ಪುಸ್ತಕಗಳ ಪರಿಚಯ : ದೇಶವಿದೇಶ - ೧,೨,೩,೪ ಬರೆದವರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪುಸ್ತಕಗಳ ಪರಿಚಯ : ದೇಶವಿದೇಶ - ೧,೨,೩,೪ ಬರೆದವರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ 

ಕಳೆದ  ಶತಮಾನದಲ್ಲಿ ವಿವಿಧ ದೇಶಗಳಲ್ಲಿ  ನಡೆದ ಅನ್ವೇಷಣೆ ಹಾಗು ಕುತೂಹಲ ಕೆರಳಿಸುವ ಹಲವಾರು ವಿಷಯಗಳನ್ನು ಈ ಪುಸ್ತಕಗಳು ಒಳಗೊಂಡಿವೆ. ಮೊದಲನೇ ಪುಸ್ತಕದಲ್ಲಿ ಕಾಲಚಕ್ರಕ್ಕೆ ಸಿಕ್ಕಿ ದಟ್ಟ ಕಾಡಿನಲ್ಲಿ ಹುದುಗಿ ಹೋಗಿದ್ದ ಕಾಂಬೋಡಿಯಾ ದೇಶದ ದೇವಸ್ಥಾನಗಳನ್ನು ಅನ್ವೇಷಿಸಿದ ವಿವರಗಳನ್ನು ಓದುಗರಿಗೆ ನೀಡಲಾಗಿದೆ. ಸೈಗಾನ್ ದೇಶದಲ್ಲಿ ನೀರಿನ ಮೇಲೆ  ಬದುಕುವ ಜನರ ಜೀವನ ಹಾಗು ಅಲ್ಲಿನ ಭೀಕರ ಕಾಯಿಲೆಗಳನ್ನು ಎದುರಿಸಿ ಜೀವಿಸುವ ಜೀವನ ಶೈಲಿಯನ್ನು ವಿವರಿಸಲಾಗಿದೆ. ಕಾಂಪೋಚಿಯ ಭಾಗದಲ್ಲಿ ನಡೆದ ಭೀಕರ ಮಾನವ ಹತ್ಯೆಯ ಸಾಕ್ಷಿಯಾಗಿ ದೊರಕಿರುವ ರಾಶಿ ರಾಶಿ ಬುರುಡೆಗಳು ಹಾಗು ಹತ್ಯೆಗೆ ಕಾರಣವಾದ ಉದ್ದೇಶಗಳನ್ನು ಸ್ಥೂಲವಾಗಿ ವಿವರಿಸಲಾಗಿದೆ.ಉಳಿದಂತೆ ನಾಸ್ಕಾದಲ್ಲಿ ಕಾಣಸಿಗುವ ವಿಚಿತ್ರ ಗೆರೆಗಳು, ಮೊಹೆಂಜೋದಾರೋ ಪಟ್ಟಣದ ಮಾಹಿತಿಗಳು ಹಾಗು ದುಡ್ಡಿನ ಬಾವಿಯ ಹಿಂದೆ ಬಿದ್ದು ತಮ್ಮ ಹಣವನ್ನು ಕಳೆದುಕೊಂಡವರ ರೋಚಕ ಇತಿಹಾಸವನ್ನು ಕೊನೆಯಲ್ಲಿ ಬರೆಯಲಾಗಿದೆ. 

ಎರಡನೇ ಪುಸ್ತಕದಲ್ಲಿ ಸಹರಾ ಮರುಭೂಮಿಯ ಭಾಗಗಳ  ಬರೆಯಲಾಗಿದೆ. ಹಾಡುವ ಮರಳು, ಕಾಲಿಟ್ಟರೆ ಮುಳುಗಿ ಸಾಯುವ ಹುದುಲು ಮರಳು, ಮೊರಾಕೊ ಹಾಗು ಅಸ್ಸಲ್ ಸರೋವರದ  ರೋಮಾಂಚಕ ಮಾಹಿತಿಗಳನ್ನು ಪುಸ್ತಕ ಒಳಗೊಂಡಿದೆ. ಸಹರಾ ಸಾಹಸ ಎನ್ನುವ ಪ್ರವಾಸ ಕಥನವನ್ನು ತೇಜಸ್ವಿಯವರು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಈಜಿಪ್ಟ್ನ ಕಳೆದುಹೋದ ಪಿರಮಿಡ್ ಬಗ್ಗೆ ಲೇಖನವಿದೆ. 

