ವಿದ್ಯಾರ್ಥಿಗಳಿಲ್ಲದ ಶಾಲೆ ಕಾಲೇಜುಗಳು ಹೂವುಗಳಿಲ್ಲದ ಉದ್ಯಾನವನದಂತೆ

ನಿನ್ನೆ ಏನೋ ಕೆಲಸದ ಸಲುವಾಗಿ ಕಾಲೇಜು ಕಡೆ ಹೋಗಿದ್ದೆ. ಅದೇ ಮಾಮೂಲಿ ಕಥೆ ಗೇಟ್ ಹತ್ತಿರ. ಸೆಕ್ಯೂರಿಟಿ ಕೇಳಿದ್ರು, ID ಕಾರ್ಡ್ ಎಲ್ಲಿದೆ ಅಂತ. ಆಮೇಲೆ ಅದೇ  ಡೈಲಾಗ್ , "ID  ಕಾರ್ಡ್ ಇಲ್ಲ ಅಂದ್ರೆ ನೀವು ಯಾರು ಅಂತ ಹೇಗೆ ಗೊತ್ತಾಗುತ್ತೆ ?? " ಸುಮ್ನೆ ಸುಮ್ನೆ ಅಲ್ಲಿಗೆ ಹೋಗೋಕೆ ಏನು ಅದು ಸಿನಿಮಾ ಥಿಯೇಟರ್ ಅನ್ಕೊಂಡಿದರ ??. ಪ್ರತಿದಿನ ನೋಡಿದ್ರು ಹೀಗೆ ಕೇಳೋದು ಅವ್ರಿಗೆ ಏನು ಖುಷಿ ಕೊಡುತ್ತದೋ ಗೊತ್ತಿಲ್ಲ.  



ಆಮೇಲೆ ಹಾಗೆ ಒಳಗೆ ಬಂದು ನೋಡಿದ್ರೆ , ಯಾರು ಅಷ್ಟು ಜನನೇ ಇರಲಿಲ್ಲ. ಎಲ್ಲ ಖಾಲಿ ಖಾಲಿ ಇತ್ತು. ಕೆಲವರಿಗೆ ಕ್ಲಾಸ್ ಆಗುತ್ತಾ ಇತ್ತು. ಆದರೂ  ಜನ ಕಡಿಮೆ ಇದ್ದಿದ್ದಕ್ಕೋ ಏನೋ , ಯಾವ ಕಡೆ ನೋಡಿದ್ರು ಬಿಸಿಲು ಹಾಗು ಬೆಳಕು ಕಣ್ಣು ಕುಕ್ಕುವಂತೆ ಭಾಸವಾಗುತಿತ್ತು. ಹಾಗೆ ಕಾಲೇಜು ಒಂದು ರೌಂಡ್ ಹಾಕೊಂಡು ಬಂದೆ. ವಿದ್ಯಾರ್ಥಿಗಳು ಕಡಿಮೆ ಇರುವ ಕಾರಣದಿಂದ ಹಳೆಯ ಕಟ್ಟಡಗಳ ದುರಸ್ಥಿ ಕಾರ್ಯ ಆರಂಭಿಸಿದ್ದಾರೆ. ಹಾಗಾಗಿ  ಅಲ್ಲಲ್ಲಿ ಕಲ್ಲು, ಮಣ್ಣಿನ ರಾಶಿ ಬಿದ್ದಿತ್ತು.  ಅದನ್ನೆಲ್ಲಾ ಸ್ವಲ್ಪ ಹೊತ್ತು ನೋಡಿದಾಗ ಯಾಕೋ ಕಾಲೇಜು ಪಾಳು ಬಿದ್ದ ಮನೆಯ ರೀತಿ ಅನ್ನಿಸಲಾರಂಭಿಸಿತು.   


