ಪುಸ್ತಕ ಪರಿಚಯ: ತೇಜೋ ತುಂಗಭದ್ರಾ, ಬರೆದವರು: ವಸುಧೇಂದ್ರ


https://amzn.to/2SFyfBW

ಸಾಮಾನ್ಯವಾಗಿ ನಮ್ಮ ನಾಡಿನ ಇತಿಹಾಸದ ಬಗ್ಗೆ ತಿಳಿಯುವ ಆಸಕ್ತಿ  ಬಹಳಷ್ಟು ಜನರಿಗೆ ಇರುತ್ತದೆ. ಆದರೆ, ಇತಿಹಾಸವನ್ನು ತಿಳಿಯುವುದಕ್ಕೆ ಸಾಕಷ್ಟು ಸಮಯವನ್ನು ಓದಿಗೆ ಮೀಸಲಿರಿಸಬೇಕು. ಏಕೆಂದರೆ, ಹಲವಾರು ಮೂಲಗಳಿಂದ ಸಾಕಷ್ಟು ಮಾಹಿತಿಯನ್ನು ಕಲೆಹಾಕುವ ಸಾಮರ್ಥ್ಯ ಮತ್ತು ತಾಳ್ಮೆ ಓದುಗರಿಗೆ ಇರಬೇಕಾಗುತ್ತದೆ. 

ನನ್ನ ವಿಷಯವನ್ನೇ ತೆಗೆದುಕೊಂಡರೆ ತಿಳಿದುಕೊಳ್ಳುವ ಆಸಕ್ತಿಯಿದ್ದರೂ ಗತಿಸಿಹೋದ ಕಾಲದ ಬಗ್ಗೆ ಅಷ್ಟೆಲ್ಲಾ ಆಳವಾಗಿ ಅಧ್ಯಯನ ಮಾಡುವ ತಾಳ್ಮೆ ನನ್ನಲ್ಲಿ ಕಡಿಮೆ. ಗೂಗಲ್ ಯುಗದಲ್ಲಿ ಒಂದು ಸರ್ಚ್ ಮೂಲಕ ತಿಳಿಯಬಹುದಲ್ಲ ಅಥವಾ ಗೂಗಲ್ ಕೂಡ ಸರಿಯಾದ ಮಾಹಿತಿ ಕೊಡದೆ ಹೋದರೆ ಅದುನ್ನ ನಾನು ತಿಳಿದು ಏನೂ  ಆಗಬೇಕಾಗಿಲ್ಲ ಎನ್ನುವ ವಿಚಿತ್ರ ವಾದವಿವಾದವನ್ನು ನನ್ನಲ್ಲೇ ಮಾಡಿಕೊಂಡು ಓದುವ ಗೋಜಿಗೆ ಹೋಗುವುದೇ ಇಲ್ಲ. 

ಕರ್ನಾಟಕ ಸಾಮ್ರಾಜ್ಯ 

ಕರ್ನಾಟಕ ಸಾಮ್ರಾಜ್ಯ ಎಂದಾಕ್ಷಣ ಎಲ್ಲರಿಗೂ ಹೊಳೆಯುವ ಮೊದಲ ಯೋಚನೆಯೆಂದರೆ ಮುತ್ತು, ರತ್ನ, ವಜ್ರ , ವೈಡೂರ್ಯಗಳನ್ನು ಸೇರು ಪಾವುಗಳಲ್ಲಿ ಅಳೆದು ಮಾರುತ್ತಿದ್ದ ಶ್ರೀಮಂತ ಯುಗ ಎಂಬ ವಿಚಾರ. ಅಲ್ಲಿನ ಜನರ ಆಚಾರ ವಿಚಾರಗಳು , ಜನಜೀವನ, ವ್ಯಾಪಾರ ವಹಿವಾಟು, ಧರ್ಮಗಳು, ಕಲಾಸಂಸ್ಕೃತಿ ಮುಂತಾದ ವಿಚಾರಗಳ ಬಗ್ಗೆ ನಾವೇ ಹುಡುಕಿ ಓದಿ ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದಿಡಬೇಕಾಗುತ್ತದೆ. ಆ ಸುವರ್ಣ ಯುಗವನ್ನು ಕಂಡಿದ್ದು ನಮ್ಮ ಕರ್ನಾಟಕ ಸಾಮ್ರಾಜ್ಯ.  

