ಕವಿತೆಗಳು
೧. ಪ್ರಾರ್ಥನೆ
ಓ ದೇವರೆ, ನನ್ನೆಲ್ಲಾ ತಪ್ಪುಗಳಿಗೆ ಕ್ಷಮೆಯಿರಲಿ
ಒಳ್ಳೆಯ ಕೆಲಸಗಳಿಗೆ ನಿನ್ನ ಆಶೀರ್ವಾದವಿರಲಿ
ಕೆಟ್ಟ ಆಲೋಚನೆಗಳು ನನ್ನಲ್ಲಿ ಮೂಡದಿರಲಿ
ಮನದ ಕತ್ತಲು ಕಳೆದು ಬೆಳಕು ಮೂಡಲಿ
೨. ಸಂಜೆ-ಸಮಯ
ಸೂರ್ಯ ಕೆಲಸ ಮುಗಿಸಿ ಮರೆಯಾಗುವ ಸಮಯ
ಚಂದ್ರ ಚುಕ್ಕಿ ತಾರೆಗಳು ಆಗಮಿಸುವ ಸಮಯ
ಬೆಳಕಿನಿಂದ ಕತ್ತಲೆಡೆಗೆ ಜಗತ್ತು ಸಾಗುವ ಸಮಯ
ಸಮಯ , ಇದು ಜಗದ ಏಕೈಕ ನಿಯಮ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