ಕೊರೊನ ಕಾಲದ ಜೀವನ

ಏನು  ಕಷ್ಟ  ಗುರು  ಬ್ಯಾಚೆಲೊರ್ಸ್  ಲೈಫ್ . ಹೀಗಂತ ಹೇಳಿದ್ರೆ ಯಾರೂ ನಂಬಲ್ಲ . ನಂಬಿ ಏನು ಆಗಬೇಕಾಗಿದೆ , ದೇವರನ್ನೇ ನಂಬದೇ ಇರೋರು ಇದ್ದಾರೆ !!


ಈ ಕೊರೊನ ಶುರು  ಆಗಿದ್ದೇ  ಆಗಿದ್ದು , ಸಿಟಿಲಿ  ಇದ್ದೋರು ಊರಿಗೆ ಓಡಿ  ಹೋದ್ರು . ಎಲ್ಲಿಗೆ ಓಡಿ  ಹೋದ್ರೆ ಏನು ನಮ್ಮ ಕೆಲಸ ಏನು  ಕಡಿಮೆ ಇರುತ್ತಾ.  ವರ್ಕ್  ಅಂದ್ಮೇಲೆ ಹಾಗೇನೇ ಬಿಡಿ . ಮನೇಲಿ ಇದ್ರೂ ಒಂಥರಾ ಕಷ್ಟ , ಆಫೀಸ್ ಗೆ ಹೋಗಿ ಬರೋದು ಇನ್ನು ದೊಡ್ಡ ತಲೆನೋವು . ಯಾರಾದ್ರೂ  ಎಲ್ಲೇ ಆಗ್ಲಿ , ಎಷ್ಟು ಅಂತ ರೂಲ್ಸ್ ಫಾಲೋ ಮಾಡ್ತಾರೆ. ಏನೋ ನಾವು ಇನ್ನು ಬಚಾವ್ ಆಗಿ ಇರೋಕೆ ನಮ್ಮ ಭಾರತೀಯ ಜೀವನ ಶೈಲಿ ದೊಡ್ಡ ಕಾರಣ  ಅನ್ಸುತ್ತೆ . 

ಇವಾಗೇನೋ ಲಸಿಕೆ ಬಂದಿದೆ ಅಂತಿದಾರೆ, ಆದರೂ ಇನ್ನು ಒಂದು ವರ್ಷ ಇದೆ ಗತಿ  ಅನ್ಸುತ್ತೆ ನಮೆಗೆ. ಲಸಿಕೆ ಎಷ್ಟು ಪರಿಣಾಮಕಾರಿ ಅನ್ನೋದು ಬೇರೆ ವಿಚಾರ . ಸಧ್ಯಕ್ಕಂತೂ ಸ್ವಲ್ಪ ನಂಬಿಕೆ ವಿಶ್ವಾಸ ಬರ್ತಾ ಇದೆ ಎಲ್ಲರಿಗು. ನಮ್ಮ ವಿದ್ಯಾರ್ಥಿಗಳಂತೂ  ಕಂಗಾಲಾಗಿ ಹೋಗಿದಾರೆ ಬಿಡಿ. ಆರಾಮಾಗಿ ಪಾಸ್ ಆದೋರು ಒಂದ್ ಕಡೆ ಆದ್ರೆ , ಎಕ್ಸಾಮ್  ಬರಿಯೋರ್ದು ಇನ್ನೊಂದು ತರ ಚಿಂತೆ. ಇವೆಲ್ಲ ಅಡಚಣೆಗಳು ಆದಷ್ಟು ಬೇಗ ಮುಗಿದು ಹೋದ್ರೆ ಸಾಕು ಅನ್ನಿಸಿಬಿಟ್ಟಿದೆ. 

ಕಾಮೆಂಟ್‌ಗಳು

- Follow us on

- Google Search