ಮೂರನೇ ಪುಸ್ತಕದಲ್ಲಿ ಅಮೆಜಾನ್ ನದಿಯ ವಿರಾಟ್ ರೂಪವನ್ನು ಹಾಗು ಚಿಂಟಾ ಬುಡಕಟ್ಟು ಜನಾಂಗದವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗಿದೆ. ಹಿಮಾಲಯ ಪರ್ವತದ ಅತಿ ಎತ್ತರದ  ಪರ್ವತ ಏರಲು ಮಾಡಿದ ಪ್ರಯತ್ನಗಳ ಅನುವಾದವನ್ನು ತೇಜಸ್ವಿಯವರು ಮಾಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಹಿಮಾಲಯ ಪರ್ವತ ಏರಲು ಹೋಗಿದ್ದ ಮೆಲೊರಿ ನಿಗೂಢವಾಗಿ ಕಾಣೆಯಾಗಿ ಹಲವಾರು ವರ್ಷಗಳ ನಂತರ ಅವರ ಮೃತದೇಹ ಕೊಳೆಯದೆ ಅದೇ ಸ್ಥಿತಿಯಲ್ಲಿ ದೊರೆತ ವಿವರಗಳನ್ನು ನೀಡಲಾಗಿದೆ. 

ನಾಲ್ಕನೇ ಪುಸ್ತಕದಲ್ಲಿ ಸಮಭಾಜಕ ವೃತ್ತದ ಭಾಗದಲ್ಲಿ ವರ್ಷದ ಸಾಕಷ್ಟು ತಿಂಗಳು  ಹಿಮದಿಂದ ಆವೃತವಾದ ಪರ್ವತಗಳು ಹಾಗು ಅಲ್ಲಿ ಬೆಳೆಯುವ ವಿಶಿಷ್ಟ ಸಸ್ಯವರ್ಗದ ಗಾತ್ರ ಹಾಗು ವೈವಿಧ್ಯತೆ ವರ್ಣಿಸಲಾಗಿದೆ. ಸೋಡಾ ಕಾರುವ ಜ್ವಾಲಾಮುಖಿ, ನೈಲ್ ನದಿಯಂತೆಯೇ ಅಗಾಧ ಉದ್ದದ ಕಾಂಗೋ ನದಿಯ ಮಾಹಿತಿಗಳು, ಪುಷರ್ ಎಂಬ ಹಡಗಿನ ಮೇಲೆ  ಜೀವನ ಸಾಗಿಸುವ ಜನರು ಹಾಗು ನಮೀಬಿಯಾದ ವಜ್ರದ ಕಿನಾರೆಗಳ ಬಗ್ಗೆ ಮಾಹಿತಿಯಿದೆ. ಮೌಂಟ್ ಹೆಲೆನ್ ಜ್ವಾಲಾಮುಖಿ ಸ್ಫೋಟಿಸಿದ ಭೀಕರ ದುರಂತವನ್ನು ಕನ್ನಡಕ್ಕೆ ತೇಜಸ್ವಿಯವರು  ಭಾವಾನುವಾದ ಮಾಡಿದ್ದಾರೆ. 

-- ಧನ್ಯವಾದಗಳು 

ಮಿಲೇನಿಯಂ ಸರಣಿಯ ಎಲ್ಲ ೧೬ ಪುಸ್ತಕಗಳನ್ನು ಖರೀದಿಸಲು ಈ ಲಿಂಕ್ ಬಳಸಿ 👉 https://t.co/iSaDeX2PiZ?amp=1


ಕಾಮೆಂಟ್‌ಗಳು

- Follow us on

- Google Search