ಕನ್ನಡಿಗರು ದಿನನಿತ್ಯ ಅನುಭವಿಸುತ್ತಿರುವ ತೊಂದರೆಗಳು

ಕನ್ನಡಿಗರು ದಿನನಿತ್ಯ ಅನುಭವಿಸುತ್ತಿರುವ ತೊಂದರೆಗಳು



ಈ ವಾರದ ವೈರಲ್ ಸುದ್ಧಿಗಳು ಏನಂದ್ರೆ ಬೆಂಗಳೂರಿನ ಪಬ್ , ಜಿಮ್ ಗಳಲ್ಲಿ ಕನ್ನಡ ಹಾಡುಗಳನ್ನು ಹಾಕದೆ ಕನ್ನಡಿಗರೊಂದಿಗೆ ತುಚ್ಛವಾಗಿ ವ್ಯವಹರಿಸುತ್ತಿರುವುದು. ನಮ್ಮ ರಾಜ್ಯಗಳಿಗೆ ಎಲ್ಲಿಂದಲೋ ಬಂದು ಜೀವನ ಕಟ್ಟಿಕೊಳ್ಳುವ ಹಲವಾರು ಮಂದಿಗೆ ಈ ನಾಡಿನ ಭಾಷೆಯ ಬಗ್ಗೆಯಾಗಲಿ ಅಥವಾ ಇಲ್ಲಿನ ಜನರ ಬಗ್ಗೆಯಾಗಲಿ ಇರಬೇಕಾದ ಸೌಜನ್ಯ ಇಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಿ ಮಾತಾಡುವ ಹಾಗು ಕೆಲಸ ಮಾಡುವ ರಾಜಕಾರಣಿಗಳು ಸಹ ಬಹಳ ಕಡಿಮೆ. ಇದೆ ನಮ್ಮ ದುರಾದೃಷ್ಟ.
 

ಇದು ನಿನ್ನೆ ಮೊನ್ನೆಯಿಂದ ಆಗುತ್ತಿರುವ ದಬ್ಬಾಳಿಕೆಯಲ್ಲ. ಯಾವುದೇ ನಗರ ಬೆಳೆಯಲಾರಂಭಿಸಿದಾಗ ಅಭಿವೃದ್ಧಿಯೊಂದಿಗೆ ಇಂತಹ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ನಡಿಗರ ಹೃದಯವೈಷಾಲ್ಯತೆ ಹಾಗು ಒಂದು ರೀತಿಯ ವಿಚಿತ್ರ ಧೋರಣೆ ಇದರಲ್ಲಿ ಪ್ರಮುಖ ಪಾತ್ರವಾಗಿದೆ. ನಮ್ಮ ನಾಡಿನ ಭಾಷೆ ಹಾಗು ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ನಿರ್ಧಾರವೊಂದು ಆಗಲೇ ಬೇಕಿದೆ. ಆದರೆ , ರಾಜಕಾರಣಿಗಳು ಅಧಿಕಾರದ ಮೋಹದಲ್ಲಿ ಹಾಗು ವೋಟ್ ಬ್ಯಾಂಕ್ ಗೋಸ್ಕರ ಇಲ್ಲ ಸಲ್ಲದ ವಿಷಯಗಳ ಚರ್ಚೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ.



ಕನ್ನಡ ಭಾಷೆ ನಿಜವಾಗಿಯೂ ಬೆಳೆಯಬೇಕಾದರೆ ಕನ್ನಡ ಕೇಂದ್ರಿತ ಉದ್ಯೋಗಗಳು ಬೆಳೆಯಬೇಕು. ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾದಾಗ ಜನರಲ್ಲೇ ಇದರ ಬಗ್ಗೆ ಸ್ಪಷ್ಟ ಅರಿವು ಮೂಡುತ್ತದೆ. ಐಎಎಸ್ ಮೈನ್ಸ್ ಪರೀಕ್ಷೆ ಹಿಂದಿ ಹಾಗು ಇಂಗ್ಲಿಷ್ ನಲ್ಲಿ ಮಾತ್ರ ಲಭ್ಯ, ಬ್ಯಾಂಕಿಂಗ್ ಪರೀಕ್ಷೆಗಳು ಕನ್ನಡದಲ್ಲಿ ಆಗುತ್ತಿಲ್ಲ. ಹೀಗೆ ಹತ್ತು ಹಲವಾರು ಅನ್ಯಾಯಗಳು ಕನ್ನಡಿಗರ ಬಾಳನ್ನು ಚಿಂದಿ ಚಿತ್ರಾನ್ನ ಮಾಡಿವೆ. ಅತಿ ಹೆಚ್ಚು GST ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ತನ್ನ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಸಾಲದ ಮೊರೆ ಹೋಗುತ್ತಿರುವುದು ಮಾತ್ರ ಬಹಳ ಬೇಸರದ ಸಂಗತಿ. One Nation One  Election ಎಂಬುದು ರಾಜ್ಯ ಸರ್ಕಾರಗಳ ಬೆನ್ನುಮೂಳೆ ಮುರಿಯುವ ಸಂಚು ಅಷ್ಟೇ. 



