ಕೆಮಿಸ್ಟ್ರಿ ವೈವಾ

ಇದು ನಾನು ಇಂಜಿನಿಯರಿಂಗ್ ಓದುವಾಗ ಮೊದಲನೇ ಸೆಮಿಸ್ಟರ್ ಅಲ್ಲಿ ನಡೆದ  ಘಟನೆ. ಕೆಮಿಸ್ಟ್ರಿ ಲ್ಯಾಬ್ ಅಂದರೆ ಸಾಕು, ಮಿಲಿಟರಿ ಕ್ಯಾಂಪ್ ಸೇರಿಕೊಂಡಂತೆ ಅನ್ನಿಸುತಿತ್ತು. ವಾರಕ್ಕೆ ಒಂದು ದಿನ ಲ್ಯಾಬ್ ಇರುತಿತ್ತು. ಈ ವಾರ ಮಾಡಬೇಕಾದ ಪ್ರಯೋಗಗಳಿಗೆ ಹಿಂದಿನ ವಾರವೇ ಡೆಮೋ ಕೊಡುತಿದ್ದರು. ಮುಂದಿನ ವಾರ ಬರುವಾಗ ಎಲ್ಲವನ್ನು ಓದಿಕೊಂಡು ವೈವಾಗೆ ತಯಾರಾಗಿ ಬರಬೇಕಿತ್ತು. ಹೀಗೆ ಎಲ್ಲಾ ಪ್ರಯೋಗಗಳನ್ನು ಮುಗಿಸಿ ಕೊನೆಯ ಪರೀಕ್ಷೆಗೆ ಚಿಟ್ಸ್ ಎತ್ತುವ ಮೂಲಕ ಅದೃಷ್ಟ ಪರೀಕ್ಷೆಯೊಂದಿಗೆ ಲ್ಯಾಬ್ ಎಕ್ಸಾಮ್ ಶುರುವಾಗುತಿತ್ತು. 

ಸ್ವಲ್ಪ ತಡವಾಗಿ ಬಂದರೂ ಬಾಯಿಗೆ ಬಂದಂತೆ ವಿದ್ಯಾರ್ಥಿಗಳಿಗೆ ಬಯ್ಯುವುದು, ಅತ್ತಿತ್ತ ನೋಡಿದರೆ ಮಾಲ್ ಪ್ರಾಕ್ಟೀಸ್ ಅಲ್ಲಿ ಬುಕ್ ಮಾಡ್ತಿನಿ ಎನ್ನುವ ಇಂಟರ್ನಲ್ ಲೆಕ್ಚರ್ ಆರ್ಭಟ ನೋಡಿ ಎಕ್ಸ್ಟರ್ನಲ್ ದಂಗಾಗಿ ಹೋಗಿದ್ದ. ನನಗೆ ಒಂದು ಟೈಟ್ರೇಷನ್ ಹಾಗು ಇನ್ನೊಂದು Coefficient of Viscosity ಬಂದಿತ್ತು. Experiment ಮಾಡಿ ರೀಡಿಂಗ್ ತೋರಿಸಿ ಸೈನ್ ಹಾಕಿಸಿಕೊಂಡ ನಂತರ ವೈವಾ ಪ್ರಶ್ನೋತರಕ್ಕೆ ಕರೆದರು. 

ಮೊದಲಿಗೆ ನಾಲ್ಕೈದು ಪ್ರಶ್ನೆಗಳನ್ನು ಕೇಳಿದರು. ನಾನು ಮೂರಕ್ಕೆ ಉತ್ತರಿಸಿದೆ. ನಂತರ ಅವರು "What are the applications of Coefficient of Viscosity ?" ಎನ್ನುವ ಪ್ರಶ್ನೆ ಕೇಳಿದರು. ನಾನು ಅದಕ್ಕೂ ಹಲವಾರು ಸೂಕ್ತ ಉತ್ತರಗಳನ್ನು ನೀಡಿದೆ. ಆದರೆ ಅವರ ಮನಸ್ಸಿನಲ್ಲಿದ್ದ ಉತ್ತರ ನಾನು ಹೇಳಲೇ ಇಲ್ಲ. ಅವರು "tell one more application" ಎಂದು ಹಾಗೆಯೇ ಕೇಳುತ್ತಲೇ ಹೋದರು. ನನ್ನ ತಲೆಗೆ ಮತ್ತೇನೂ ಹೊಳೆಯಲಿಲ್ಲ. ಅವರು "Think and answer" ಎಂದು ಹುರಿದುಂಬಿಸುವ ಯತ್ನ ಮಾಡಿದರು. 

ನಾನು ಸ್ವಲ್ಪ ಯೋಚಿಸಿ ಒಂದು ದ್ರವ ಪದಾರ್ಥದ Coefficient of Viscosity ಗೊತ್ತಿದ್ದರೆ ಅದನ್ನು ಉಪಯೋಗಿಸಿಕೊಂಡು ಇನ್ನೊಂದು ದ್ರವ ಪದಾರ್ಥದ Coefficient of Viscosity ಕಂಡುಹಿಡಿಯಬಹುದು ಎಂದೆ. ಅದೂ ಕೂಡ ಅವರಿಗೆ ಸಮಾಧಾನ ಆಗಲಿಲ್ಲ ಎನಿಸುತ್ತದೆ, ಮತ್ತೊಂದು ಹೇಳು ಅಂದರು. ನನಗೆ ಗೊತ್ತಿಲ್ಲ ಅಂದೆ. ಆದರೂ ಅವರು ಬಿಡಲಿಲ್ಲ . 

ಏನು ಹೇಳಬೇಕೋ ತಿಳಿಯದೆ "ಆಗ ಹೇಳಿದಂತೆ, ಒಂದು ದ್ರವ ಪದಾರ್ಥದ Coefficient of Viscosity ಗೊತ್ತಿದ್ದರೆ ಅದನ್ನು ಉಪಯೋಗಿಸಿಕೊಂಡು ಇನ್ನೊಂದು ದ್ರವ ಪದಾರ್ಥದ Coefficient of Viscosity ಕಂಡುಹಿಡಿಯಬಹುದು. ಈಗ ಕಂಡುಹಿಡಿದ Coefficient of Viscosity  ಇಂದ ಮತ್ತೊಂದು ದ್ರವ ಪದಾರ್ಥದ Coefficient of Viscosity ಕಂಡುಹಿಡಿಯಬಹುದು" ಎಂದೆ.😂

ಇಷ್ಟೇ ಹೇಳಿದ್ದು, ಅಲ್ಲಿಯವರೆಗೆ ಶಾಂತಮೂರ್ತಿ ಆಗಿದ್ದ External examiner ಉಗ್ರರೂಪ ತಾಳಿದರು. ಕಾಮನ್ ಸೆನ್ಸ್ ಇಲ್ವಾ ನಿಮಗೆ ಹೇಗೆ ಉತ್ತರ ಹೇಳ್ಬೇಕು ಅಂತ ಶುರು ಮಾಡಿ, ಈಗಿನ ಕಾಲದ ವಿದ್ಯಾರ್ಥಿಗಳ ಬಗ್ಗೆ ತಮಗಿದ್ದ ಅನಿಸಿಕೆಗಳನ್ನೆಲ್ಲಾ ಸಾಲು ಸಾಲಾಗಿ ಬೈದು ಸುಸ್ತಾದ ನಂತರ ನನಗೆ ಹೋಗುವಂತೆ ಸೂಚಿಸಿದರು. 😇

ಕಾಮೆಂಟ್‌ಗಳು

- Follow us on

- Google Search