ಹೇಗಿದೆ ಹೀರೋ ?

ಹೀರೋ 


ಸಾಮಾನ್ಯವಾಗಿ ರಿಷಭ್ ಶೆಟ್ಟಿಯವರ ಯಾವುದೇ ಹೊಸ ಚಲನಚಿತ್ರ ಬರುತ್ತದೆ ಎಂದರೆ ಸಾಕಷ್ಟು ಮುಂಚಿತವಾಗಿಯೇ ಅಭಿಮಾನಿಗಳಿಗೆ ತಿಳಿದಿರುತ್ತದೆ. ಆದರೆ, ಮೊದಲ ಬಾರಿ ಲೊಕ್ಡೌನ್ ಮಾಡಿದಾಗ ಈ ಸಮಯದಲ್ಲಿ ಒಂದು ಚಿತ್ರವನ್ನು ಮಾಡೋಣ ಎಂಬ ಯೋಚನೆಯೊಂದಿಗೆ ಯಾವುದೇ ಪೂರ್ವ ತಯಾರಿಯಿಲ್ಲದೆ, ಇದ್ದಕ್ಕಿದಂತೆ ಒಂದಷ್ಟು ಕಲಾವಿದರನ್ನು ಸೇರಿಸಿ, ಕಡಿಮೆ ಸಮಯದಲ್ಲಿ ಮಾಡಿರುವ ಚಲನಚಿತ್ರ ಕನ್ನಡದ 'ಹೀರೋ'. ಮೊದಲೇ ಹೇಳಿದಂತೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದರಿಂದ ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಮೊದಲಿಗೆ ಇರಲಿಲ್ಲ. ಆದರೆ ಪೂರ್ತಿ ಕೆಲಸ ಮುಗಿದ ನಂತರ ರಿಷಬ್ ಅವರ ಹಲವು ಗೆಳೆಯರ ಸಲಹೆಯ  ಮೇರೆಗೆ ಇದನ್ನು ಚಿತ್ರಮಂದಿರಗಳಿಗೆ ಹೊಂದುವಂತೆ ಮಾರ್ಪಾಡುಗಳನ್ನು ಮಾಡಲಾಯಿತು. 


ಚಿತ್ರದ ಟ್ರೈಲರ್ ಹಾಗು ಹಿನ್ನಲೆ ಸಂಗೀತ ಇವುಗಳನ್ನು ಗಮನಿಸಿ ಇದು ಸಾಕಷ್ಟು ಆಕ್ಷನ್ ಇರುವ ಸಿನಿಮಾ ಎಂದು ಅಂದುಕೊಂಡಿದ್ದೆ. ಚಿತ್ರದ ಆರಂಭದಲ್ಲಿ ನಡೆಯುತ್ತಿದ್ದ ಸಂಭಾಷಣೆ ಹಾಗು ಅದಕ್ಕೆ ತಕ್ಕಂತೆ ಸಂಗೀತ ನನಗೆ ಬಹಳ ಇಷ್ಟವಾಯಿತು. ಆಮೇಲೆ ಕೇವಲ ಅವರಿಂದ ಓಡಿ ಹೋಗುವ ದೃಶ್ಯಗಳು ಹೆಚ್ಚಾಗಿವೆ. ರಿಷಭ್ ಶೆಟ್ಟಿ ಚಿತ್ರಗಳು ಹೆಚ್ಚಾಗಿ ಕಥೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಮಾಡುವ ಚಿತ್ರಗಳಾಗಿರುತ್ತವೆ. ಇದರಿಂದಾರಿ ರಿಷಬ್ ಅವರ ಚಿತ್ರಗಳೆಂದರೆ ನನಗೆ ಸಾಕಷ್ಟು ನಿರೀಕ್ಷೆ ಯಾವಾಗಲು ಇರುತ್ತದೆ. ಆದರೆ, ಚಿತ್ರ ತಯಾರಿಸಲು ತೆಗೆದುಕೊಂಡ ಸಮಯವನ್ನು ಪರಿಗಣಿಸಿದರೆ ಚೆನ್ನಾಗಿದೆ ಎಂದು ಹೇಳಬಹುದು. ಹೊಸಬರಿಗೆ ಸಾಕಷ್ಟು ಅವಕಾಶಗಳನ್ನು ನೀಡಿರುವುದು ಚಿತ್ರಕ್ಕೆ ಹೊಸ ಅನುಭವವನ್ನು ನೀಡಿದೆ. ಹಾಡುಗಳು ಚೆನ್ನಾಗಿವೆ. ನನಗೆ ಹೇಗೆ ಅನ್ನಿಸ್ತು ಅಂದರೆ ಚಿಕನ್ ಪೆಪ್ಪರ್ ಮಸಾಲಾಗೆ ಖಾರ ಕಡಿಮೆ ಆಯ್ತು ಅನ್ನೋ ಥರ ಫೀಲ್ ಆಯಿತು ಅಷ್ಟೇ.  

ಕಾಮೆಂಟ್‌ಗಳು

- Follow us on

- Google Search