ಉತ್ತಮ ಇಂಜಿನಿಯರ್ ಆಗೋದು ಹೇಗೆ ?

ಈ ಪ್ರಶ್ನೆ ಓದಿದ್ರೆ ನಿಮಗೆ ಅನ್ನಿಸಬಹುದು , ಇಂಜಿನಿಯರ್ ಆಗೋದು ಏನು ದೊಡ್ಡ ವಿಷಯ ಅಂತ . ಆದರೆ ಕೇವಲ ನಾಲ್ಕು ವರ್ಷ ಬೇರೆ ಡಿಗ್ರಿ ಕಾಲೇಜುಗಳ ತರ  ಹೋಗಿ ಓದಿ ಪರೀಕ್ಷೆಗಳಲ್ಲಿ  ಪಾಸ್  ಆದ್ರೆ ನಿಜವಾದ ಇಂಜಿನಿಯರ್ ಆಗೋಕೆ ಸಾಧ್ಯ ಇಲ್ಲ . ಜೀವನ ಪರ್ಯಂತ ಹೊಸ ಹೊಸ ವಿಷಯಗಳನ್ನು ಕಲಿಯುವುದು ನಿಜವಾದ ಎಂಜಿನಿಯರ್ ಗಳ ಮುಖ್ಯ ಲಕ್ಷಣ. ತುಂಬ ಜನ ಇಂಜಿನಿಯರ್ ಗಳು ಈಗಾಗ್ಲೇ ಕೆಲಸ ಇಲ್ಲದೆ ಮನೇಲಿ ಕೂತಿದ್ದಾರೆ . ಇನ್ನು ತುಂಬ ಜನ ಕಡಿಮೆ ಸಂಬಳಕ್ಕೆ ಬಹಳ ಕಷ್ಟ ಪಟ್ಟು ಕೆಲಸ ಮಾಡ್ತಾ ಇದ್ದಾರೆ . ಎಲ್ಲೋ  ಸ್ವಲ್ಪ ಜನ ಮಾತ್ರ ಒಳ್ಳೆಯ ಕೆಲಸದಲ್ಲಿ  ಇದ್ದಾರೆ . 

ನಮ್ಮ ಶಿಕ್ಷಣ ಪಧ್ಧತಿ  ಹಾಗು ಪೋಷಕರ ಮನಸ್ಥಿತಿ ಇವತ್ತು ದಿಕ್ಕೆಟ್ಟ ಯುವಜನಾಂಗವನ್ನು ಸೃಷ್ಟಿಸಿವೆ . ಒಳ್ಳೆಯ ಇಂಜಿನಿಯರ್ ಆಗ್ಬೇಕು ಅಂದ್ರೆ ಕಲಿಯೋರಿಗೆ ವಿಷಯಗಳಲ್ಲಿ ಅತಿಯಾದ ಆಸಕ್ತಿ ಮತ್ತು ಶ್ರದ್ಧೆ ಇರಬೇಕು . ಆಸಕ್ತಿ ಇಲ್ಲ ಅಂದ್ರು ನಾಲ್ಕು ವರ್ಷ ಹೇಗೋ ಕಾಲಹರಣ  ಮಾಡ್ಕೊಂಡು ಪಾಸ್ ಆಗಿ ಹೊರಗೆ ಬರಬಹುದು. ಆಮೇಲೆ ಶುರು ಆಗೋದು ನಿಜವಾದ ಜೀವನ

