ಪಂಚ್👊 - ಕಜ್ಜಾಯ


೧. ಉಚಿತ ಊಟ🍲

ಹೇಳುವಳು ಅವನು ತಡವಾಗಿ ಬಂದ,  
ನನ್ನ ಮೇಲೆ  ಹಲ್ಲೆ ಮಾಡಿದ!!!

ಇವೆಲ್ಲ ನಾಟಕ ಏತಕ್ಕಾಗಿ ?
ಉಚಿತ ಊಟಕ್ಕಾಗಿ, ಬಿಟ್ಟಿ ಪ್ರಚಾರಕ್ಕಾಗಿ!!!

ಇದು ಸುಳ್ಳು ಆರೋಪವೆಂದು ಬಯಲಾದ್ರೆ 
ನಿನಗೆ ಜೈಲಿನಲ್ಲಿ ದಿನವೂ ಉಚಿತ ಬಿಸಿಯೂಟ!!!

೨. ಸಿ.ಡಿ😆

ನನಗೆ ಏನು ಗೊತ್ತೇ ಇಲ್ಲ, ನಾನು ಅಮಾಯಕ 
ಇದು ನಾನಲ್ಲ, ಇದರಲ್ಲಿ ಮಚ್ಚೆ ಇಲ್ಲ , ಇವನ್ಯಾರೋ ಕಾಮುಕ 

ಅದು ನಾನೆ, ಆದರೆ ಇದು ರಾಜಕೀಯ ಷಡ್ಯಂತ್ರ 
ಬಯಲಿಗೆಳೆಯುತ್ತೇನೆ ನಿಮ್ಮೆಲ್ಲರ ಕುತಂತ್ರ 

ಯುವತಿಯೇ ಒಪ್ಪಿ ಬಂದರೆ ನಿಮಗೇನು ಕಷ್ಟ?
ಕೊನೆಗೆ ಯುವತಿ ಹೇಳಿದಳು ಯಾರು ಕೇಳುವರು ನನ್ನ ಕಷ್ಟ ? 

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು 
ಸಿ.ಡಿಗೆ ಹೋದ ಮಾನ , CID ತನಿಖೆ ಆದರೂ ಬಾರದು. 

೩. ದೇಶಪ್ರೇಮ💝 

ಕೇಳುವರು "ನೀವು ದೇಶಕ್ಕಾಗಿ ಏನು ಮಾಡಿದ್ದೀರಿ ?"
ಅವರಿಗೆ ಹೇಳಿ "ಸಮಯಕ್ಕೆ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದೀವಿ" 

ಜನಸಾಮಾನ್ಯರ ಸೇವಕರಾಗಿರಬೇಕಾಗಿದ್ದವರು ,ಇಂದು ಅಧಿಕಾರಿಗಳಾಗಿದ್ದಾರೆ. ನಮ್ಮವರೇ ನಮ್ಮನ್ನು ತುಳಿಯುತ್ತಿದ್ದಾರೆ

ಕಾಮೆಂಟ್‌ಗಳು

- Follow us on

- Google Search