ಆನ್ಲೈನ್ ಮೂಲಕ ಜಾಬ್ ಅಪ್ಲೈ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಕೊರೊನ ಬಂದ ನಂತರ ಬಹಳಷ್ಟು ಜನ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಸಾಕಷ್ಟು ಜನ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ. ಇವರೊಂದಿಗೆ ಕೆಲ್ಸದ ಹುಡುಕಾಟದಲ್ಲಿ ನಿರತರಾಗಿರುವವರು ಬಹಳಷ್ಟು ಜನರಿದ್ದಾರೆ. ಕೆಲಸ ಹುಡುಕಲು ಮೊದಲಿನಂತೆ ಇಂದು ನಡೆದಾಟ ಅಥವಾ ಪ್ರಯಾಣ ಬೆಳೆಸಬೇಕಿಲ್ಲ. ಗೂಗಲ್ ಮಾಡಿ ನೋಡಿದಾಗಲೂ ಸಾಕಷ್ಟು ವೆಬ್ಸೈಟ್ ಅಥವಾ ಜಾಬ್ ಆಫರ್ಗಳ ಪಟ್ಟಿ ಕಾಣಸಿಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖದೀಮರು ಮುಗ್ಧ ಜನರಿಗೆ ಟೋಪಿ ಹಾಕುತ್ತಿದ್ದಾರೆ.
 

ನೀವು ವೆಬ್ಸೈಟ್ ಅಲ್ಲಿ ಅಪ್ಲೈ ಮಡಿದ ನಂತರ ಕೆಲವೊಮ್ಮೆ ನಿಮಗೆ ಕರೆ ಮಾಡುತ್ತಾರೆ. ತಮ್ಮ ವಿವರ ಕೇಳಿದ ನಂತರ ಸ್ವಲ್ಪ ಪ್ರಶ್ನೆಗಳನ್ನು ಹಾಗು ತಮ್ಮ ಮುಂಚಿನ ಕೆಲಸದ ಬಗ್ಗೆಯೂ ಕೇಳುತ್ತಾರೆ. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ನಿಮಗೆ ಅವರ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ನೀವು ಮಾಡಬೇಕಾದ ಕೆಲ್ಸದ ವಿವರ ಸಹ ನೀಡುತ್ತಾರೆ. ಅವರು ಮಾತಾಡುವುದೇ ಈ ರೀತಿಯಾಗಿ. 


ಇಷ್ಟೆಲ್ಲಾ ಆದ ನಂತರ ಅವರು ನೀವು ಇಂತಿಷ್ಟು ಹಣವನ್ನು ಸೆಕ್ಯೂರಿಟಿ ಡೆಪಾಸಿಟ್ ಅಥವಾ ಸಾಫ್ಟ್ವೇರ್ಗಾಗಿ ಅಥವಾ ಅಪ್ಲಿಕೇಶನ್ ಫೀಸ್ ಎನ್ನುವ ಮೂಲಕ ಪಾವತಿ ಮಾಡಲು ಹೇಳುತ್ತಾರೆ. ಎಷ್ಟೋ  ಸಂದರ್ಭಗಳಲ್ಲಿ ಈ ಮೊತ್ತ ಕನಿಷ್ಠ ಮಟ್ಟದ್ದಾಗಿರುತ್ತದೆ. ನೂರು , ಐನೂರು ಅಥವಾ ಸಾವಿರ ರೂಪಾಯಿಗಳು. ಕೆಲವೊಮ್ಮೆ ಈ ದುಡ್ಡು ಸ್ವಲ್ಪ ದಿನಗಳ ನಂತರ ರಿಫಂಡ್ ಆಗುತ್ತದೆ ಎಂದು ಸಹ ಹೇಳುತ್ತಾರೆ. ಅವರು ಏನೇ ಹೇಳಿದರು ಒಂದು ರೂಪಾಯಿ ಸಹ ಪಾವತಿಸಬೇಡಿ.


ಇನ್ನು ಕೆಲವೊಂದಷ್ಟು ಮೊಬೈಲ್ ಅಪ್ಲಿಕೇಶನ್ ತಮ್ಮಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ಟ್ಯೂಷನ್ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಆನ್ಲೈನ್ ಟ್ಯೂಷನ್ ಹೇಳಿಕೊಡಲು ರಿಜಿಸ್ಟ್ರೇಷನ್ ಫೀಸ್ ಪೇಮೆಂಟ್ ಮಾಡುವಂತೆ ನಿಯಮ ಮಾಡಿವೆ. ವಿದ್ಯಾರ್ಥಿಗಳ ಹೆಸರಿನೊಂದಿಗೆ ಮೊಬೈಲ್ ನಂಬರ್ ಸಹ ಪಡೆಯಬಹುದು ಎಂದು ನಿಮ್ಮನ್ನು ಹುರಿದುಂಬಿಸುತ್ತವೆ. ನೀವು ಹಣ ಪಾವತಿಸಿ ಆ ನಂಬರ್ಗೆ ಕರೆ ಮಾಡಿದಾಗ ನಿಮಗೆ ಮೋಸ ಹೋಗಿದ್ದು ಅರಿವಾಗುತ್ತದೆ. ಕರೆ ಸ್ವೀಕರಿಸುವುದಿಲ್ಲ ಅಥವಾ ಅವರೇ ಫೇಕ್ ರಿಕ್ವೆಸ್ಟ್ ಸೃಷ್ಟಿ ಮಾಡಿರುತ್ತಾರೆ. ಕರೆ ಸ್ವೀಕರಿಸಿದರೂ ನಮಗೆ ಇಷ್ಟವಿಲ್ಲ ಅಥವಾ ನಾವು ನಮ್ಮ ಮನೆಯಲ್ಲೇ ಟ್ಯೂಷನ್ ಮಾಡುವ ಜನರಿಗೆ ಹುಡುಕಿತ್ತಿದ್ದೇವೆ ಎಂದು ಸುಳ್ಳು ಹೇಳಿ ಎಸ್ಕೇಪ್ ಆಗುತ್ತಾರೆ. 


ನೀವು ನೆನಪಿಡಬೇಕಾಗಿರುವುದು ಒಂದೇ ವಿಷಯ. ಯಾವುದೇ ಕಾರಣಕ್ಕೂ ಒಂದು ರೂಪಾಯಿ ಕೂಡ ಪಾವತಿಸಬೇಡಿ. ಕೆಲವೊಮ್ಮೆ ಅವರು ಹಣ ಪಾವತಿಸುವುದಕ್ಕೆ ಕಲಿಸುವ ಲಿಂಕ್ ಕ್ಲಿಕ್ ಮಾಡಿ ಪಾವತಿಸಿದಾಗ ತಮ್ಮ ಅಕೌಂಟ್ ಹ್ಯಾಕ್ ಆಗಿ ಸಂಪೂರ್ಣ ಹಣವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಜಾಗೃತರಾಗಿರಿ ಹಾಗು ನಿಮಗೆ ತಿಳಿದವರಿಗೆ ಇದನ್ನು ಶೇರ್ ಮಾಡಿ. ಇದು ಯಾರೋ ಕಷ್ಟ ಪಟ್ಟು ಸಂಪಾದಿಸಿದ ಹಣ ಕಳ್ಳರ ಪಾಲಾಗದಂತೆ ತಡೆಯುವಲ್ಲಿ ಸಹಕಾರಿಯಾಗುತ್ತದೆ. 

ಕಾಮೆಂಟ್‌ಗಳು

- Follow us on

- Google Search