ಟೀ ಎಸ್ಟೇಟ್ ಜನರ ಜೀವನ

ಪ್ರವಾಸಕ್ಕೆ ಕೇರಳ, ತಮಿಳುನಾಡು, ಅಸ್ಸಾಂ, ಚಿಕ್ಕಮಗಳೂರು ಮೊದಲಾದ ಟೀ ಬೆಳೆಯುವ ಪ್ರದೇಶಗಳಿಗೆ ಹೋದಾಗ ಅಲ್ಲಿನ ಸುಂದರ ಹಸಿರು ಟೀ ತೋಟಗಳು ನಮ್ಮ ಮನಸ್ಸನ್ನು ಸೆಳೆಯುತ್ತವೆ. ತೋಟದ ಗಿಡಗಳ ಮಧ್ಯ ನಿಂತು ಸೆಲ್ಫಿ ತೆಗೆದುಕೊಂಡು ನಂತರ ಗೆಳೆಯರೊಂದಿಗೆ ಫೋಟೋಸ್ ತಕ್ಕೊಂಡು ಪ್ರವಾಸದ ನೆನಪಿಗಾಗಿ ಇಟ್ಟುಕೊಳ್ಳುತ್ತೇವೆ. 

ಟೀ ಎಸ್ಟೇಟ್ 

ಆದರೆ , ಅಲ್ಲಿಯೇ ಕೆಲಸ ಮಾಡುವವರ ಜೀವನದ ಕುರಿತು ನಮಗೆ ಕುತೂಹಲ ಇದ್ದೇ  ಇರುತ್ತದೆ. ಟೀ ಎಸ್ಟೇಟ್ ಸಾಧಾರಣವಾಗಿ ಐವತ್ತರಿಂದ ಮುನ್ನೂರು ಎಕರೆ ವಿಸ್ತಾರವಾಗಿ ಇರುತ್ತವೆ. ಇಳಿಜಾರಾದ ಭೂಮಿಯಲ್ಲಿ, ಸಾಲು ಸಾಲಾಗಿ ಹೆಚ್ಚು ಮಳೆ ಬರುವ ಪ್ರದೇಶಗಳು ಟೀ ಬೆಳೆಯಲು ಪ್ರಶಸ್ತವಾದ ಜಾಗ . 

ಇಳಿಜಾರಾದ ಪ್ರದೇಶಗಳು 

ಟೀ ಎಲೆಗಳನ್ನು ತೆಗೆಯಲು ಮೊದಲು ಯಾವುದೇ ಕತ್ತರಿಸುವ ಸಾಧನ ಉಪಯೋಗಿಸುತ್ತಿರಲಿಲ್ಲ. ಕೈಯಿಂದಲೇ ಚಿವುಟಿ ತೆಗೆದು ತಮ್ಮ ಚೀಲಕ್ಕೆ ಹಾಕುತ್ತಿದ್ದರು . ಆದರೆ ಈಗ ಹರಿತವಾದ ಕತ್ತರಿಗಳನ್ನು ನೀಡಲಾಗುತ್ತದೆ. ಕತ್ತರಿಯನ್ನು ಎರಡು ಕೈಯಿಂದ ಹಿಡಿದು ಟಕ-ಟಕ ಸದ್ಧು ಮಾಡುತ್ತಾ ಸೊಪ್ಪನ್ನು ಹೊಡೆಯುವುದು ಜನರ ಕೆಲಸ. 

ಸೊಪ್ಪನ್ನು ತಮ್ಮ ಚೀಲಕ್ಕೆ ತುಂಬಿದ ನಂತರ , ತೂಕದ ಸಮಯದಲ್ಲಿ ಕೈಯಿಂದಲೇ ಕಸವನ್ನು ಆರಿಸಿ ತೆಗೆಯಲಾಗುತ್ತದೆ . ನಂತರ ತೂಕವನ್ನು ನಮೂದಿಸಿಕೊಳ್ಳಲು ಹಾಗು ಇತರ ಜನರ ಕೆಲಸವನ್ನು ನೋಡಿಕೊಳ್ಳಲು ಮೇಲ್ವಿಚಾರಕರು ಇರುತ್ತಾರೆ. ನಂತರ ಟ್ರ್ಯಾಕ್ಟರ್ ಹಾಗು ಲಾರಿಯಲ್ಲಿ ಸೊಪ್ಪನ್ನು ದೂರದ ತೋಟದಿಂದ ಫ್ಯಾಕ್ಟರಿಗೆ ಸಾಗಿಸಲಾಗುತ್ತದೆ. 

ಸೊಪ್ಪು ಕೊಯ್ಯುವುದು 

ಫಾಕ್ಟರಿಗಳಲ್ಲಿ ಸೊಪ್ಪನ್ನು ಆರಿಸಲು ಹವಾ ನಿಯಂತ್ರಿತ ಕೊಠಡಿಗಳು ಅಥವಾ ದೊಡ್ಡ ಪ್ರಮಾಣದ ಫ್ಯಾನ್ ಇರುತ್ತವೆ . ನಂತರ ಸೊಪ್ಪಿನಿಂದ ಟೀ ಪುಡಿ ತಯಾರಿಸಲು ಫ್ಯಾಕ್ಟರಿಯ ಮುಂದಿನ ವಿಭಾಗಗಳಿಗೆ ಕಳಿಸಲಾಗುತ್ತದೆ. 