ಕಲ್ಲಿನಲ್ಲಿ ಮೂಡಿದ ರಥ 

ನನಗೆ ಓದಲು ಬಹಳ ಇಷ್ಟವಿದ್ದರೂ, ಪರೀಕ್ಷೆಗಳನ್ನು ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಪುಸ್ತಕ ಓದುವ ಗೋಜಿಗೆ ಹೋಗುತ್ತಿರಲಿಲ್ಲ. ಹೀಗೆ ಇರುವಾಗ ಒಂದು ದಿನ ಏನೋ ಪುಸ್ತಕ ಆನ್ಲೈನ್ ಅಲ್ಲಿ ಹುಡುಕುತ್ತಿರಬೇಕಾದರೆ ವಸುಧೇಂದ್ರ ಅವರ ವರ್ಣಮಯ ಪುಸ್ತಕದ pdf  ಸಿಕ್ಕಿತು. ಸುಮ್ಮನೆ  ಹಾಗೆ ಓದಲು ಶುರು ಮಾಡಿದೆ. ಪೂರ್ತಿ ಓದಿದ ಮೇಲೆಯೇ ನಿಲ್ಲಿಸಿದೆ. ಪುಸ್ತಕ ಬಹಳ ಇಷ್ಟವಾಗಿತ್ತು ಹಾಗೆಯೇ ವಸುಧೇಂದ್ರ ಅವರ ಹೆಸರು ನೆನಪಿನಲ್ಲಿ ಉಳಿದಿತ್ತು.  ಅದಾದ ಮೇಲೆ ಬಹಳಷ್ಟು ಸಮಯ ಅವರ ಯಾವುದೇ ಪುಸ್ತಕ ಓದಿರಲಿಲ್ಲ. 

ಹೋದ ವರ್ಷ ಇದ್ದಕ್ಕಿದಂತೆ ಮುಂದಿನ ವರ್ಷದೊಳಗೆ ೫೦ ಪುಸ್ತಕಗಳನ್ನು ಓದಿ ಮುಗಿಸುವ ನಿರ್ಧಾರವನ್ನು ಕೈಗೊಂಡೆ. ದುಡ್ಡು ಕೊಟ್ಟು ಖರೀದಿಸಿ ಪುಸ್ತಗಳನ್ನು ಓದುವ ನಿರ್ಧಾರ ಮಾಡಿದೆ. ಮೊದಲ ಪುಸ್ತಕ ಓದಿದ್ದು ಪೂರ್ಣಚಂದ್ರ ತೇಜಸ್ವಿಯವರ ಮಹಾಪಲಾಯನ ಎಂಬ ಪುಸ್ತಕ. ಅಲ್ಲಿಂದ ೬ ತಿಂಗಳ ಕಾಲವನ್ನು ಗಮನಿಸಿದರೆ ಪ್ರತಿನಿತ್ಯ ಪುಸ್ತಕ ಓದುವ ಹವ್ಯಾಸ ನನ್ನದಾಗಿದೆ. ಒಂದು ವರ್ಷದಲ್ಲಿ ೫೦ ಪುಸ್ತಗಳನ್ನು ಓದುವ ಗುರಿಯೊಂದಿಗೆ ಆರಂಭಿಸಿದ ನಾನು ಆರು ತಿಂಗಳಲ್ಲಿ ೫೫ ಪುಸ್ತಕಗಳನ್ನು ಓದಿರುವುದು  ನನ್ನ ಪಾಲಿಗೆ ಹೆಮ್ಮೆಯ ಸಂಗತಿ. 

ಗೂಗಲ್ ಪ್ಲೇ ರಿವಾರ್ಡ್ಸ್  ಎಂಬ ಅಪ್ಲಿಕೇಶನ್ ಅನ್ನು ನಾನು ಉಪಯೋಗಿಸುತ್ತೇನೆ. ಅದರಲ್ಲಿ ಕೆಲವೊಮ್ಮೆ ಬರುವ ಸರ್ವೆಗಳಿಗೆ ಉತ್ತರಿಸಿ ಪ್ಲೇ ಕ್ರೆಡಿಟ್ಸ್ ಪಡೆಯುತ್ತೇನೆ. ಹೀಗೆ ಒಟ್ಟಾದ ಪ್ಲೇ ಕ್ರೆಡಿಟ್ಸ್  ಅನ್ನು ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಪುಸ್ತಕಗಳನ್ನು ಕೊಳ್ಳಲು ಉಪಯೋಗಿಸುತ್ತೇನೆ. ಆದರೆ, ಕ್ರೆಡಿಟ್ಸ್ ಸಿಗುವುದು ತುಂಬ ಕಡಿಮೆ. ವರ್ಷಕ್ಕೆ ೪೦೦ ಕ್ರೆಡಿಟ್ಸ್ ಸಿಗಬಹುದು. ನನ್ನ ಹತ್ತಿರ ೧೬೦ ಕ್ರೆಡಿಟ್ಸ್ ಇತ್ತು. 

