ಪುಸ್ತಕ ಪರಿಚಯ - ಕಾಮಂಣ ( ಬರೆದವರು : ಬೀchi )


https://amzn.to/3cOXtFI

ಇದು ಬೀಚಿಯವರ ಕಾದಂಬರಿ. ಕಾದಂಬರಿಯ ಪ್ರಮುಖ ಪಾತ್ರ ಕಾಮಂಣ. ಬೀಚಿಯವರ ಅನೇಕ ಪುಸ್ತಕಗಳಂತೆ ಇದರಲ್ಲಿಯೂ  ಮನುಷ್ಯ ಜೀವನದ ಅರ್ಥಹೀನ ಗುಣಗಳನ್ನು ವಿವರಿಸಲಾಗಿದೆ. ಪುರಂದರದಾಸರ ಒಂದು ಮಾತಿದೆ "ಘೋರ ಪಾಪಿಗೆ ತತ್ವಜ್ಞಾನ ಹೇಳಿದರೆ, ಕ್ರೂರ ಕರ್ಮವ ಬಿಟ್ಟು ಸುಜನನಾಗುವನೇ ?" ಎಂದು. ಅದೇ ರೀತಿಯಲ್ಲಿ ದುರ್ಜನರು. 

ತಮ್ಮ ಜೀವನದ ಸುಖಕ್ಕಾಗಿ ತಮ್ಮ ಸಂಸಾರದ ಜನ  ಹಾಗು ಇತರರನ್ನು ಯಾವುದೇ ಮುಲಾಜಿಲ್ಲದೆ ಬಳಸಿಕೊಳ್ಳುವುದೇ ಇವರ ನಿತ್ಯ ಜೀವನ. ರಾಜಕೀಯದಲ್ಲಿ ಇರುವ ಹಲವರಿಗೆ ಈ ಪುಸ್ತಕ ತಮ್ಮದೇ ಜೀವನ ಕಥೆ ಎನ್ನಿಸಬಹುದೇನೋ !!. ಬೀಚಿಯವರು ಯಾವುದೇ ಸೂಕ್ಷ್ಮ ವಿಚಾರಗಳನ್ನು ವಿವರಿಸುವಾಗ ಬಳಸುವ ಭಾಷೆಯ ಶೈಲಿ ಬಹಳ ಇಷ್ಟ ನನಗೆ. ಚಪ್ಪಲಿಗೆ ಶಾಲು ಹಚ್ಚಿ ಹೊಡೆದಂತಿರುತ್ತದೆ ವಿಚಾರ ವಿನಿಮಯ. 

ಕಾದಂಬರಿ ಇಂತಹ ಜನರನ್ನು ಮದುವೆಯಾದ ದುರ್ಬಲ ಹೆಂಗಸೊಬ್ಬಳು ಅನುಭವಿಸುವ ದಿನನಿತ್ಯದ ಕಷ್ಟಗಳನ್ನು ಅಲ್ಲಲ್ಲಿ ಓದುಗರಿಗೆ ತೋರಿಸಲ್ಪಟ್ಟಿವೆ. ಕಾದಂಬರಿಯ ಕೊನೆಯಲ್ಲಿ ಇರುವ ಪುರಂದರದಾಸರ "ಜಾಲಿಯ ಮರದಂತೆ ಧರೆಯೊಳು ದುರ್ಜನರು" ಕಾದಂಬರಿಯ ಮೂಲದಂತಿದೆ. ಯಾರು ಎಷ್ಟೇ ಹಣ ಅಧಿಕಾರ ಹೊಂದಿದರೂ ಕೊನೆಗೊಂದು ದಿನ ಮಣ್ಣು ಸೇರಬೇಕಾಗುತ್ತದೆ ಎಂಬ ಸಾರ್ವಕಾಲಿಕ ಸತ್ಯವನ್ನು ಕಾದಂಬರಿ ಧ್ವನಿಸುತ್ತದೆ. 

ಈ ಪುಸ್ತಕವನ್ನು ಅಮೆಜಾನ್ ಮೂಲಕ ಖರೀದಿಸಲು ಕೆಳಗೆ ಕೊಟ್ಟಿರುವ ಲಿಂಕ್ ಬಳಸಬಹುದು. 

https://amzn.to/3cOXtFI

ಕಾಮೆಂಟ್‌ಗಳು

- Follow us on

- Google Search