು ಅಭ್ಯಾಸದ ಅಗತ್ಯವಿದೆ. ಜಗತ್ತು ನಮ್ಮ ವ್ಯಕ್ತಿತ್ವದ ಮೇಲೆ ರೂಪಗೊಳ್ಳುತ್ತದೆ. ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಿಕೊಳ್ಳುವತ್ತ ನಮ್ಮ ಕಾರ್ಯಗಳು ಇರಲಿ. 
***
ಸ್ವಾಮಿ ವಿವೇಕಾನಂದರ ಸಮಗ್ರ ಬರಹಗಳು ಹಾಗು ಒಳಗೊಂಡ eBook ಅಮೆಜಾನ್ ಕಿಂಡಲ್ ಅಪ್ಲಿಕೇಶನ್ ಅಲ್ಲಿ ಲಭ್ಯವಿದೆ. ಇದರಲ್ಲಿ ಹಣ ಪಾವತಿಸಿ ಪುಸ್ತಕಗಳನ್ನು ಕೊಂಡು  ಓದಬಹುದು. ಕಿಂಡಲ್ ಡಿವೈಸ್ ಬೇಕಾಗಿಲ್ಲ. ಮೊಬೈಲ್  ಹಾಗು ಲ್ಯಾಪ್ಟಾಪ್ ಅಲ್ಲಿ ಕಿಂಡಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡರೆ ಸಾಕು. ಕಿಂಡಲ್ ಅಪ್ಲಿಕೇಶನ್ ಲಿಂಕ್  👇

https://play.google.com/store/apps/details?id=com.amazon.kindle&hl=en_IN&gl=US

ವಿವೇಕಾನಂದರ ಎಲ್ಲಾ ಪುಸ್ತಕಗಳು 👇(ಬೆಲೆ : 230Rs, eBook)

https://amzn.to/3uJuhoY

Best eBooks Available on Amazon

ವಿಡಿಯೋದಲ್ಲಿ ಹಾಕಿರುವ ಪುಸ್ತಕಗಳನ್ನು ಖರೀದಿಸುವ ಅಮೆಜಾನ್ ಲಿಂಕ್ 👇

ಕಾಮೆಂಟ್‌ಗಳು

- Follow us on

- Google Search