ಗೂಗಲ್ ಒಪಿನಿಯನ್ ರಿವಾರ್ಡ್ಸ್ ಲಿಂಕ್ 👇

https://play.google.com/store/apps/detailsid=com.google.android.apps.paidtasks&hl=en_IN&gl=US

 ಶ್ರೀ ಕೃಷ್ಣದೇವರಾಯ 

ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಕನ್ನಡ ಪುಸ್ತಕಗಳನ್ನು ಹುಡುಕಲು ಆರಂಭಿಸಿದೆ. ಇದ್ದಕ್ಕಿದಂತೆ ವಸುಧೇಂದ್ರ ಅವರ ಇತ್ತೀಚಿನ ಕಾದಂಬರಿಯಾದ "ತೇಜೋ ತುಂಗಭದ್ರಾ" ಕಣ್ಣಿಗೆ ಬಿತ್ತು. ಈ ಕಾದಂಬರಿಯ ಬಗ್ಗೆ ಮುಂಚೆ ಕೇಳಿದ್ದೆ. ಪೋರ್ಚುಗೀಸ್ ಆಡಳಿತದಲ್ಲಿದ್ದ ಲಿಸ್ಬನ್ ನಗರದಲ್ಲಿ ಹರಿಯುತ್ತಿದ್ದ ತೇಜೋ ನದಿ ಹಾಗು ಕರ್ನಾಟಕ ಸಾಮ್ರಾಜ್ಯಕ್ಕೆ ಜೀವ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಯ ಹೆಸರನ್ನು ಕಾದಂಬರಿಗೆ ಇಡಲಾಗಿದೆ. 

ಗೂಗಲ್ ಪ್ಲೇ ಬುಕ್ಸ್ ಲಿಂಕ್ 👇
https://play.google.com/store/apps/details?id=com.google.android.apps.books&hl=en_IN&gl=US

ಅಂದಿನ ಕಾಲದ ಜನಜೀವನವನ್ನು ಕಾದಂಬರಿಯ ಮೂಲಕ ಓದುಗರಿಗೆ ಅರ್ಪಿಸಿದ ವಸುಧೇಂದ್ರ ಅವರ ಪರಿಶ್ರಮ ಮೆಚ್ಚುವಂಥದ್ದು. ಪೋರ್ಚುಗೀಸ್ ರಾಷ್ಟ್ರಗಳಲ್ಲಿ ಮಸಾಲೆ ಪದಾರ್ಥಗಳಿಗಿದ್ದ ಬೆಲೆ ಹಾಗು ಪರ್ಷಿಯಾದ ಮುಸಲ್ಮಾನ ಮಸಾಲೆ ವ್ಯಾಪಾರಿಗಳ ಹಿಡಿತವೇ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿಯುವುದು  ಪೋರ್ಚುಗೀಸ್ ರಾಜರಿಗೆ ಅವಶ್ಯಕತೆಯಾಗಿ ಪರಿಣಮಿಸಿತು. 

ಮಸಾಲೆ ಪದಾರ್ಥ 

ಜಲಮಾರ್ಗ ಕಂಡು ಹಿಡಿದರೆ ಅದರಿಂದ ತಮ್ಮ ಖಜಾನೆಗೆ  ವ್ಯಾಪಾರ ವಹಿವಾಟಿನಿಂದ ಆಗುವ ಅಪಾರ ಲಾಭವನ್ನು ರಾಜರು ಮನಗಂಡಿದ್ದರು. ಇದರಿಂದಾಗಿ ಅಪಾರ ಪ್ರಮಾಣದ ಹಣವನ್ನು ಜಲಮಾರ್ಗ ಅನ್ವೇಷಣೆಗಾಗಿ ವಯಿಸಿದ್ದರು. ಮಾನ್ಯುಯಲ್ ರಾಜನ ಅದೃಷ್ಟಕ್ಕೆ ವಾಸ್ಕೊಡ ಗಾಮ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ. 