ಫ್ಯಾಕ್ಟರಿಯಲ್ಲಿ ಸೊಪ್ಪನ್ನು ಹರಡಿರುವುದು 

ನಾನು ಬೆಳೆದಿದ್ದು ಇದೇ  ರೀತಿಯ ಟೀ ಎಸ್ಟೇಟ್ ವಾತಾವರಣದಲ್ಲಿ . ಕೆಲವೊಂದು ಎಸ್ಟೇಟ್ಗಳಲ್ಲಿ ಕಡಿಮೆ ಸಂಬಳ ನೀಡಲಾಗುತ್ತದೆ. ಇಲ್ಲಿರುವ ಹೆಚ್ಚಿನ ಮೇಲ್ವಿಚಾರಕರು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುತ್ತಾರೆ . ಹೆಚ್ಚಿನ ಜನರು ಮಧ್ಯಮ ವರ್ಗಕ್ಕೆ ಸೇರಿದವರಾಗಿರುತ್ತಾರೆ. 

ಫ್ಯಾಕ್ಟರಿಯ ಕೆಲಸಗಾರ 

ಕೆಲವು ವರ್ಷಗಳಿಂದ ಬೇರೆ ರಾಜ್ಯದ ಜನರು ಟೀ ಎಸ್ಟೇಟ್ಗಳಿಗೆ ಕೆಲಸಕ್ಕಾಗಿ ಬಂದು ಇಲ್ಲಿಯೇ ನೆಲೆಸುತ್ತಿದ್ದಾರೆ .ಇವರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಕೂಡ ಕಲ್ಪಿಸುತ್ತಾರೆ . ಮೊದಲು ಉತ್ತರ ಕರ್ನಾಟಕ ಭಾಗದ ಜನರು ಬಹಳ ಇರುತ್ತಿದ್ದರು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ತನಕ ಸಾಮಾನ್ಯವಾಗಿ ಕೆಲಸ ಮಾಡುತ್ತಾರೆ. 

ಇವರಲ್ಲದೆ ಸುತ್ತ ಮುತ್ತಲ ಹಳ್ಳಿಗಳಿಂದ ಹಾಗು ಸ್ವಲ್ಪ ದೂರದ ಊರುಗಳಿಂದ ಕುಳದ ಕೆಲಸಕ್ಕೆ ಬಾಡಿಗೆ ಆಟೋ, ಜೀಪ್ ಮೂಲಕ ಬರುತ್ತಾರೆ. ಗೊಬ್ಬರ ಹಾಕುವುದು, ಔಷಧ ಸಿಂಪಡಣೆ ಮುಂತಾದ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುತ್ತಲೇ ಇರುತ್ತವೆ. 

ರಕ್ತವನ್ನು ಹೀರುವ ಜಿಗಣೆಗಳು 

ಇಲ್ಲಿನ ಪ್ರದೇಶಗಳು ಮಳೆಗಾಲದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳು. ಇದರಿಂದಾಗಿ ವಿದ್ಯುತ್ ಕಡಿತ, ಜ್ವರ ಮುಂತಾದ ರೋಗಗಳು ಹೆಚ್ಚು. ಮತ್ತೆ ಮಳೆಗಾಲದಲ್ಲಿ ರಕ್ತವನ್ನು ಹೀರುವ ಜಿಗಣೆಗಳ ಕಾಟ. ಅಲ್ಲಲ್ಲಿ ಭೂಮಿ ಕುಸಿಯುವುದು ಸರ್ವೇ ಸಾಮಾನ್ಯ ದೃಶ್ಯ ಮಳೆಗಾಲದಲ್ಲಿ. 

ಮಳೆಯಿಂದ ಉಂಟಾದ ಹಾನಿಯ ದೃಶ್ಯ 

ಆದರೆ ಈ ತೋಟಗಳು ಪಶ್ಚಿಮ ಘಟ್ಟದ ಅರಣ್ಯನಾಶ , ಜೀವ ವೈವಿಧ್ಯತೆ  ಮುಂತಾದ ವಿಷಯಗಳಲ್ಲಿ ಮಹತ್ವದ ಪಾಲನ್ನು ಹೊಂದಿವೆ .  ಹಚ್ಚ ಹಸುರಿನ ದಟ್ಟ ಕಾಡುಗಳಿಂದ ಕಂಗೊಳಿಸುತ್ತಿದ್ದ ಪಶ್ಚಿಮ ಘಟ್ಟ ಈಗ ಹಸಿರು ಕಂಬಳಿ ಹೊದ್ಧು ಶಾಂತವಾಗಿ ಮಲಗಿದಂತೆ ಕಾಣುತ್ತದೆ ಈ ತೋಟಗಳನ್ನು ನೋಡಿದಾಗ. 
 

ಸಾಂದರ್ಭಿಕ ಚಿತ್ರ : ಚಿರತೆ 

ಕಾಮೆಂಟ್‌ಗಳು

- Follow us on

- Google Search