ಇತ್ತೀಚೆಗೆ ನೋಡಿದ ಚಲನಚಿತ್ರಗಳು

ಇಂಜಿನಿಯರಿಂಗ್ ದಿನಗಳಿಂದ ಸಾಕಷ್ಟು ರೋಚಕ ಕಥೆಗಳಿರುವ ಚಲನಚಿತ್ರಗಳನ್ನು ಹುಡುಕಿ ಹುಡುಕಿ ನೋಡಿ ಅಭ್ಯಾಸವಾಗಿದೆ. ಹಾಗಾಗಿ ಹೆಚ್ಚಿನ ರೇಟಿಂಗ್ ಇರುವ ಸಾಕಷ್ಟು ಚಲನಚಿತ್ರಗಳನ್ನು ನೋಡಿ ಮುಗಿಸಿಯಾಗಿದೆ. ಟಿವಿ ಸರಣಿಗಳಿಗೆ ಹೋಲಿಸಿದರೆ ರೋಚಕ ಕಥೆಗಳನ್ನು ಹೊಂದಿರುವ ಚಲನಚಿತ್ರಗಳನ್ನು ನೋಡುವುದು ಬಹಳ ಆರಾಮದಾಯಕ. ಏಕೆಂದರೆ, ಒಂದು ಕಥೆ ಆರಂಭವಾಗಿ ಎರಡು ಮೂರು ಗಂಟೆಯ ಒಳಗೆ ಮುಗಿದುಹೋಗುತ್ತವೆ. ಹೀಗೆ ರೋಚಕ ಕಥೆಗಳಿರುವ ಚಲನಚಿತ್ರಗಳಿಗೆ ನನ್ನ ಹುಡುಕಾಟ ನಡೆಯುತ್ತಲೇ ಇರುತ್ತದೆ.

1. Gerald's Game 


ಆರಂಭದ ಐದು ನಿಮಿಷಗಳು ಮಾತ್ರ ಆರಾಮಾಗಿ ನೋಡಲು ಸಾಧ್ಯ. ಅಂತಿಮ ಘಟ್ಟದಲ್ಲಿ ಬರುವ ತಿರುವು ಸ್ವಲ್ಪ ಇಷ್ಟವಾಗಬಹುದೇ ಹೊರತು, ಬಹಳ ನಿಧಾನವಾಗಿ ಸಾಗುವ ಕಥೆಯಿದು. ಜೀವವನ್ನು ಕಾಪಾಡಿಕೊಳ್ಳಲು ಮಾನಸಿಕವಾಗಿ ಹಾಗು ದೈಹಿಕವಾಗಿ ಹೋರಾಡುವ ಸಂದರ್ಭವನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. 

2. The Woman In The Window


ಕಥೆ ಚೆನ್ನಾಗಿದೆ. ಹಲವು ರೋಚಕ ಕಥೆಗಳನ್ನು ಒಳಗೊಂಡ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಚಲನಚಿತ್ರ ನಿರ್ಮಿಸಿದಾಗ ಪುಸ್ತಕದಷ್ಟೇ ಜನಮನ್ನಣೆ ಗಳಿಸುವುದಿಲ್ಲ. ಹಾಗೆಯೇ ಅನ್ನಿಸಿತು ಇದನ್ನು ನೋಡಿದಾಗ. ಮನೋರೋಗದಿಂದ ಚಿಕಿತ್ಸೆಗೆ ಒಳಗಾಗಿರುವ ಹೆಂಗಸೊಬ್ಬಳು ತನ್ನ ಕಣ್ಣಾರೆ ಕಂಡ ಕೊಲೆಯನ್ನು ಸಾಬೀತುಪಡಿಸಲು ಹೆಣಗಾಡುವ ಸ್ಥಿತಿಯನ್ನು ಚಿತ್ರಕಥೆ ಒಳಗೊಂಡಿದೆ. ಒಂದು ಬಾರಿ ನೋಡಬಹುದಾದ ಉತ್ತಮ ಕಥೆಯನ್ನು ಹೊಂದಿರುವ ಚಿತ್ರ ಇದಾಗಿದೆ. 

ಕಾಮೆಂಟ್‌ಗಳು

- Follow us on

- Google Search