ಕೆಲವು ಕಾಲೇಜುಗಳಲ್ಲಿ ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಬಹುದು . ಆದ್ರೂ ಕೂಡ ಕೆಲಸಕ್ಕೆ ಸೇರಿದ ಮೇಲೆ ಇಂಜಿನಿಯರ್ ಗಳು ಪಡುವ ಕಷ್ಟಕ್ಕೆ  ಲೆಕ್ಕನೇ  ಇಲ್ಲ ಬಿಡಿ . ಹೆಸರಿಗೆ ಒಂದು ಕೆಲಸ ಅಂತ ಸಿಕ್ಕಿರುತ್ತೆ . ಅದ್ರಲ್ಲಿ ಕಲಿಯೋಕೆ ತುಂಬ ಅವಕಾಶ ಇದ್ರೆ ಪರವಾಗಿಲ್ಲ . ಆದರೆ ಇಷ್ಟ ಇಲ್ದೆ ಇರೋ ಕೆಲ್ಸಕ್ಕೆ ಸೇರಿಕೊಂಡರೆ ಮಾತ್ರ ಜೀವನ ನಾಯಿಪಾಡು ಆಗಿಬಿಡುತ್ತೆ . ದಿನ ಪೂರ್ತಿ ಚಿಕ್ಕ ಚಿಕ್ಕ ವಿಷಯಕ್ಕೂ ತಲೆನೋವು ಶುರು ಆಗುತ್ತೆ . 

ಸ್ವಲ್ಪ ಕಷ್ಟ ಆದ್ರೂ ಪರವಾಗಿಲ್ಲ ನಿಮಗೆ ತುಂಬ ಇಷ್ಟವಾದ ವಿಷಯಗಳನ್ನ ಆರಿಸಿಕೊಂಡು ಉತ್ತಮ ಅಧ್ಯಯನ ಮಾಡಿ . ಬಹಳ ಚೆನ್ನಾಗಿ ಕಲಿತವರಿಗೆ ಯಾರು ಬೇಕಾದ್ರು ಕೆಲಸ ಕೊಡೋಕೆ ಮುಂದೆ  ಬರುತ್ತಾರೆ . ಇವತ್ತಿನ ದಿನಗಳಲ್ಲಿ ಯಾವುದೇ ಇಷ್ಟವಾದ ವಿಷಯ ಕಲಿಯೋಕೆ ಇಂಟರ್ನೆಟ್ ಇದ್ರೆ ಸಾಕು. ಜೊತೆಗೆ ನೀವು ಕೂಡ ಸ್ವಲ್ಪ ದುಡ್ಡು ಹಾಕಿ ಕಲಿಯಿರಿ . ಇದೆಲ್ಲ ನೀವು ನಿಮ್ಮ ಮೇಲೆ  ಮಾಡುತ್ತಾ ಇರುವ ಹೂಡಿಕೆ . ಮುಂದೆ ಒಂದು ದಿನ ಇದು ಸಾವಿರ ಪಟ್ಟು ಪ್ರತಿಫಲ ನೀಡುತ್ತದೆ. 

ಇಲ್ಲಿವರ್ಗು ಆಗಿರೋದು ಆಗಿದೆ , ಅದುನ್ನ ಬದಲಾಯಿಸೋಕೆ ಆಗಲ್ಲ . ಇನ್ನು ಮುಂದೆ ನಿಮಗೆ ಬೇಕಾಗಿರುವುದನ್ನ ಮಾಡುವ ಸ್ವಾತಂತ್ರ್ಯ  ಇದೆ . ಇವಾಗ ಮನಸ್ಸು ಕೂಡ ಸ್ವಲ್ಪ ಹದಕ್ಕೆ ಬಂದಿರುತ್ತೆ . ಗಟ್ಟಿ ನಿರ್ಧಾರ ಮಾಡಿ ಮುನ್ನುಗ್ಗಿ . ಪ್ರಾಮಾಣಿಕತೆ ಮತ್ತು ಶ್ರದ್ಧೆ ನಿಮ್ಮನ್ನು ಗುರಿ ಸೇರಿಸುತ್ತವೆ . ಪರೀಕ್ಷೆಯಲ್ಲಿ  ಪಾಸ್ ಆಗೋದು ನಿಮ್ಮ ಗುರಿ ಆಗಿರಬಾರದು , ನಿಜವಾದ ಜ್ಞಾನ ಸಂಪಾದನೆ ಮಾತ್ರ ನಿಮ್ಮನ್ನು ಉತ್ತಮ ಇಂಜಿನಿಯರ್ ಆಗಿಸುತ್ತದೆ . 

ಕಾಮೆಂಟ್‌ಗಳು

- Follow us on

- Google Search