ಯಾರು ನಮ್ಮವರು ?

ಈ ಪ್ರಶ್ನೆ ನನಗೆ ಅನೇಕ ಸರಿ ಬಂದಿದೆ . ನಿಜವಾದ ಉತ್ತರ ಏನೆಂದು ಇಂದಿಗೂ ತಿಳಿದಿಲ್ಲ. ನಮ್ಮವರಿಗೂ , ನಮ್ಮ ಜೊತೆ ಇರುವವರಿಗೂ ಬಹಳ ವ್ಯತ್ಯಾಸಗಳಿವೆ . ಕೆಲವರು ನಮ್ಮೊಂದಿಗೆ ಇದ್ದರೂ ಎಂದೂ  ನಮ್ಮವರು ಎನ್ನಿಸಿವುದಿಲ್ಲ . ಇದಕ್ಕೆ ಕಾರಣಗಳು ಹಲವಾರಿವೆ . ನನ್ನ ಪ್ರಕಾರ ನಾವು ಯಾರೊಂದಿಗೆ ಸಮಯ ಕಳೆದಾಗ ಮನಸ್ಸು ಉಲ್ಲಾಸವಾಗುತ್ತದೋ ಅವರೇ ನಮ್ಮವರು . ಯಾರೋ ಒಬ್ಬರ ನಿಷ್ಕಳಂಕ ನಗು , ಮಾತುಗಳು , ಸಹಾಯ ಇವೆ ಅಲ್ಲವೇ ಇನ್ನೊಬ್ಬರಿಂದ ನಾವು ಬಯಸಬೇಕಾಗಿದ್ದು . ಎಷ್ಟೋ ಸಂದರ್ಭಗಳಲ್ಲಿ ನಮ್ಮ ರಕ್ತ ಸಂಬಂಧಿಗಳು ಮಾಡಲಾರದ ಸಹಾಯವನ್ನು ಯಾರೋ ಮಾಡಿದಾಗ  ನಮಗಾಗುವ ಅನುಭವ ಪದಗಳಲ್ಲಿ ವರ್ಣಿಸಲು ಅಸಾಧ್ಯ .

 
ನಮ್ಮಿಂದ ಬೇರೆಯವರಿಗೆ ಏನೂ  ಸಹಾಯ ಮಾಡೋಕೆ ಅಗದೇ  ಇದ್ದರೂ  ಪರವಾಗಿಲ್ಲ , ಬೇರೆಯವರಿಗೆ ವಿನಾ  ಕಾರಣ ತೊಂದರೆ ಕೊಡುವುದು ಸರಿಯಲ್ಲ. ಇವತ್ತಿನ ಸಮಾಜದಲ್ಲಿನ  ಜಾತಿಪದ್ದತಿಯನ್ನು ಬುಡಸಮೇತ  ನಮ್ಮ ಮನಸ್ಸಿನಿಂದ ಕಿತ್ತೆಸೆಯುವ ಜವಾಬ್ದಾರಿ ನಮ್ಮ ಮೇಲಿದೆ . 
ಈ ಜಗತ್ತಿನಲ್ಲಿ ಕೆಲೆವೇ  ದಿನಗಳಿರುವ ನಾವು, ನಮ್ಮ ಮುಂದಿನ ಜನಾಂಗಕ್ಕೆ ಈ ರೋಗಗ್ರಸ್ಥ ಮಾನಸಿಕ ಸ್ಥಿತಿಯನ್ನು ತುಂಬಿ ಹೋಗುವುದು ಸರಿಯಲ್ಲ . ಈ ಜಗತ್ತಿನ ಸಕಲ ಜೀವ ಜಂತುಗಳಿಗೂ ಬದುಕುವ ಹಕ್ಕಿದೆ . ಎಲ್ಲರೂ ನಮ್ಮವರೇ ಅಂದುಕೊಂಡಾಗ ಮಾತ್ರ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ. 

ಬೇರೆಯವರಿಗೆ ಯಾವಾಗಲು ಒಳ್ಳೆಯದನ್ನೇ ಬಯಸೋಣ , ನ್ಯಾಯಯುತವಾಗಿ  ದುಡಿಯೋಣ, ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡೋಣ , ಯಾವುದೇ  ತೊಂದರೆ ಬಂದರೂ ಒಗ್ಗಟ್ಟಿನಿಂದ ಎದುರಿಸೋಣ . 

ಕಾಮೆಂಟ್‌ಗಳು

- Follow us on

- Google Search