ಮಾಡಬೇಕಾಗಿದ್ದ ಕೆಲಸ ಮುಗಿಸಿಕೊಂಡು ಹಾಗೆ ಕಾಲೇಜು ಕ್ಯಾಂಟೀನ್ ಕಡೆಗೆ ಹೋದೆ. ಆದರೆ , ಅದು ಕೂಡ ಕ್ಲೋಸ್ ಆಗಿತ್ತು. ಕಾಲೇಜು ಎಷ್ಟೇ ಬೇಜಾರಾಗಿದ್ರು ಕ್ಯಾಂಟೀನ್ಗೆ ಬಂದರೆ , ಅದೊಂದು ಪುಟ್ಟ ಪ್ರಪಂಚದಂತೆ ಭಾಸವಾಗುತ್ತಿತ್ತು. ಯಾವಾಗ ಹೋದರೂ , ನಮಗೆ ಪರಿಚಯ ಇರುವ ಸ್ವಲ್ಪ ಜನ ಆದರೂ ಇರುತ್ತಿದ್ದರು. ಖಾಲಿ ಜನ, ಮುಚ್ಚಿದ ಬಾಗಿಲುಗಳು, ಧೂಳು ಹಿಡಿದ ಚೇರ್ ಹಾಗು ಟೇಬಲ್ಗಳನ್ನು ಕಂಡಾಗ ಏನೋ ಒಂದು ರೀತಿಯ ಬೇಜಾರು ಮನಸ್ಸನ್ನು ಆವರಿಸಿತ್ತು. ಇದಕ್ಕೆ ನನಗೆ ಸ್ವಲ್ಪ ಹಸಿವಾಗಿದ್ದು ಕೂಡ ಕಾರಣ ಇರಬಹುದೇನೋ ಅನ್ನಿಸುತ್ತೆ. 
    
                        

ಹಾಗಂತ ನನಿಗೇನು ನಮ್ಮ ಕಾಲೇಜು ಮೇಲೆ ಅತಿಯಾದ ಪ್ರೀತಿ ಏನಿಲ್ಲ. ಸಧ್ಯದ ಪರಿಸ್ಥಿತಿ ನೋಡಿದಾಗ ಮೊದಲು ಚೆನ್ನಾಗಿತ್ತು ಅನ್ನಿಸ್ತು ಅಷ್ಟೇ . ಹಾಗೆ ಮತ್ತೆ ಕ್ಯಾಬ್ ಅಲ್ಲಿ ವಾಪಾಸ್ ಹೊರಟೆ. ಕಾರಿನಲ್ಲಿ ಬರುತ್ತಿದ್ದಾಗ ಸುಂದರವಾದ ಗೊಂಬೆಗಳನ್ನು ಮಾರುವವರ ಕಡೆಗೆ ನನ್ನ ದೃಷ್ಟಿ ಸಾಗಿತು. ಬಿಸಿಲಿಗೆ ಕಂಗೆಟ್ಟು , ಆರೋಗ್ಯದ ಬಗ್ಗೆ ಚಿಂತೆಯೀ ಇಲ್ಲದೆ ಸಪ್ಪೆ ಮೊರೆ ಹಾಕಿಕೊಂಡು ಗಿರಾಕಿಗಳಿಗೆ ದಿನವಿಡೀ ಕಾಯುವುದನ್ನು ಕಲ್ಪಿಸಿಕೊಂಡಾಗ ಸ್ವಲ್ಪ ಬೇಜಾರಾಯಿತು. ನಾನು ಎಲ್ಲ ಟೋಲ್ ಅಲ್ಲೂ ಫಾಸ್ಟ್ಯಾಗ್  ಇದೆ ಅಂದುಕೊಂಡು ಕೂತಿದ್ದೆ. ಆಮೇಲೆ ಕ್ಯಾಬ್ ಅವ್ರು ಹೇಳಿದ್ರು ನ್ಯಾಷನಲ್ ಹೈವೇಗಳಲ್ಲಿ ಮಾತ್ರ ಈ ರೂಲ್ಸ್ ಇರೋದು. ನೈಸ್ ರೋಡ್ ಗೆ ಇಲ್ಲ ಅಂತ. 

ಕಾಲೇಜಿಗೆ ಹೋಗೋದು ಇಷ್ಟ ಇಲ್ಲ ಅಂದ್ರು ಪರವಾಗಿಲ್ಲ , ಆದ್ರೆ ಅಲ್ಲಿಗೆ ಹೋದಾಗ ಜನ ಇಲ್ಲ ಅಂದ್ರೆ ಲೈಫ್ ಅಲ್ಲಿ ಏನೋ ಕಳೆದುಕೊಂಡ ಹಾಗೆ ಫೀಲ್ ಆಗೋದಂತೂ ಖಂಡಿತ. ವಿದ್ಯಾರ್ಥಿಗಳಿಲ್ಲದ ಕಾಲೇಜ್ , ಹೂವುಗಳಿಲ್ಲದ ಉದ್ಯಾನವನದಂತೆ!!!
 

ಕಾಮೆಂಟ್‌ಗಳು

- Follow us on

- Google Search