ಹೊಸ ವರ್ಷ , ಹೊಸ ಹರ್ಷ

ಹೇಗೋ ಕಳೆದೆ ಹೋಯಿತು ಮತ್ತೊಂದು ವರ್ಷ. ಎಷ್ಟೋ ಕಷ್ಟಗಳನ್ನು ಎದುರಿಸಿ, ಸವಾಲುಗಳನ್ನು ಸ್ವೀಕರಿಸಿ , ಬೇರೆಯವರಿಗೆ ಸಹಾಯ ಮಾಡಿ, ಡಾಕ್ಟರ್ ಮುಂತಾದ ಕೊರೊನ ಕಾಲದ ಸೇನಾನಿಗಳಿಗೆ ಸಹಕರಿಸಿ, ಕೊರೊನ  ಅಂತ್ಯಕ್ಕೆ ಕಾದು ಕುಳಿತಿರುವ ಜನರಿಗೆ ವ್ಯಾಕ್ಸೀನ್ ಅಭಯ ಹಸ್ತ ನೀಡಿದೆ. 


ಪ್ರತಿ ವರ್ಷದಂತೆ ಈ ವರ್ಷವೂ ಹಲವಾರು ಯೋಜನೆಗಳು ಇಲ್ಲದೇ  ಇದ್ದರೂ , ಕಾಲದ ಸರಿಯಾದ ಉಪಯೋಗ ಪಡೆದುಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು . ಎಷ್ಟೋ ಜನ ಕೊರೊನ ಆರಂಭವಾದಾಗ , ಚಿಂತೆಗೀಡಾಗಿದ್ದರೂ ನಂತರದಲ್ಲಿ ಸಮಯಕ್ಕೆ ತಕ್ಕಂತೆ ತಮ್ಮ ಜೀವನಶೈಲಿ ರೂಪಿಸಿಕೊಂಡರು . ಯಾವುದೇ ರೀತಿಯ ಕಷ್ಟಗಳು ಎದುರಾದರೂ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದುಡಿಯುವ ಮಾಧ್ಯಮ ವರ್ಗದ ಮಾನಸಿಕ ಶಕ್ತಿ ಪ್ರತಿಯೊಬ್ಬರಿಗೂ ಮಾದರಿ. ಎಷ್ಟೋ ಜನ ಇಂದಿಗೂ ಕೇವಲ ಹಣಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕುಟುಂಬದ ಒಳಿತಿಗಾಗಿ ಹಗಲು ರಾತ್ರಿ ಎಂಬುದನ್ನು ಲೆಕ್ಕಿಸದೆ ಕಷ್ಟಪಟ್ಟು ದುಡಿಯುತ್ತಿದ್ದಾರೆ. 


ಸಾಕಷ್ಟು ಜನ ಕೆಲಸ ಬಿಟ್ಟು ಮನೆ ಕಡೆಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಹವ್ಯಾಸಗಳಲ್ಲಿ ಸಮಯ ಕೊಡುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಜನ ತಮ್ಮನ್ನು ತಾವೇ ಅರ್ಥ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ನಮಗೆ ಮಾತ್ರ ಕಷ್ಟಗಳು ಬಂದಿಲ್ಲ, ಬೀದಿ ನಾಯಿಗಳು ಕೂಡ ಆಹಾರವಿಲ್ಲದೆ ಸೊರಗಿದ್ದನ್ನು ನೀವು ಗಮನಿಸಿರಬಹುದು . ಪ್ರಕೃತಿ ತನ್ನನ್ನು ತಾನೆ  ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಮಾನವರಿಗೆ ದಿಟ್ಟ ಸಂದೇಶ  ರವಾನಿಸಲಾಗಿದೆ . ಏನೇ ಆದರೂ ಬದಲಾವಣೆ ಜಗದ ನಿಯಮ . ಎಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಮನಸ್ಥಿತಿ ಇದ್ದಾರೆ ಎಲ್ಲವೂ ಸಾಧ್ಯ. 


ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಷಯಗಳು

ಕಾಮೆಂಟ್‌ಗಳು

- Follow us on

- Google Search