ವಾಸ್ಕೊಡ ಗಾಮ 

ಯಹೂದಿಗಳು ಹಲವಾರು ಕ್ರೈಸ್ತ ರಾಷ್ಟ್ರಗಳಿಂದ ಧರ್ಮದ ವಿಚಾರಕ್ಕಾಗಿ ಹೊರದೂಡಲ್ಪಟ್ಟು ಮಾನ್ಯುಯಲ್ ರಾಜನ ಲಿಸ್ಬನ್ ನಗರಕ್ಕೆ ಬರುವುದು, ಅಲ್ಲಿ ಅವರು ಅನುಭವಿಸುವ ತಾರತಮ್ಯ, ಯಹೂದಿಗಳು ವ್ಯಾಪಾರ ವಹಿವಾಟಿನಲ್ಲಿ ತೋರಿಸುತ್ತಿದ್ದ ಜಾಣ್ಮೆ, ಕ್ಯಾಥೋಲಿಕ್ ಪಾದ್ರಿಗಳ ಹಾಗು ತನ್ನ ರಾಣಿಯ ಹಠಕ್ಕೆ ಒಪ್ಪಿ ನಡೆದ ಮತಾಂತರ ಮುಂತಾದ ಘಟನೆಗಳು ಕಾದಂಬರಿಯ ತೇಜೋ ಭಾಗದಲ್ಲಿ ವರ್ಣಿಸಲ್ಪಟ್ಟಿವೆ. 

ಇವೆಲ್ಲವನ್ನೂ ಒಟ್ಟಾಗಿ ಹಿಡಿದು ಕಾಲದಲ್ಲಿ ಮುಂದೆ ಸಾಗಲು ಮುದ್ದಾದ ಪ್ರೇಮ ಕಥೆಗಳು ಕಾದಂಬರಿಯಲ್ಲಿವೆ. ಗೇಬ್ರಿಯಲ್ ಹಾಗು ಬೆಲ್ಲ ಪ್ರೇಮ ಕಥೆ ಮಾತಿಗಿಂತ ಮೌನದಲ್ಲೇ ಹೆಚ್ಚು ಸಾಗಿದೆ. ಮೊದಲ ದಿನ ಕಾದಂಬರಿ ಓದಲು ಆರಂಭಿಸಿದಾಗ ೨೫% ಓದಿ ಮುಗಿಸಿದೆ. ಎರಡನೇ ದಿನ ೩೬% ವರೆಗೆ ಓದಿ ಆಯಿತು.ಆದರೆ ನಿನ್ನೆ ಓದಲು ಕುಳಿತಾಗ ೮೨% ವರೆಗೆ ಓದಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲವೇ ಕಾದಂಬರಿಯ ಓದಿಗೆ ವೇಗವನ್ನು ತಂದುಕೊಡುತ್ತದೆ. ಇವತ್ತು ಬೆಳಿಗ್ಗೆ ಸಂಪೂರ್ಣವಾಗಿ ಓದಿ ಮುಗಿಸಿದೆ. 

ನಾನು ಓದುವ ಮೊದಲು ಇದು ಕೇವಲ ನಮ್ಮ ಕರ್ನಾಟಕ ಸಾಮ್ರಾಜ್ಯದ ಶ್ರೀಮಂತಿಕೆಯನ್ನು ಬಣ್ಣಿಸುವ ಕಾದಂಬರಿಯಿರಬಹುದು ಎಂಬ ಯೋಚನೆ ಇತ್ತು. ಆದರೆ ಈ ಕಾದಂಬರಿ ಸಮಾಜದಲ್ಲಿ ಕಾಣಸಿಗುವ ಹತ್ತು ಹಲವಾರು ಬಗೆಯ ಜನರ ದಿನನಿತ್ಯದ ಜೀವನ ಹಾಗು ಆಚಾರ ವಿಚಾರಗಳನ್ನು ಒಳಗೊಂಡಿದೆ. ನಮ್ಮಲ್ಲಿಗೆ ಮಸಾಲೆ ಪದಾರ್ಥಕ್ಕಾಗಿ ಅವರು ಜಲಮಾರ್ಗ ಕಂಡು ಹಿಡಿದರು. ಆದರೆ, ಅವರೇ ನಮಗೆ ಮೆಣಸಿನ ಕಾಯಿಯನ್ನು ಪರಿಚಯಿಸಿದರು. 

