ಇತ್ತೀಚಿಗೆ ನೋಡಿದ ಸಿನಿಮಾಗಳು

ಜೋಜಿ - ಮಲಯಾಳಂ ಭಾಷೆಯ ಸಿನಿಮಾ 


ಒಂದು ತಿಂಗಳ ಹಿಂದೆ ಬೆಂಗಳೂರಿಂದ ಮನೆಗೆ ಬರುವ ಸಂದರ್ಭದಲ್ಲಿ ನೋಡಿದ ಸಿನಿಮಾ ಇದು. ಚಿತ್ರಕಥೆ ಹಾಗು ನಟನೆ ಬಹಳ ಚೆನ್ನಾಗಿದೆ. ಚಿತ್ರದಲ್ಲಿನ ಪ್ರಮುಖ ಪಾತ್ರವನ್ನು ಖ್ಯಾತ ನಟ ಫಹಾದ್ ನಿರ್ವಹಿಸಿದ್ದಾರೆ. ಸಂಬಂಧಗಳಲ್ಲಿ ದುಡ್ಡು ಹೇಗೆ ಬಿರುಕನ್ನು ಮೂಡಿಸುತ್ತದೆ ಹಾಗು ಮನುಷ್ಯನ ಮನಸ್ಸಿನ ಆಲೋಚನಗಳು ಯಾವ ಮಟ್ಟಕ್ಕೆ ಇಳಿಯಬಹುದು ಎಂಬ ವಿಚಾರವನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ಅಲ್ಲಿ ಹೆಚ್ಚಿನ ಫೈಟಿಂಗ್ ಇಲ್ಲ. ಈ ರೀತಿಯ ಕೇವಲ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಮಾಡಿರುವ ಸಿನಿಮಾಗಳು ಆಕ್ಷನ್ ಸಿನಿಮಾಗಳನ್ನು ನೋಡುವವರಿಗೆ ಬೇಜಾರು ತರಿಸಬಹುದು. ಸಿನಿಮಾದಲ್ಲಿ ಯಾವುದೂ ಅತಿಯಾಗಿಲ್ಲ, ಅದೇ ಈ ಸಿನಿಮಾದ ಮೆಚ್ಚುವ ಸಂಗತಿ. ಒಂದು ಬಾರಿ ಆರಾಮಾಗಿ ನೋಡಬಹುದಾದ ಮಲಯಾಳಂ ಭಾಷೆಯ ಸಿನಿಮಾ ಜೋಜಿ.

ಕರ್ಣನ್ - ತಮಿಳು ಭಾಷೆಯ ಸಿನಿಮಾ


ನಾನು ನಿನ್ನೆ ನೋಡಿದ ಸಿನಿಮಾ ತಮಿಳು ಭಾಷೆಯ ಕರ್ಣನ್. ಯಾವುದೇ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲು ಪ್ರಮುಖ ಕಾರಣ ಚಿತ್ರದಲ್ಲಿರುವ ಸಂಗತಿಗಳು ನಮ್ಮ ಜೀವನದ ಸಮಸ್ಯೆಗಳನ್ನೋ ಅಥವಾ ನಮ್ಮ ಕನಸುಗಳಿಗೋ ಧ್ವನಿಯಾದಾಗ. ಎರಡು ಹಳ್ಳಿಗಳ ನಡುವಿನ ವೈಷಮ್ಯದಿಂದ ಒಂದು ಊರಿನ ಜನರು ಅನುಭವಿಸುವ ಕಷ್ಟಗಳು ಅದ್ಭುತವಾಗಿ ಚಿತ್ರಿಸಲ್ಪಟ್ಟಿವೆ. ನಮ್ಮ ಸಮಸ್ಯೆಗಳು ಏನೆಂದು ಕೇಳದ ಪೊಲೀಸ್ ವ್ಯವಸ್ಥೆ, ನಮ್ಮ ಕಷ್ಟಗಳಿಗೆ ಪರಿಹಾರ ಒದಗಿಸಲು ಆಗದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಕಥೆ. ಅಧಿಕಾರದಲ್ಲಿರುವ ಪೊಲೀಸರು ಹಳ್ಳಿಯ ಜನರಿಗೆ ಅವಮಾನ ಮಾಡಿ ಶೋಷಿಸುವ ವಿಷಯವೇ ಕಥೆಗೆ ಗಂಭೀರತೆಯನ್ನು ತಂದುಕೊಡುತ್ತದೆ. ನಟನೆ ಹಾಗು ಚಿತ್ರದ ದೃಶ್ಯಗಳು ಹಳ್ಳಿಯ ಜನರ ಜೀವನವನ್ನು  ಹಿಡಿದಿಟ್ಟಿವೆ. ಹಳ್ಳಿಯಲ್ಲಿ ಬದುಕುವ ತಪ್ಪಿಗೆ ಸ್ವಾಭಿಮಾನ ಬಿಟ್ಟು ಭ್ರಷ್ಟ ವ್ಯವಸ್ಥೆಗೆ ತಲೆಬಾಗಬೇಕೇ?

ಕಾಮೆಂಟ್‌ಗಳು

- Follow us on

- Google Search