ಕವಿತೆ - "ಅವಳು "

 ಕವಿತೆ - "ಅವಳು "



ಅವಳೇನು ಮಹಾನ್ ಸುಂದರಿಯಲ್ಲ 
ಆದರೂ  ಅವಳಿಗೆ ಸರಿಸಾಟಿಯಿಲ್ಲ
ಅವಳನ್ನು  ಕಾಣಲು ಮಾಡದ  ಸಾಹಸಗಳಿಲ್ಲ
ಕಂಡರೂ ಮಾತನಾಡಿಸಲು  ಆಗಲಿಲ್ಲ  
ಮಾತನಾಡಿದರೂ ಎಲ್ಲವನ್ನು ಹೇಳುವ ಧೈರ್ಯವಿಲ್ಲ 
ನಾನು  ಹೇಳಿದರೂ , ಒಪ್ಪುತಾಳೆಂಬ ನಂಬಿಕೆಯಿಲ್ಲ 

 ಮನಸಲ್ಲಿ ಮೂಡಿದ್ದು , ಬಾಯಿಂದ ಬರಲಿಲ್ಲ
ನಿನ್ನೆ, ಇಂದು , ನಾಳೆ , ನಾಡಿದ್ದು, ಇದರಲ್ಲಿ ಯಾವುದೇ ಬದಲಾವಣೆಯಿಲ್ಲ 
ಕೆಲವೊಮ್ಮೆ ಅನ್ನಿಸುತ್ತದೆ , ಅವಳಿಗೆ ನಾನು ಇಷ್ಟವೇ ಇಲ್ಲ 
ಹೀಗನ್ನಿಸಿದ ಮೇಲೆ , ನನ್ನ ಮನಸ್ಸಿನಲ್ಲಿ ಯಾವುದೇ ಭಾವನೆಗಳಿಲ್ಲ 
ಭಾವನೆಗಳಿಲ್ಲದ ಮನಸ್ಸಿನಲ್ಲಿ ಅವಳಿಗೆ ಅಸ್ಥಿತ್ವವಿಲ್ಲ . 


ಕಾಮೆಂಟ್‌ಗಳು

- Follow us on

- Google Search