ವಾಸ್ಕೊಡಗಾಮನ ಆಕ್ರಮಣದ ಭೀಕರತೆ, ಮತಾಂತರದ ಕರಾಳ ದೃಶ್ಯಗಳು, ವೇಶ್ಯಾವಾಟಿಕೆ, ಸತಿ ಪದ್ಧತಿ, ವೀರಗಲ್ಲು, ಮಾಸ್ತಿಕಲ್ಲು ಮುಂತಾದವುಗಳ ಬಗ್ಗೆ ಓದುಗರಿಗೆ ಕಾದಂಬರಿಯ ಪಾತ್ರಗಳ ಮೂಲಕ ಮನದಟ್ಟು ಮಾಡಿಸಲಾಗಿದೆ. ಕಾದಂಬರಿ ಕೇವಲ ಕರ್ನಾಟಕ ಸಾಮ್ರಾಜ್ಯದ ಬಗ್ಗೆ ಮಾತ್ರವಲ್ಲದೆ ಪೋರ್ಚುಗೀಸ್ ಆಡಳಿತದಲ್ಲಿದ್ದ ದೂರದ ಪ್ರದೇಶಗಳ ಮೇಲೆ ಆದ ಪರಿಣಾಮವನ್ನು ಕೂಡ ಬಹಳ ಸೊಗಸಾಗಿ ಓದುಗರಿಗೆ ವರ್ಣಿಸುತ್ತದೆ. 

ಭಾರತಕ್ಕೆ ಕಂಡುಹಿಡಿದ ಜಲಮಾರ್ಗ 

ಕರ್ನಾಟಕ ಸಾಮ್ರಾಜ್ಯದ ಕೃಷ್ಣದೇವರಾಯನ ಆಡಳಿತದಲ್ಲಿದ್ದ ಕಾಲದಲ್ಲಿದ್ದ ಧರ್ಮ ಸಹಿಷ್ಣುತೆ, ಕಾಗದದ ಬಳಕೆಯ ಪ್ರಾರಂಭ ಮುಂತಾದ ಸೂಕ್ಷ್ಮ ವಿಚಾರಗಳು ಕಾದಂಬರಿಯ ಒಡಲಿನಲ್ಲಿ ಅಡಗಿವೆ. ಕೃತಿಯನ್ನು ತಮ್ಮ ಪಾಂಡಿತ್ಯವನ್ನು ತೋರ್ಪಡಿಸಲು ಬರೆಯುವುದರಿಂದ ಅದು ನಮ್ಮಜನರನ್ನು ತಲುಪಲು ವಿಫಲವಾಗುತ್ತದೆ ಎಂಬ ವಿಚಾರಗಳು ಇವೆ. ಬೇರೆ ಧರ್ಮದ ಜನರಿರುವ ಪ್ರದೇಶವನ್ನು ಗೆದ್ದಾಗ ಅಲ್ಲಿ ನಡೆಯುವ ಮನಕಲಕುವ ಸಾಕಷ್ಟು ಘಟನೆಗಳು ಕಾದಂಬರಿಯಲ್ಲಿ ಇವೆ.     

ಕಾದಂಬರಿಯ ಅಂತಿಮ ಭಾಗದಲ್ಲಿ  ಪುರಂದರ ದಾಸರ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಅವರ ಲೊಳಲೊಟ್ಟೆ ಎಂಬ ಕೀರ್ತನೆ ಇಂದಿಗೂ ಪ್ರಸ್ತುತ ಎಂಬಂತೆ ಧನ, ಸಂಪತ್ತು, ಜಾತಿ ಧರ್ಮದ ಅಮಲಿನಲ್ಲಿ ಮುಳುಗಿರುವ ಮನಸ್ಸನ್ನು ಬಡಿದೆಚ್ಚರಿಸುವ ಪ್ರಯತ್ನ ಸಹ ಮಾಡಲಾಗಿದೆ. 

ಪುಸ್ತಕಗಳ ಮೂಲಕ ನಾವು ಯಾವುದೇ  ಕಾಲಘಟ್ಟಕ್ಕೆ ಹೋಗಿ ವಿಹರಿಸಿ ತಿಳಿದು ಬರಬಹುದಾದ ಅವಕಾಶ ಓದುಗರಿಗೆ ಇರುತ್ತದೆ.ನಿಮಗೂ ಕಾದಂಬರಿಯನ್ನು ಓದುವ ಇಚ್ಛೆಯಿದ್ದಲ್ಲಿ ಆನ್ಲೈನ್ ಮೂಲಕ ಖರೀದಿಸಿ ಅಥವಾ eBook ಕೂಡ ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಲಭ್ಯವಿದೆ. ಸಾಧ್ಯವಾದಷ್ಟು ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸಿ  ಬೆಳೆಸೋಣ. 

ಪುಸ್ತಕವನ್ನು ಅಮೆಜಾನ್ ಮೂಲಕ ಖರೀದಿಸಲು ಈ ಲಿಂಕ್ ಬಳಸಿ 

https://amzn.to/2SFyfBW

ಕಾಮೆಂಟ್‌ಗಳು

- Follow us on

- Google Search