ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಕನಕದಾಸರು ರಚಿಸಿರುವ ಈ ಅದ್ಭುತ ಸಾಲುಗಳನ್ನು ಓದಿದಾಗ ಮನಸ್ಸಿಗೆ ಒಂದು ರೀತಿಯ ಶಾಂತಿ ದೊರಕಿದಂತಾಗುತ್ತದೆ. ನಮ್ಮ ಜೀವನದ ಅತಿ ಹೆಚ್ಚಿನ ಸಮಯವನ್ನು ಚಿಂತೆಯಲ್ಲೇ ಕಳೆಯುತ್ತೇವೆ. ಕನ್ನಡದಲ್ಲೇ ಒಂದು ಮಾತಿದೆ , "ಹುಟ್ಟಿಸಿದ ದೇವರು ಹುಲ್ಲು ಮೇಯಿಸಲ್ಲ".  ಏನೇ ಆದರೂ ಸ್ವಲ್ಪ ತಾಳ್ಮೆಯಿಂದ ಇರುವುದನ್ನು ನಾವು ಬೆಳೆಸಿಕೊಳ್ಳಬೇಕು. ಭಾವನೆಗೊಳಗಾಗಿ ಜೀವನವನ್ನೇ ಲೆಕ್ಕಿಸದೆ ಆತ್ಮಹತ್ಯೆಗೆ ಶರಣಾಗುವ ಹಲವಾರು ಜನರಿದ್ದಾರೆ. 



ಬೆಟ್ಟದ ಯಾವುದೇ ಮೂಲೆಯಲ್ಲಿ ಹುಟ್ಟುವ ಸಸ್ಯಗಳಿಗೂ ಜೀವವಿರುತ್ತದೆ. ಸಕಲ ಪಶು ಪಕ್ಷಿ ಪ್ರಾಣಿಗಳಿಗೂ ಆಹಾರದ ಅಗತ್ಯವನ್ನು ಪೂರೈಸುವ ಶಕ್ತಿ ಜಗತ್ತಿಗೆ ಇರುವಾಗ ನಮ್ಮ ಜೀವನವೂ ಸಹ ಹೇಗೋ ನಡೆದೇ ನಡೆಯುತ್ತದೆ. ನಮ್ಮ ಮೇಲೆ ನಮಗೆ ನಂಬಿಕೆ ಹಾಗು ನಾವು ಮಾಡುವ ಕೆಲಸಗಳಲ್ಲಿ ಕಾರ್ಯದಕ್ಷತೆ ಹಾಗು ನಿತ್ಯ ಜೀವನದಲ್ಲಿ ಪರೋಪಕಾರದ ಗುಣ ಇದ್ದಾಗ ಯಾವುದೇ ಸಂದರ್ಭವನ್ನು ನಾವು ಎದುರಿಸಬಹುದು. ನಾನು ಇದರ ಅರ್ಥವನ್ನು ಬರೆಯುವುದಕ್ಕಿಂತ ನೀವೇ ಓದಿದರೆ ನಿಮಗೆ ಬಹಳಷ್ಟು  ಅರ್ಥಗಳು  ಮನಸ್ಸಿಗೆ ಹೊಳೆಯುತ್ತವೆ. 

YouTube ಅಲ್ಲಿ ನೋಡಲು ಈ ಲಿಂಕ್ ಅನ್ನು ಬಳಸಿ.
https://youtu.be/pEcHG4I1GO0
 
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ
ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗೆ ರಕ್ಷಿಪನು ಇದಕೆ ಸಂಶಯವಿಲ್ಲ

ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿನತ್ತವರು ಯಾರೋ
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ

ಕಲ್ಲಿನಲಿ ಹುಟ್ಟಿದ ಕೂಗುವಾ ಕಪ್ಪೆಗೆ
ಅಲ್ಲಿ ಆಹಾರವನು ತಂದೀಯುವರು ಯಾರೋ
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

- ಕನಕದಾಸ 

ಕಾಮೆಂಟ್‌ಗಳು

- Follow us on

- Google Search