ಇದಕ್ಕೆ ವಿರುದ್ಧವಾಗಿ ಹರ್ಯಾಣ, ಆಂದ್ರಪ್ರದೇಶ ಮುಂತಾದ ಕಡೆಗಳಲ್ಲಿ ಸ್ಥಳೀಯ ಜನರಿಗೆ 75% ಉದ್ಯೋಗಗಳು ಮೀಸಲಾಗಿವೆ. ಈ ರೀತಿಯ ಕಾನೂನು ಕರ್ನಾಟಕಕ್ಕೆ ಖಂಡಿತಾ ಬೇಕಾಗಿದೆ. ಅತಿಥಿಗಳಾಗಿ ಬಂದು ಹೋಗಬೇಕಾಗಿದ್ದ ಜನರು ನಮ್ಮ ರಾಜ್ಯದಲ್ಲೇ ಜಾಂಡಾ ಊರಿ ನಮ್ಮ ಉದ್ಯೋಗಗಳನ್ನು ಕಸಿದುಕೊಂಡು ಕನ್ನಡಿಗರು ಇಲ್ಲದ ತೊಂದರೆಗಳನ್ನು ಅನುಭವಿಸುವಂತೆ ಮಾಡಲಾಗಿದೆ.

ಈ ವಾರ ನಡೆದ ಮತ್ತೊಂದು ಘಟನೆ Zomato ಡೆಲಿವರಿ ಬಾಯ್ ಮೇಲೆ ಯುವತಿ ಮಾಡಿರುವ ಆರೋಪ. ಆರೋಪ ಸಾಬೀತಾಗುವ ಮುಂಚೆಯೇ ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದುಹಾಕಿದ Zomato. ಡೆಲಿವರಿ ಬಾಯ್ ರೂಪೇಶ್ ರಾಜಣ್ಣ ಅವರೊಂದಿಗೆ ಲೈವ್ ಮಾಡಿರುವ ವಿಡಿಯೋ ಲಿಂಕ್ ಅನ್ನು ಕೆಳಗೆ ಕೊಟ್ಟಿದೀನಿ. ಅವರ ಮಾತನ್ನು ಕೇಳಿದ ಮೇಲೆ ನಿರ್ಧರಿಸೋಣ.



ವಿಡಿಯೋ :  https://youtu.be/rzuiVPkDcj4

ಕನ್ನಡಿಗರಿಗೆ ಉದ್ಯೋಗವಿಲ್ಲ, ಕನ್ನಡಕ್ಕೆ ಸಿಗಬೇಕಾದ ಗೌರವ ಈ ಐಟಿ ಸಂಸ್ಥೆಗಳಲ್ಲಿ ಸಿಗುತ್ತಿಲ್ಲ, ಇದನೆಲ್ಲ ಸರಿಪಡಿಸಲು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲೇಬೇಕು. ಸರ್ಕಾರಗಳು ಅಷ್ಟೇ , ಜಾತಿಯ ಆಧಾರದ ಮೇಲೆ ಯೋಜನೆಗಳನ್ನು ರೂಪಿಸದೆ ಬಡತನದ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿ ಜನರಿಗೆ ಸಹಾಯ ಮಾಡಬೇಕು. 

ಕಾಮೆಂಟ್‌ಗಳು

- Follow us on

- Google Search