ಪಂಚ್👊 - ಕಜ್ಜಾಯ
೧. ಜನ👪
ಎಲ್ಲಿ ನೋಡಿದರೂ ಜನವೋ ಜನ
ಕೆಲವರು ಸಜ್ಜನ, ಇನ್ನು ಕೆಲವರು ದುರ್ಜನ
ಎಂದು ವಿಂಗಡಿಸುವುದು ನಮ್ಮ ಮನ
ಜನರ ಮನವೇ ಮಾಡುವುದು ನಿಮಗೆ ಅವಮಾನ , ಸನ್ಮಾನ
ಗೆಲ್ಲಬೇಕು ಜನರ ಮನ
ನಂತರ ಹೋದಲ್ಲೆಲ್ಲ ಸನ್ಮಾನ
ನೋಯಿಸಿದರೆ ಜನರ ಮನ
ಕಾದಿದೆ ನಮಗೆ ಅವಮಾನ.
೨. ಸಾಫ್ಟ್ವೇರ್ ಇಂಜಿನಿಯರ್🎓
ಜಗದ ಪ್ರಕಾರ ಅವನೊಬ್ಬ ಟೆಕ್ಕಿ
ಸಾಕಾಗಿದೆ ಅವನಿಗೆ ಕೀಬೋರ್ಡ್ ಕುಕ್ಕಿ
ಮನದಲ್ಲಿ ಇದ್ದಾಳೆ ಒಬ್ಬಳು ಹಕ್ಕಿ
ಯಾರಿಗೆ ಏನಾಗಬೇಕಿದೆ ಅವಳು ಇವನಿಗೆ ಸಿಕ್ಕಿ
೩. ಪುಸ್ತಕ 📗
ನೀನೆಷ್ಟು ಚಂದ ಪುಸ್ತಕ
ಓದಲು ಬೇಕು ಮಸ್ತಕ
ಓದುವಾಗ ಮನಸ್ಸಿನಲ್ಲಿ ಪುಳಕ
ಸಾವಿರಾರು ಆಲೋಚನೆಗಳ ಜನಕ
ಓದುವಾಗ ಮುಂದೇನಾಗುತ್ತದೆ ಎಂಬ ತವಕ
ಓದಿದ ನಂತರ ನಾನಾಗುತ್ತೇನೆ ಒಬ್ಬ ಚಿಂತಕ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