ಒಂದು Zomato ಡೆಲಿವರಿ ಕಥೆ


ಅವತ್ತು ನಾನು ಕೆಲಸ ಮುಗಿಸಿ ಬಂದು ಫುಡ್ ಆರ್ಡರ್ ಮಾಡಿದ್ದೆ. ಸ್ವಲ್ಪ ಸಮಯದ ನಂತರ ಕಾಲ್ ಬಂತು. ತೆಗೆದುಕೊಂಡು ಬರುವುದಕ್ಕೆ ಹೋದೆ. ಬಹಳಷ್ಟು ಸಾರಿ ನನ್ನ ವಯಸ್ಸಿನ ಯುವಕರೇ ಹೆಚ್ಚಾಗಿ ಕಾಣಸಿಗುತ್ತಾರೆ ಅಥವಾ ಇದನ್ನೇ ವೃತ್ತಿಯಾಗಿ ಮಾಡಿಕೊಂಡಿರುವವರು ಕಾಣಸಿಗುತ್ತಾರೆ. ಹೀಗಾಗಿ ಇಂಥವರು ಯಾರಾದರೂ ಇದ್ದಾರಾ ಅಂತ ಹೊರಗೆ ಹೋಗಿ ಹುಡುಕಲು ಶುರು ಮಾಡಿದೆ. ಅಲ್ಲಿ ಬಹಳಷ್ಟು ಜನರು ತಮ್ಮ ವಾಹನಗಳೊಂದಿಗೆ ಇದ್ದರು. 


ನಾನು ಆಚೆ ಈಚೆ ನೋಡುತ್ತಿದ್ದಾಗ ೪೦-೪೫ ವರ್ಷದ ವ್ಯಕ್ತಿಯೊಬ್ಬರು ಆಫೀಸಿಗೆ ತೆರಳುವಾಗ ಹಾಕುವ ಫಾರ್ಮಲ್ ಡ್ರೆಸ್ ಹಾಕಿ ತಮ್ಮ ಸ್ಕೂಟಿ ಜೊತೆ ನಿಂತಿದ್ದರು. ನಾನು ಯಾರೋ ಅಂದುಕೊಂಡು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.  ಆಮೇಲೆ ನನಗೆ ಗೊತ್ತಾಯ್ತು ಅವರೇ ಡೆಲಿವರಿ ಬಾಯ್ ಅಂತ. ಅವರನ್ನು ನೋಡಿದಾಗ ಯಾವುದೂ ಆಫೀಸ್ನಲ್ಲಿ ಕೆಲಸ ಮಾಡುವ ವ್ಯಕ್ತಿಯಂತೆ ಕಂಡರು. ಅವರು ತಮ್ಮ ಆಫೀಸ್ ಕೆಲಸ ಮುಗಿದ ನಂತರ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.


ಇದು ಅದೆಷ್ಟೋ ಮಧ್ಯಮ ವರ್ಗದ ಜನ ತಮ್ಮನ್ನು ನಂಬಿಕೊಂಡಿರುವವರಿಗಾಗಿ ದೊಡ್ಡ ನಗರಗಳಲ್ಲಿ ಪಡುವ ಕಷ್ಟಕ್ಕೆ ಚಿಕ್ಕ ಉದಾಹರಣೆ ಅಷ್ಟೇ. ಇಂತಹ ವ್ಯಕ್ತಿಗಳು ನವ ಯುವಕರಿಗೆ ಮಾದರಿ. ಬಹಳಷ್ಟು ಜನ ಕಡಿಮೆ ಸಂಬಳದ ಕೆಲಸಕ್ಕೆ ಸೇರಿಕೊಂಡು ನಂತರ ತಮ್ಮ ಜೀವನವೇ ಇಷ್ಟು ಎಂಬ ವಿಚಿತ್ರ ಧೋರಣೆಯೊಂದಿಗೆ ಕಾಲ ಕಳೆಯುತ್ತಾರೆ. ತಮಗೆ ಸಿಗುವ ಎಲ್ಲ ಉದ್ಯೋಗದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರುವುದು ಇಂದಿನ ನಗರ ಜೀವನಕ್ಕೆ ಅತ್ಯಗತ್ಯವಾಗಿದೆ.  

ಕಾಮೆಂಟ್‌ಗಳು

- Follow us on

- Google Search