ಅರಿಷಡ್ವರ್ಗ - ಕನ್ನಡ ಕ್ರೈಂ ಥ್ರಿಲ್ಲರ್ ಸಿನಿಮಾ


ಮೊನ್ನೆ ಯಾರೋ ಟ್ವಿಟ್ಟರ್ ಅಲ್ಲಿ ಈ ಸಿನಿಮಾದ ಬಗ್ಗೆ ಬರೆದಿದ್ದರು. ಮಧ್ಯಾಹ್ನ ಊಟ ಮಾಡಿದ ನಂತರ ಒಂದು ಸಿನಿಮಾ ವೀಕ್ಷಿಸುವ ಆಸೆ ಆಯಿತು. ಹಾಗಾಗಿ ಅಮೆಜಾನ್ ಪ್ರೈಮ್ ಅಲ್ಲಿ ನೋಡಲು ಶುರು ಮಾಡಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಕೊನೆಯವರೆಗೂ ಇತ್ತು. ಪೊಲೀಸ್ ಪಾತ್ರ ನನಗೆ ಬಹಳ ಇಷ್ಟ ಆಯಿತು. ಚಿತ್ರದ ಹೆಸರೇ ಹೇಳುವಂತೆ ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ಅರಿಷಡ್ವರ್ಗಗಳನ್ನು ಪ್ರತಿನಿಧಿಸುತ್ತವೆ. ಸಮಾಜದ ಮುಂದೆ ನಾವೆಲ್ಲರೂ ಒಂದೊಂದು ಪಾತ್ರವನ್ನು ನಿರ್ವಹಿಸುತ್ತಿರುತ್ತೇವೆ. ಆದರೆ, ನಾವೆಲ್ಲರೂ ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭಗಳಿಂದ ಕೂಡಿದವರೇ ಆಗಿರುತ್ತೇವೆ. ನಮಗೆ ಏನು ಬೇಕಾಗಿರುತ್ತದೋ ಅದನ್ನು ಸನ್ನಿವೇಶಗಳಿಂದ ಪಡೆಯುತ್ತ ಜೀವನ ಸಾಗಿಸುತ್ತೇವೆ ಎಂಬ ಅಂಶವನ್ನು ಈ ಚಿತ್ರ ಧ್ವನಿಸುತ್ತದೆ. 

ಪೊಲೀಸ್ ಪಾತ್ರದಲ್ಲಿ ನಟ ನಂದಗೋಪಾಲ್ 

ಕಥೆಯ ಅಂತ್ಯ ಕೆಲವರಿಗೆ ಅಷ್ಟು ಇಷ್ಟವಾಗದೇ ಇರಬಹುದು ಅಥವಾ ಗೊಂದಲ ಉಂಟಾಗಬಹುದು. ಅವರಿಗೆ ಜೀವನದಲ್ಲಿ ಏನು ಕೊರತೆಯಿದೆ ಅಥವಾ ಏನು ಬೇಕಾಗಿದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಪಾತ್ರಗಳನ್ನು ಅವಲೋಕಿಸಿದರೆ ಸಿನಿಮಾ ಕಥೆ ಅರ್ಥವಾಗುತ್ತದೆ. ನನಗೆ ಬಹಳ ಇಷ್ಟವಾದ ದೃಶ್ಯವೆಂದರೆ, ಪೊಲೀಸ್ ಸ್ಟೇಷನ್ ಅಲ್ಲಿ ತಂದಿಟ್ಟ  ದೋಸೆ ಸರಿಯಾಗಿ ಇಲ್ಲದಿರುವ ಸನ್ನಿವೇಶ.  ಪೊಲೀಸ್ ಅಧಿಕಾರಿ ಪಾತ್ರವನ್ನು ನಟ ನಂದಗೋಪಾಲ್ ಬಹಳ ಚೆನ್ನಾಗಿ ನಿರ್ವಹಿಸದ್ದಾರೆ. 

ಕಾಮೆಂಟ್‌ಗಳು

- Follow us on

- Google Search